36 ಲಕ್ಷ ಹಣ ಪಡೆದು ಪರಾರಿ; ಮದುವೆಯಾಗುವುದಾಗಿ ಉದ್ಯಮಿಯನ್ನು ನಂಬಿಸಿ ವಂಚಿಸಿದ ಯುವತಿ

36 ಲಕ್ಷ ಹಣ ಪಡೆದು ಪರಾರಿ; ಮದುವೆಯಾಗುವುದಾಗಿ ಉದ್ಯಮಿಯನ್ನು ನಂಬಿಸಿ ವಂಚಿಸಿದ ಯುವತಿ
ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಉದ್ಯಮಿಯೊಬ್ಬರಿಗೆ 36 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪ‌ ಬೆಳಕಿಗೆ ಬಂದಿದೆ. ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌‌. ಉದ್ಯಮಿ ಅನಂತ್ ಮಲ್ಯ ಎಂಬುವರು ಮೋಸಹೋದ ಉದ್ಯಮಿಯಾಗಿದ್ದಾರೆ. ಕ್ವಾನ್'ಟೇಕ್ ಕನ್ಸಲ್ಟೆನ್ಸಿ ಕಂಪನಿಯ ಸಿಇಒ ಆಗಿರುವ ಅನಂತ್ ಮಲ್ಯರಿಗೆ 2019 ರ ಜೂನ್​ನಲ್ಲಿ ಯುವತಿಯೊಬ್ಬಳು ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೇಮ‌ ಅಂಕುರವಾಗಿತ್ತು. ಮದುವೆ ಆಗುತ್ತೇನೆ ಅಂತ ನಂಬಿಸಿದ್ದ ಯುವತಿ ಸೈಟ್ ತಗೋಬೇಕು ಅಂತ ಹೇಳಿ ಮಲ್ಯ ಬಳಿ ಹಂತ ಹಂತವಾಗಿ 36.22 ಲಕ್ಷ ಹಣ ಪಡೆದಿದ್ದಳು. ಹಣ ಪಡೆದ ನಂತರ ಮಲ್ಯ ಅವರನ್ನು ದೂರ ಮಾಡಲು ಶುರು ಮಾಡಿದ್ದಾಳೆ. ಇಬ್ಬರ ನಡುವೆ ಜಗಳ ನಡೆದು ಕೊಟ್ಟ ಹಣವನ್ನು ವಾಪಸ್ಸು ಕೊಡಿ ಎಂದು ಕೇಳಿದ್ದಾರೆ. 36 ಲಕ್ಷ ಹಣದಲ್ಲಿ 6.90 ಲಕ್ಷ ಹಣವನ್ನು ಯುವತಿ ವಾಪಸ್ ಕೊಟ್ಟಿದ್ದಳು. ಉಳಿದ ಹಣ ಕೊಡದೇ ಪರಾರಿಯಾಗಿದ್ದಳು. ನೊಂದ ಉದ್ಯಮಿ ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಐಪಿಸಿ 406 ಹಾಗೂ 420 ಅಡಿಯಲ್ಲಿ ದೂರು ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.