SPECIAL:
ಪ್ರಾಚೀನ ದಕ್ಷಿಣ ಭಾರತದ ರಾಜವಂಶದ ವಾಸ್ತುಶಿಲ್ಪದ ಅದ್ಭುತಯನ್ನು ಹೊಂದಿರುವ ಕರ್ನಾಟಕದ ಐತಿಹಾಸಿಕ ಸ್ಮಾರಕಗಳಲ್ಲಿ ಬೀದರ್ ಕೋಟೆ ಕೂಡ ಒಂದು. ಈ ಬೃಹತ್ ಕೋಟೆಯ ಇತಿಹಾಸವನ್ನು ಕೇಳಲು ತುಂಬಾ ರೋಮಾಂಚನಕಾರಿ ಎನಿಸುತ್ತದೆ. ಇಲ್ಲಿ ಚಾಣಕ್ಯರು, ಕಾಕತೀಯರು, ಸಾತವಾಹನರು ಮತ್ತು ಯಾದವರು ಸೇರಿದಂತೆ ಹಲವಾರು ರಾಜವಂಶದವರು ಆಳಿದ್ದಾರೆ.
ಬೀದರ್ ಕೋಟೆಯು ಬೀದರ್ ನ ಪೂರ್ವ ಭಾಗದಲ್ಲಿದೆ. ಈ ಕೋಟೆಯೊಳಗೆ ಅರಮನೆಗಳು, ಮಸೀದಿಗಳು ಮತ್ತು ದೊಡ್ಡದಾದ ಬಂಡೆಯಿಂದ ನಿರ್ಮಿಸಲಾದ ಇತರ ಕಟ್ಟಡಗಳ ಅವಶೇಷಗಳನ್ನು ಹೊಂದಿದೆ. ಕೋಟೆ ಗೋಡೆಗಳನ್ನು ನಿರ್ಮಿಸಲು ಕಲ್ಲು ಮತ್ತು ಗಾರೆ ಬಳಸಲಾಗಿದೆ. ಆಗ್ನೇಯದಿಂದ ಮೂರು ಗೇಟ್ ವೇಗಳಿಂದ ಅಂಕುಡೊಂಕಾದ ಮಾರ್ಗದಿಂದ ಕೋಟೆಯನ್ನು ಪ್ರವೇಶಿಸಲಾಗುವುದು. ಪ್ರವೇಶ ದ್ವಾರವು ಎತ್ತರದ ಗುಮ್ಮಟವನ್ನು ಹೊಂದಿದೆ. ಅದರ ಒಳ ಭಾಗವನ್ನು ಗಾಢ ಬಣ್ಣಗಳಲ್ಲಿ ಚಿತ್ರಿಸಲಾಗಿದೆ. ಈ ಕೋಟೆ ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಈ ಕೋಟೆಯಲ್ಲಿ ಪೋಟೋ ಗ್ರಾಫಿಗೆ ಅನುಮತಿ ನೀಡಲಾಗಿದೆ. ಹಾಗಾಗಿ ಫೋಟೋಗ್ರಾಫರ್ ಗೆ ಇದು ಸೂಕ್ತವಾದ ಸ್ಥಳವಾಗಿದೆ.
ಬೀದರ್ 14ನೇ ಶತಮಾನದಲ್ಲಿ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬೀದರ್ ಕೋಟೆಯನ್ನು ಅಹ್ಮದ್ ಷಾ ವಾಲಿ ಬಹ್ಮಾನ್ ನಿರ್ಮಿಸಿದ್ದಾರೆ. ಬಳಿಕ ಈ ಕೋಟೆಯನ್ನು 15ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಷಾ-1 ನವೀಕರಿಸಿದನು. ಏಕೆಂದರೆ ಅವನು ತನ್ನ ರಾಜಧಾನಿಯನ್ನು ಕಲಬುರಗಿ(ಗುಲ್ಬರ್ಗಾ)ದಿಂದ ಬೀದರ್ ಗೆ ಸ್ಥಳಾಂತರಿಸಿದನು.
ಬೀದರ್ ಕೋಟೆ ಬೆಂಗಳೂರಿನಿಂದ 700ಕಿ.ಮೀ ದೂರದಲ್ಲಿದೆ. ಬೀದರ್ ವಿಮಾನ ನಿಲ್ದಾಣ ಬೀದರ್ ಕೋಟೆಯಿಂದ 11ಕಿ.ಮೀ ದೂರದಲ್ಲಿದೆ. ಹಾಗೇ ಬೀದರ್ ರೈಲು ನಿಲ್ದಾಣ ಬೀದರ್ ಕೋಟೆಯಿಂದ 150 ಕಿ.ಮೀ ದೂರದಲ್ಲಿದೆ. ಅಲ್ಲದೇ ಬೀದರ್ ತಲುಪಲು ಬೆಂಗಳೂರಿನಿಂದ ಬಸ್ಸುಗಳು ಮತ್ತು ರೈಲುಗಳು ಇವೆ.