SPECIAL: ಅಪರೂಪದ ಖಗೋಳ ವಿದ್ಯಮಾನವೊಂದು ಮೇ 26ರಂದು ಸಂಭವಿಸುತ್ತಿದೆ. ಈ ವರ್ಷದ ಮೊದಲ ಚಂದ್ರಗ್ರಹಣ ಸಂಭಿವಿಸುತ್ತಿರುವ ಆ ದಿನ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ವಿದ್ಯಮಾನವೂ ಕಾಣಿಸಲಿದೆ. ಆದರೆ ಭಾರತದಲ್ಲಿ ಇದು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಗೋಚರವಾಗಲಿದೆ. ಚಂದ್ರನು ಭೂಮಿಯ ಸಮೀಪಕ್ಕೆ ಬಂದು ದೊಡ್ಡದಾಗಿ ಕಾಣಿಸುವ ವಿದ್ಯಮಾನವಾಗಿರುವ ಸೂಪರ ಮೂನ್. ಹಾಗೆಯೇ, ಚಂದ್ರನು ಭೂಮಿಯ ನೆರಳಿನಿಂದ ಆವೃತ್ತವಾಗಿ ಕೆಂಪಾಗಿ ಕಾಣಿಸುವುದು ರೆಡ್ ಬ್ಲಡ್ ಮೂನ್ ವಿದ್ಯಮಾನ. ಇವೆರಡೂ ಈ ಹುಣ್ಣಿಮೆಯ ದಿನ ಘಟಿಸಲಿವೆ. ಅಮೆರಿಕದ ಪಶ್ಚಿಮ ಕರಾವಳಿ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ಕರಾವಳಿಯಲ್ಲಿ ಈ ಅಪರೂಪದ ವಿದ್ಯಮಾನ ಕಾಣಿಸಲಿದೆ ಎಂದು ಪರೀಣಿತರು ತಿಳಿಸಿದ್ದಾರೆ.