ಟಿ20 ಕ್ರಿಕೆಟ್ ಪಂದ್ಯದಲ್ಲಿ ದಾಖಲೆಯ 501 ರನ್!

ಟಿ20 ಕ್ರಿಕೆಟ್ ಪಂದ್ಯದಲ್ಲಿ ದಾಖಲೆಯ 501 ರನ್!

ಪಾಚೆಫ್‌ಸ್ಟ್ರೂಮ್: ದಕ್ಷಿಣ ಆಫ್ರಿಕಾ ದೇಶೀಯ ಟಿ20 ಟೂರ್ನಿಯಲ್ಲಿ ಟೈಟನ್ಸ್‌ ಮತ್ತು ನೈಟ್ಸ್‌ ತಂಡಗಳ ನಡುವಣ ಸೋಮವಾರ ನಡೆದ ಪಂದ್ಯದಲ್ಲಿ ದಾಖಲೆಯ 501 ರನ್‌ ಹರಿದುಬಂದಿದೆ.

ಮೊದಲು ಬ್ಯಾಟ್‌ ಮಾಡಿದ ಟೈಟನ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 271 ರನ್‌ ಗಳಿಸಿತು.

ಡೆವಾಲ್ಡ್‌ ಬ್ರೆವಿಸ್ 57 ಎಸೆತಗಳಲ್ಲಿ 162 ರನ್‌ ಗಳಿಸಿದರು. ನೈಟ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 230 ರನ್‌ ಪೇರಿಸಿ, 41 ರನ್‌ಗಳಿಂದ ಸೋತಿತು.

ನ್ಯೂಜಿಲೆಂಡ್‌ ದೇಶೀಯ ಟಿ20 ಲೀಗ್‌ನಲ್ಲಿ 2016-17ರ ಋತುವಿನಲ್ಲಿ ಸೆಂಟ್ರಲ್‌ ಡಿಸ್ಟ್ರಿಕ್ಟ್ಸ್‌ ಮತ್ತು ಒಟಾಗೊ ನಡುವಣ ಪಂದ್ಯದಲ್ಲಿ 497 ರನ್‌ಗಳು ಬಂದದ್ದು ಇದುವರೆಗಿನ ದಾಖಲೆಯಾಗಿತ್ತು.

ಟೈಟನ್ಸ್‌ ತಂಡದ 271 ರನ್‌, ಟಿ20ನಲ್ಲಿ ದಾಖಲಾದ ನಾಲ್ಕನೇ ಅತಿದೊಡ್ಡ ಮೊತ್ತ ಹಾಗೂ ದಕ್ಷಿಣ ಆಫ್ರಿಕಾದ ತಂಡವೊಂದು ಗಳಿಸಿದ ಅತ್ಯಧಿಕ ಸ್ಕೋರ್‌ ಆಗಿದೆ.