ಈ ಕ್ಷಣ :

<strong>ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್’</strong>

Published 16 ಮಾರ್ಚ್ 2023, 14:25 IST
Last Updated 5 ಮೇ 2023, 00:55 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

‘ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್’ ಪೂರ್ಣಚಂದ್ರ ತೇಜಸ್ವಿ ಬರೆದಿರುವ ಈ ಕೃತಿಯನ್ನು ಪ್ರವಾಸ ಸಾಹಿತ್ಯವೆನ್ನಬೇಕೊ, ಆತ್ಮಚರಿತ್ರೆಯೆನ್ನಬೇಕೊ ಅಥವ ಅದ್ಭುತ ಮಾಹಿತಿಗಳನ್ನೊಳಗೊಂಡ ಪುಸ್ತಕವೆನ್ನಬೇಕೊ ಅಥವಾ ಜನಪ್ರಿಯತೆಯ ತುತ್ತತುದಿಯನ್ನು ಮುಟ್ಟಿದ ಒಂದು ಮನರಂಜನಾತ್ಮಕ ಸಾಹಿತ್ಯವೆನ್ನಬೇಕೊ ಎಂಬುದನ್ನು ನಿರ್ಧರಿಸುವುದು ತೀರ ಕಷ್ಟದ ಕೆಲಸ.

ಪೂರ್ಣಚಂದ್ರ ತೇಜಸ್ವಿಯವರ ವಿಶೇಷತೆಯೇ ಇದು. ಅವರ ಯಾವೊಂದು ಬರಹವೂ ನಿಮಗೆ ಓದಲು ಬೇಸರ ತರಿಸಲಾರದು. ಒಂದು ಪುಟ ಓದಿದರೆ ಇಡೀ ಪುಸ್ತಕವನ್ನು ಓದಿ ಮುಗಿಸುವವರೆಗೂ ನೀವು ಆ ಪುಸ್ತಕವನ್ನು ಬದಿಗಿರಿಸಲಾರಿರಿ, ಅಷ್ಟರ ಮಟ್ಟಿಗೆ ಆ ಕೃತಿ ನಿಮ್ಮನ್ನು ಹಿಡಿದಿರಿಸಿಕೊಳ್ಳುತ್ತದೆ. ಹಾಗೆ ನೋಡಿದರೆ ಈ ರೀತಿ ಓದಿಸಿಕೊಂಡು ಹೋಗುವ ಗುಣವಿರುವುದು ಕತೆ ಕಾದಂಬರಿಗಳಿಗೆ ಮಾತ್ರ. ಆದರೆ ತೇಜಸ್ವಿ ಯವರ ವಿಶಿಷ್ಟ ಬರವಣಿಗೆಯ ಶೈಲಿಯಿಂದಾಗಿ, ಈ ಎರಡು ಪ್ರಾಕಾರಗಳಿಂದ ಹೊರತಾದ ಪ್ರವಾಸ ಸಾಹಿತ್ಯವೂ ಸಹ ನಮ್ಮನ್ನು ಅಷ್ಟೇ ಗಾಢವಾಗಿ ಆಕರ್ಷಿಸುತ್ತದೆ.

ನಾವು ತೇಜಸ್ವಿಯ ಅಲೆಮಾರಿಯ ಅಂಡಮನ್ ಕೃತಿಯನ್ನು ಒಂದು ಪ್ರವಾಸ ಸಾಹಿತ್ಯವೆಂದೇ ಕರೆಯೋಣ. ಆದರೆ ನಾವು ಇತರೆ ಸಾಹಿತಿಗಳ ಪ್ರವಾಸ ಸಾಹಿತ್ಯದಲ್ಲಿ ನೋಡುವಂತೆ, ಇವರ ಪ್ರವಾಸ ಕೃತಿಯಲ್ಲಿ ಒಂದೇ ಒಂದು ಪ್ರವಾಸಿ ತಾಣಗಳ ಪರಿಚಯವನ್ನು ಕಾಣಲು ಸಾಧ್ಯವಿಲ್ಲ. ಆದರೆ ಅವರು ಯಾವುದೇ ತಾಣಗಳ ಬಗ್ಗೆ ಬರೆದಿರಲಿ, ನಮಗೆ ಆ ತಾಣವನ್ನು ವೀಕ್ಷಿಸಬೇಕೆಂಬ ಬಯಕೆಯನ್ನು ತೇಜಸ್ವಿ ಕೃತಿ ಹುಟ್ಟುಹಾಕುತ್ತದೆ. ತೇಜಸ್ವಿಯ ಅಲೆಮಾರಿಯ ಅಂಡಮನ್ ಪ್ರವಾಸ ಸಾಹಿತ್ಯವನ್ನು ನೀವು ಒಂದು ಬಾರಿ ಓದಿದರೂ ಸಾಕು, ಖಂಡಿತ ನಿಮಗೆ ಒಮ್ಮೆಯಾದರೂ ಅಂಡಮಾನ್ ಪ್ರವಾಸ ಮಾಡಲೇಬೇಕು ಎಂಬ ತುಡಿತ ಕಾಡದೆ ಇರದು!

ಅಲೆಮಾರಿಯ ಅಂಡಮನ್ ಕೃತಿಯಲ್ಲಿ ತೇಜಸ್ವಿ ಅಲ್ಲಿನ ಯಾವುದೇ ನೋಡತಕ್ಕಂಥ ಐತಿಹಾಸಿಕ ಸ್ಥಳಗಳ ಪಟ್ಟಿಮಾಡಿ ಹೇಳಿಲ್ಲ. ಅವರಈ ಕೃತಿಯಲ್ಲಿ ತೇಜಸ್ವಿ ಅಂಡಮಾನ್​ನಲ್ಲಿ ಏನು ಮಾಡಿದರು ಎಂದು ಯಾರಾದರೂ ಕೇಳಿದರೆ, ಅವರು ಅಲ್ಲಿ ರೀಲು ರಾಡು ಹಿಡಿದು ಮೀನು ಹಿಡಿದರು ಎಂದು ಹೇಳಬೇಕಾಗುತ್ತದೆ! ಆದರೆ ಸ್ವಾರಸ್ಯವಿರುವುದು ಮೀನು ಹಿಡಿಯುವುದರಲ್ಲಲ್ಲ, ಮೀನು ಹಿಡಿಯುವಾಗಿನ, ಅದರ ನಂತರದ, ಅದರ ಜೊತೆಜೊತೆಗೆ ಗಾಳಕ್ಕೆ ಸಿಕ್ಕ ಇತರ ಸಮುದ್ರ ಜೀವಿಗಳ ಬಗ್ಗೆ ಸಿಗುವ ಬಗ್ಗೆ ಅವರು ಬರೆಯುವ ಶೈಲಿಯಲ್ಲಿ! ಅವರು ಇದರಲ್ಲಿ ಕೊಡುವ ಮಾಹಿತಿ ಬರೀ ಸಮುದ್ರ ಜೀವಿಗಳ ಬಗ್ಗೆಯಷ್ಟೇ ಅಲ್ಲ, ಅಂಡಮಾನ್ ರಾಜಧಾನಿ ಪೋರ್ಟ್​ಬ್ಲೇರ್, ಅದರ ಒಳಗಿನ ಸಣ್ಣ ಪುಟ್ಟ ದ್ವೀಪಗಳಾದ ಮಾಯಾಬಂದರ್, ರಂಗೂನ್, ಲಾಂಗ್ ಐಲೆಂಡ್ ಮುಂತಾದವುಗಳ ಬಗ್ಗೆ, ಅಲ್ಲಿನ ವ್ಯವಸ್ಥೆಯ ಬಗ್ಗೆ, ಅಲ್ಲಿನ ವಸತಿಯ ಬಗ್ಗೆ ಹೀಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ಕೊಡುತ್ತ ಹೋಗುತ್ತಾರೆ. ಇಂಥ ಮಾಹಿತಿ ಕೊಡುತ್ತಲೇ ಅಲ್ಲಿ ನಡೆಯುವ ಘಟನೆಗಳನ್ನು ತಮಾಷೆಯಾಗಿ ಬರೆಯುವುದು ಬಹುಶಃ ತೇಜಸ್ವಿಯವರಿಗೆ ಮಾತ್ರ ಸಾಧ್ಯವೇನೊ.

ತೇಜಸ್ವಿ ತಮ್ಮ ಬರವಣಿಗೆಯಲ್ಲಿ ಸ್ನೇಹಿತರಾದ ರಾಮದಾಸ್, ಮಲ್ಲಿಕ್ ಹಾಗೂ ತಮ್ಮ ಸಹಧರ್ಮಿಣಿ ರಾಜೇಶ್ವರಿ ಮುಂತಾದವರನ್ನೂ ಎಳೆತರುತ್ತಾರೆ. ಅವರುಗಳ ನಡುವ ನಡೆಯುವ ಪ್ರತಿಯೊಂದು ಘಟನೆಯನ್ನೂ ಎಷ್ಟೊಂದು ತಮಾಷೆಯಾಗಿ ವರ್ಣಿಸುತ್ತಾರೆಂದರೆ, ಓದುಗರೂ ಸಹ ತೇಜಸ್ವಿಯವರ ಆ ಪ್ರವಾಸದಲ್ಲಿ ಅವರ ಜೊತೆಗಾರರೇ ಆಗಿಬಿಡುತ್ತಾರೆ!

ಅಂಡಮಾನ್ ಪ್ರವಾಸ ಕಥನ ಎಂದರೆ ಬರಿ ಅಂಡಮಾನಿನಲ್ಲಿ ನಡೆದ ಘಟನೆಗಳಷ್ಟೇ ಸೀಮಿತವಾಗದೆ, ಅಲ್ಲಿಗೆ ಹೋಗುವಾಗ ಬರುವಾಗ ಹಡಗಿನಲ್ಲಿ, ವಿಮಾನದಲ್ಲಿ, ಏರ್​ಪೋರ್ಟ್​ನಲ್ಲಿ, ಬಂದರಿನಲ್ಲಿ ಹೀಗೆ ಪ್ರತಿಯೊಂದು ಸ್ಥಳದ ಘಟನೆಗಳ ಬಗ್ಗೆಯೂ ತೆರೆದುಕೊಳ್ಳುತ್ತ ಹೋಗುತ್ತದೆ. ಇಂಥಹ ವಿಭಿನ್ನ ಪ್ರವಾಸ ಸಾಹಿತ್ಯ ಬಹುಶಃ ಪ್ರಪಂಚದಲ್ಲಿ ತೇಜಸ್ವಿಯನ್ನು ಬಿಟ್ಟರೆ ಬೇರೆ ಯಾರೂ ಬರೆದಿರಲು ಸಾಧ್ಯವಿಲ್ಲ ಎಂಬ ಭಾವನೆ ಅಲೆಮಾರಿಯ ಅಂಡಮನ್ ಓದಿದ ನಂತರ ನಮಗೆ ಬರದೆ ಇರದು.

ಇದೇ ಪುಸ್ತಕದಲ್ಲಿ ತೇಜಸ್ವಿ ಮಹಾನದಿ ನೈಲ್ ಬಗ್ಗೆಯೂ ಸಹ ಬರೆದಿದ್ದಾರೆ. ನೈಲ್​ನದಿಯ ಬಗ್ಗೆ ಬರೆಯುವುದು ಇತರ ನದಿಗಳ ಬಗ್ಗೆ ಬರೆದಷ್ಟು ಸುಲಭವಲ್ಲ ಎಂದೇ ಈ ನದಿಯ ಬಗೆಗಿನ ಬರವಣಿಗೆಯನ್ನು ಶುರುಮಾಡುವ ತೇಜಸ್ವಿ, ಇದರಲ್ಲಿ ನೈಲ್ ನದಿಯ ವಿಸ್ತೀರ್ಣದಿಂದ ಹಿಡಿದು, ಆಳ ಅಗಲ, ಅದರ ವಿಶೇಷತೆ ಎಲ್ಲವನ್ನೂ ಹೇಳುತ್ತ ಹೋಗುತ್ತಾರೆ. ಮಳೆಯ ನೀರಿನಿಂದಲೇ ಉಗಮಿಸಿ ನದಿ, ಬೆಟ್ಟಗಳ ತಪ್ಪಲುಗಳಿಂದ ತೊಟ್ಟಿಕ್ಕಿ ಚಿಕ್ಕ ಝರಿಯಾಗಿ ಹರಿದು ಹಳ್ಳಕೊಳ್ಳಗಳನ್ನು ಸೇರಿ, ಹಳ್ಳವಾಗಿ, ನದಿಯಾಗಿ, ಕೊನೆಗೆ ಮಹಾನದಿಯಾಗಿ ಮೆಡಿಟರೇನಿಯನ್ ಸಮುದ್ರಕ್ಕೆ ಸೇರುವ ನೈಲ್ ನದಿ ಎಂದು ಆರಂಭದಲ್ಲೇ ಆ ಮಹಾನದಿಯ ಉಗಮದ ಬಗ್ಗೆ ನಮಗೆ ಹೇಳುತ್ತಾ ಸಾಗುತ್ತಾರೆ. ಕಗ್ಗತ್ತಲೆಯ ಖಂಡ ಆಫ್ರಿಕಾದ ನಟ್ಟ ನಡುವಿನಿಂದ ಹುಟ್ಟಿ ಆಫ್ರಿಕಾದ ಭಯಂಕರ ಮರಳುಗಾಡಿನ ನಡುವೆ ಹರಿಯುತ್ತಾ ಸಾಗುವ ಈ ನದಿ ಮನುಷ್ಯನ ಇತಿಹಾಸದಲ್ಲಿ ಒಂದು ಚಿರಸ್ಥಾಯಿಯಾಗಿ ಸ್ಥಾನ ಪಡೆದ ನದಿಯೆಂದು ಇದರ ಬಗ್ಗೆ ವಿವರಣೆ ನೀಡುತ್ತಾರೆ.

ಈಜಿಪ್ಟಿನ ನಾಗರಿಕತೆಗೆ ಜೀವದಾಯಿನಿಯಾದ ಈ ನದಿ ಎಲ್ಲಿಂದ ಹುಟ್ಟಿತು ಎಂಬುದು ಎಷ್ಟೋ ವರ್ಷಗಳ ಕಾಲ ಯಾರಿಗೂ ತಿಳಿದಿರಲಿಲ್ಲ ಎಂಬುದನ್ನು ಹೇಳುವ ತೇಜಸ್ವಿಯವರ ಸಾಲುಗಳು ಅಚ್ಚರಿ ಹುಟ್ಟಿಸುತ್ತವೆ. ಕ್ರಿಸ್ತಪೂರ್ವ 460ರಲ್ಲೇ ಹಿರೋಡೋಟಸ್ ಎನ್ನುವ ಅನ್ವೇಷಕ ಈಗಿನ ಅಸ್ವಾನ್ ಅಣೆಕಟ್ಟೆಯವರೆಗೂ ಇದರ ಅನ್ವೇಷಣೆಯನ್ನು ಮಾಡಿದ್ದ. ಆದರೆ ಅಲ್ಲಿಂದ ಮುಂದೆ ನೈಲ್ ನದಿಯನ್ನು ಹಿಂಬಾಲಿಸಲಾರದೆ ಹಿಂದಿರುಗಿದ್ದ ಎಂಬಂಥ ಹತ್ತು ಹಲವು ಆಸಕ್ತಿದಾಯಕ ವಿಷಯಗಳನ್ನು ತೇಜಸ್ವಿ ಇದರಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ಚಕ್ರವರ್ತಿ ನೀರೋ ಸಹ ಈ ನೈಲ್ ನದಿಯ ಬಗ್ಗೆ ತಿಳಿದುಕೊಳ್ಳಲು ಆಸಕ್ತನಾಗಿದ್ದ ಎಂಬ ಆಸಕ್ತಿದಾಯಕ ವಿಷಯವನ್ನೂ ಸಹ ತೇಜಸ್ವಿ ನಮ್ಮ ಮುಂದೆ ಬಿಚ್ಚಿಡುತ್ತಾರೆ. ಈ ನದಿಯ ಮೂಲವನ್ನು ಸಂಶೋಧಿಸಲು ನೀರೊ ಕೆಲವರನ್ನು ಕಳುಹಿಸಿದ್ದ ಎಂಬ ಮಾಹಿತಿಯನ್ನು ತೇಜಸ್ವಿ ನೀಡುತ್ತಾರೆ. ಹೀಗೆ ನೈಲ್ ನದಿಯ ಪ್ರತಿಯೊಂದು ಮಗ್ಗುಲನ್ನೂ ನಮಗೆ ಪರಿಚಯಿಸುವ ತೇಜಸ್ವಿ ಅದರೊಂದಿಗೆ ಆಗಿನ ಕಾಲದ ಪ್ರತಿಯೊಂದು ಸಮಕಾಲಿನ ಇತಿಹಾಸವನ್ನು ನಮ್ಮ ಮುಂದೆ ಬಿಚ್ಚಿಡುವುದು ಈ ಕೃತಿಯ ವಿಶೇಷತೆಯನ್ನು ಸಾವಿರ ಪಟ್ಟು ಹೆಚ್ಚಿಸುತ್ತದೆ.

ಓಂಪ್ರಕಾಶ್ ನಾಯಕ್, ಹಿರಿಯ ಉಪ ಸಂಪಾದಕ, BMG24x7ಲೈವ್​ಕನ್ನಡ  


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45