SPECIAL:
ಕೋಲಾರ: ಬರದ ಜಿಲ್ಲೆಯೆಂದು ಗುರ್ತಿಸಿಕೊಂಡಿರುವ ಬರದ ನಾಡು ಕೋಲಾರ ಇಂದು ಮಳೆನಾಡಾದ ಮಡಿಕೇರಿಯಾಗಿ ಪರಿವರ್ತನೆಗೊಂಡಿದೆ.
ದಕ್ಷಿಣದ ಕಾಶಿ ಅಂತಾನೇ ಕರೆಯಲ್ಪಡುವ ಅಂತರಗಂಗೆ ಬೆಟ್ಟದಲ್ಲೀಗ ನೀರಿನ ಕಲರವ. ಜಲಪಾತದ ಸೊಗಸಿನ ಅನುಭವ. ಪ್ರವಾಸಿಗರಿಗೆ ಸಖತ್ ಖುಷಿ. ಕಳೆದ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಕೆರೆ, ಕಾಲುವೆಗಳೆಲ್ಲ ತುಂಬಿ ಹರಿಯುತ್ತಿವೆ. ಸಪ್ತರ್ಷಿಗಳ ಬೆಟ್ಟದಲ್ಲಿ ಫಾಲ್ಸ್ ನಿರ್ಮಾಣವಾಗಿ ರಮಣೀಯವಾಗಿ ಕಾಣಿಸುತ್ತಿದೆ. ಈ ಅದ್ಭುತ ಪ್ರಕೃತಿಯ ಸೌಂದರ್ಯದ ಜಲ ನೋಡುಗರ ಕಣ್ಣು ಕುಕ್ಕುವಂತಿದೆ.
ಹಾಲಿನ ನೊರೆಯಂತೆ ಮೈತುಂಬಿ ಹರಿಯುವ ನೀರು, ಜುಳು ಜುಳು ಗಂಗೆಯ ನಿನಾದ, ಜಲಪಾತದ ಸೊಬಗು ಇದೆಲ್ಲವನ್ನೂ ಕಣ್ಣು ತುಂಬಿಸಿಕೊಳ್ಳಲು ಬಂದ ಪ್ರವಾಸಿಗರು ತಮ್ಮ ಮೊಬೈಲ್ ಗಳಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತೋಷ ಪಡುತ್ತಿದ್ದಾರೆ.