ಈ ಕ್ಷಣ :

ಕೇವಲ 2 ರೂಪಾಯಿಗೆ ಸರ್ಜಿಕಲ್ ಮಾಸ್ಕ್: ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆಯ ವಿನೂತನ ಪ್ರಯತ್ನ

Published 15 ಮಾರ್ಚ್ 2023, 23:38 IST
Last Updated 6 ಮೇ 2023, 14:37 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

ವರದಿ : ಮಂಜುನಾಥ್ ಡಿ.

ಧಾರವಾಡ : ಮಾಸ್ಕ್ ಸದ್ಯ ಸಾರ್ವಜನಿಕ ಜೀವನದಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಕೊರೊನಾ ಮಾಹಾಮಾರಿ ವೈರಸ್ ತಡೆಯುದಕ್ಕೆ ಇದೊಂದು ಪ್ರಮುಖ ಅಸ್ತ್ರ ಅಂದರೆ ತಪ್ಪಾಗಲಾರದು, ಎನ್ 95, ಸರ್ಜಿಕಲ್ ಮಾಸ್ಕ್‌ಗಳು ವೈರಸ್ ತಡೆಯುವಲ್ಲಿ ಪರಿಣಾಮಕಾರಿಯಂದು ವೈದ್ಯರು, ತಜ್ಞರು ದೃಢಪಡಿಸಿದ್ದು, ಈಗ ಇದೇ ಮಾಸ್ಕ್‌ನ್ನು ಸಾರ್ವಜನಿಕರ ಕೈಗೆಟ್ಟುಕುವ ಹಾಗೂ ಸರಳವಾಗಿ ಸಿಗುವ ಹಾಗೇ ಮಾಡಲಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಯಂಗ್ ಇಂಡಿಯಾ ಸಂಸ್ಥೆಯ ವಿನೂತನ ಪ್ರಯತ್ನವು ಜಿಲ್ಲೆಯ ಜನತೆಯಿಂದ ಬಹುಪಾರಕ ಪಡೆದುಕೊಂಡಿದೆ.

ರಾಜ್ಯದಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೆ ಸೋಂಕು ಮಾತ್ರ ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರು ಇಂದು ಬಹುತೇಕ ಜನರು ಮಾಸ್ಕ್ ಧರಿಸುವುದರಲ್ಲಿ ನಿರ್ಲಕ್ಷ್ಯ ತೋರುತ್ತಿರುವದು ಹೆಚ್ಚಾಗುತ್ತಿದೆ. ಇದರ ಮಧ್ಯ ಈಗ ಮೂರನೇ ಅಲೆಯ ಮುನ್ಸೂಚನೆಗಳು ಕಂಡು ಬರುತ್ತಿದ್ದು, ಈ ಮಾಹಾಮಾರಿ ವೈರಸ್ ಕಟ್ಟಿಹಾಕುವ ದೃಷ್ಠಿಯಿಂದ, ರಾಜ್ಯದಲ್ಲಿ ಮೊದಲ‌ ಬಾರಿಗೆ ಸ್ವಯಂಚಾಲಿತ ಮಾಸ್ಕ್ ವೆಂಡಿಂಗ್ ಮಷಿನ್ ಅನುಷ್ಠಾನಕ್ಕೆ ಬಂದಿದೆ. ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಮಾಸ್ಕ್ ದೊರೆಯಬೇಕು ಸದುದ್ದೇಶದಿಂದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸಹಯೋಗದಲ್ಲಿ, ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ವಿತರಿಸುವ ಸ್ವಯಂಚಾಲಿತ 12 ಮಾಸ್ಕ್ ವೆಂಡಿಂಗ್ ಮಷೀನ್ ಗಳನ್ನು ಸ್ಥಾಪಿಸಿದ್ದಾರೆ.

"ಸ್ವಯಂಚಾಲಿತ ಮಾಸ್ಕ್ ವಿತರಣಾ ಯಂತ್ರಗಳನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರಗದ, ಜನನಿಬಿಡ ಸ್ಥಳಗಳಾದ ಎಪಿಎಂಸಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ್ ಮಾಹಾನಗರ ಪಾಲಿಕೆ ಆವರಣದ ಕಚೇರಿ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸ್ಥಾಪನೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 10 ರಿಂದ 15 ರೂಪಾಯಿಗೆ ದೊರೆಯುವ ಸರ್ಜಿಕಲ್ ಮಾಸ್ಕ್ ಗಳು, ಇಲ್ಲಿ ಕೇವಲ 2 ರೂಪಾಯಿಗೆ ದೊರೆಯಲಿದೆ. ಸಾರ್ವಜನಿಕರು 2 ರೂಪಾಯಿ ನಾಣ್ಯ ಮಾಸ್ಕ್ ವೆಂಡಿಂಗ್ ಮಷೀನ್ ಗೆ ಹಾಕಿದರೆ ಸಾಕು ಮಾಸ್ಕ್ ದೊರೆಯುತ್ತದೆ. ದೇಶದಲ್ಲಿ ಚೆನೈ ನಂತರ ಇಂತಹದ್ದೊಂದು ಪ್ರಯೋಗವನ್ನು ಹುಬ್ಬಳ್ಳಿಯ ಯಂಗ್ ಇಂಡಿಯಾ ಸಂಸ್ಥೆ ಅನುಷ್ಟಾನಗೊಳಿಸಿದೆ. 20 ಸಾವಿರ ರೂಪಾಯಿ ವೆಚ್ಚದ 12 ಕಡೆಗಳಲ್ಲಿ ಮಷಿನ್‌ಗಳನ್ನು ಅಳವಡಿಸಲಾಗಿದೆ.

ಇನ್ನೂ ಈ ಸ್ವಯಂ ಚಾಲಿತ ವೆಂಡಿಂಗ್ ಮಷಿನ್ ಕಾರ್ಯ ಹೇಗೆರುತ್ತದೆ..?

ಇದು ಒಂದು ರೀತಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸ್ಥಾಪಿತವಾಗಿರುವ ಶುದ್ಧ ಕುಡಿಯಿವ ನೀರಿನ ಘಟಕ ಹೇಗೆ ಕಾರ್ಯ ನಿರ್ವಹಿಸುತ್ತದೆಯೋ, ಅದೇ ರೀತಿ ಈ ಯಂತ್ರವ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಎರಡು ರಿಂದ ಐದು ರೂಪಾಯಿ ಮಷಿನ್ ಒಳಗೆ ಹಾಕಿದ್ದರೆ ನೀರು ಬರುತ್ತದೆ. ಇಲ್ಲಿ ಎರಡು ರೂಪಾಯಿ ಹಾಕಿದ್ದರೆ ಯುಸ್ ಆ್ಯಂಡ್ ತ್ರೋ ಸರ್ಜಿಕಲ್ ಮಾಸ್ಕ್ ಬರುತ್ತದೆ. ಅತ್ಯಂತ ಕಡಿಮೆ ಬೆಲೆ ಇಲ್ಲಿ ಮಾಸ್ಕ್ ನೀಡಲಾಗುತ್ತಿದೆ. ವೈರಸ್ ತಡೆಗೆ ಯಂಗ್ ಇಂಡಿಯಾ ಸಂಸ್ಥೆಯು ಈ ವಿನೂತನ ಪ್ರುತ್ನದಿಂದ, ಸಾರ್ವಜನಿಕರಿಗೆ ಸಹಕಾರವಾಗಿದ್ದು, ಬಟ್ಟೆ ಮಾಸ್ಕ್ ಹಾಕಿಕೊಂಡ ಬರುವ ಜನರು ಸೇರಿದಂತೆ ಮಾಸ್ಕ್ ಮರೆತು ಬರುವ ಜನರು ಇಲ್ಲಿ ಎರಡು ರೂಪಾಯಿ ಅಳವಡಿಸಿ ಮಾಸ್ಕ್‌ಗಳನ್ನು ಪಡೆದುಕೊಳ್ಲುತ್ತಿದ್ದಾರೆ.

ಒಂದು ಮಷಿನಲ್ಲಿ 100 ಮಾಸ್ಕ್‌ಗಳನ್ನು ದಿನ ಒಂದಕ್ಕೆ ಹಾಕಲಾಗುತ್ತದೆ. ಹೀಗೆ ನಗರದಲ್ಲಿ ಸ್ಥಾಪಿಸಲಾಗಿರುವ ಪ್ರತಿಯೊಂದು ಮಷಿನಗೆ ಯಂಗ್ ಇಂಡಿಯಾ ಸಂಸ್ಥೆಯ ಸದಸ್ಯರು, ಪ್ರತಿದಿನ ಬಂದು ಮಾಸ್ಕ್‌ಗಳನ್ನು ಅಳವಡಿಸುತ್ತಿದ್ದಾರೆ. ದಿನವೊಂದಕ್ಕೆ ಸುಮಾರು 900 ರಿಂದ 1000 ಮಾಸ್ಕ್‌ಗಳನ್ನು ಸಾರ್ವಜನಿಕರು ಈ ಮಷಿನಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಈ ಮಷಿನ್ ವಿದ್ಯುತ್ ಚಾಲಿತವಾಗಿದೆ.

ಒಟ್ಟಾರಿಯಾಗಿ ಯಂಗ್ ಇಂಡಿಯಾ ಹಾಗೂ ಮಹಾನಗರ‌ ಪಾಲಿಕೆಯ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕರು ಶಭಾಷಗಿರಿ ನೀಡುತ್ತಿದ್ದು, ವೈರಸ್ ತಡೆಯಲು ಸಾರ್ವಜನಿಕರು ಮಾಸ್ಕ್ ಧರಿಸಿ ಓಡಾಟ ಮಾಡಬೇಕು ಎಂಬುವುದು ಮುಖ್ಯ ಉದೇಶವಾಗಿದೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45