SPORTS:
ಬಾಕ್ಸಿಂಗ್ ಇತಿಹಾಸವನ್ನು ತೆರೆದು ನೋಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಾಕ್ಸರ್ಗಳ ಸಾಧನೆ ಅಲ್ಲಲ್ಲಿ ನೋಡಲು ಸಿಗುತ್ತದೆ. ಅದರಲ್ಲೂ ಭಾರತೀಯ ಬಾಕ್ಸರ್ ಮಹಮದ್ ಅಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಸರು ತಂದುಕೊಟ್ಟದ್ದು ಯಾರೂ ಮರೆಯುವ ಹಾಗಿಲ್ಲ. ಇನ್ನು ಮಹಿಳಾ ಬಾಕ್ಸರ್ ಗಳ ಬಗ್ಗೆ ನೋಡುವುದಾದರೆ ಮಹಮದ್ ಅಲಿ ಮಗಳು ಲೈಲಾ ಅಲಿ ಹೆಸರು ದಶಕಗಳ ಹಿಂದೆ ಮಿಂಚಿ ಮರೆಯಾಗಿದ್ದುಂಟು. ನಂತರ ಮಹಿಳಾ ಬಾಕ್ಸಿಂಗ್ನಲ್ಲಿ ಮಿಂಚಿದ್ದು ಮೆರಿಕೋಮ್ ಹೆಸರು. ಎಷ್ಟರ ಮಟ್ಟಿಗೆ ಮೆರಿಕೋಮ್ ಖ್ಯಾತರಾದರೆಂದರೆ ಇವರ ಜೀವನ ಆಧರಿಸಿ ಬಾಲಿವುಡ್ ಸಿನಿಮಾವನ್ನೇ ನಿರ್ಮಿಸಿತು. ಇದೀಗ ನಮ್ಮ ಭಾರತೀಯ ಬಾಕ್ಸಿಂಗ್ನಲ್ಲಿ ಮಿಂಚುತ್ತಿರುವ ಮತ್ತೊಬ್ಬ ಮಹಿಳಾ ಬಾಕ್ಸರ್ ಲೋವ್ಲಿನಾ ಬೊರ್ಗೊಹೈನ್. ಯಾರೀ ಲೋವ್ಲಿನಾ, ಅವಳ ಸಾಧನೆಯೇನು, ಬನ್ನಿ ನೋಡೋಣ.
ಲೋವ್ಲಿನಾ ಹುಟ್ಟಿದ್ದು ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ; ಕಿಕ್ ಬಾಕ್ಸರ್ ಆಗಿ ಶುರುವಾಯ್ತು ಲೋವ್ಲಿನಾ ವೃತ್ತಿಜೀವನ
ಲೋವ್ಲಿನಾ ಬೊರ್ಗೊಹೈನ್.. ಯಾವುದೋ ರಷಿಯನ್ ಹೆಸರು ಕೇಳಿದ ಹಾಗಿದೆಯಲ್ವ.. ಹಾಗಂತ ಕನ್ಫ್ಯೂಸ್ ಆಗ್ಬೇಡಿ. ಈ ಬಾಕ್ಸಿಂಗ್ ಹುಡುಗಿ ಅಪ್ಪಟ ಭಾರತೀಯಳು. ಭಾರತೀಯ ಹವ್ಯಾಸಿ ಮಹಿಳಾ ಬಾಕ್ಸರ್ ಆಗಿರುವ ಲೋವ್ಲಿನಾ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಹುಟ್ಟಿದವಳು. 1997 ಅಕ್ಟೋಬರ್ 2ರಂದು ಜನಿಸಿದ ಲೋವ್ಲಿನಾ, ಟಿಕೆನ್ ಮತ್ತು ಮಾಮೋನಿ ಬೊರ್ಗೊಹೈನ್ ರವರ ಮಗಳು. ಚಿಕ್ಕ ವ್ಯವಹಾರ ನಡೆಸುತ್ತಿದ್ದ ತಂದೆ ಬಡತನದಲ್ಲೂ ಮಗಳ ಬಾಕ್ಸಿಂಗ್ ಆಡುವ ಆಸೆಯನ್ನು ಪೂರೈಸಲು ಶ್ರಮಿಸಿದ್ದರು. ತಂದೆಯ ಪ್ರೋತ್ಸಾಹದ ಫಲವಾಗಿ ಲೋವ್ಲಿನಾ ತನ್ನ ಬಾಕ್ಸಿಂಗ್ ಜೀವನವನ್ನು ಪ್ರಾರಂಭಿಸಿದ್ದು ಕಿಕ್ ಬಾಕ್ಸರ್ ಆಗಿ.
ಲೋವ್ಲಿನಾಳಿಗಿದ್ದರು ಇಬ್ಬರು ಕಿಕ್ಬಾಕ್ಸರ್ ಅವಳಿ ಸಹೋದರಿಯರು; ಲಿಚಾ ಮತ್ತು ಲಿಮಾ ಕಿಕ್ಬಾಕ್ಸಿಂಗ್ನಲ್ಲಿ ಹೆಸರು ಮಾಡಿದ್ದ ಸಹೋದರಿಯರು
ಲೋವ್ಲಿನಾ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದೇನೋ ಕಿಕ್ಬಾಕ್ಸರ್ ಆಗಿ. ಆದರೆ ಅವಳು ಅದಕ್ಕೆ ಅಂಟಿಕೊಳ್ಳಲಿಲ್ಲ. ಅವಳು ನಂತರ ವಾಲಿದ್ದು ಬಾಕ್ಸಿಂಗ್ ಕಡೆಗೆ. ಲೋವ್ಲಿನಾ ಅವಳ ಕುಟುಂಬದಲ್ಲಿ ಕಿಕ್ಬಾಕ್ಸರ್ ಆದ ಒಬ್ಬಳೇ ಹುಡುಗಿಯೇನಲ್ಲ. ಅವಲ ಅವಳಿ ಸಹೋದರಿಯರಾದ ಲಿಚಾ ಮತ್ತು ಲಿಮಾ ಇಬ್ಬರೂ ಸಹ ಕಿಕ್ಬಾಕ್ಸಿಂಗ್ನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದರು. ಆದರೆ ಅವರಿಬ್ಬರು ಅದಕ್ಕಿಂತ ಮುಂದೆ ತಮ್ಮ ವೃತ್ತಿಜೀವನವನ್ನು ಲೋವ್ಲಿನಾಳಂತೆ ಕೊಂಡೊಯ್ಯಲಾಗಲಿಲ್ಲ.
2012ರಲ್ಲಿ ಬಾಕ್ಸಿಂಗ್ ತರಬೇತಿ ಶುರು; ಪ್ರಥಮ ಚಾಂಪಿಯನ್ಶಿಪ್ ಪಂದ್ಯದಲ್ಲೇ ಕಂಚಿನ ಪದಕ
2012 ಲೋವ್ಲಿನಾ ಜೀವನದಲ್ಲಿ ಒಂದು ಮಹತ್ವದ ತಿರುವು ಕೊಟ್ಟ ವರ್ಷ. ಈ ವರ್ಷದಲ್ಲೇ ಅವಳು ತನ್ನ ಬಾಕ್ಸಿಂಗ್ ವೃತ್ತಿಜೀವನದ ತರಬೇತಿಯನ್ನು ಪ್ರಾರಂಭಿಸಿದ್ದು. ಈ ವರ್ಷದಲ್ಲಿ ನವದೆಹಲಿಯಲ್ಲಿ ನಡೆದ AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದರು. ಈ ಚಾಂಪಿಯನ್ಶಿಪ್ನಲ್ಲಿ ಲೋವ್ಲಿನಾ ಕಂಚಿನ ಪದಕವನ್ನು ಪಡೆದರು. ಇಲ್ಲಿಂದ ಆರು ವರ್ಷಗಳವರೆಗೆ ಅಭ್ಯಾಸವನ್ನು ತೀಕ್ಷ್ಣಗೊಳಿಸಿದ ಲೋವ್ಲಿನಾ ಅಂತಿಮವಾಗಿ 2019ರಲ್ಲಿ ರಷ್ಯಾದ ಉಲಾನ್ ಉಡೆಯಲ್ಲಿ ತಮ್ಮ ಎರಡನೇ ಮಹಿಳಾ ವಿಶ್ವಬಾಕ್ಸಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾದರು.
ರಷ್ಯಾದಲ್ಲಿ ಕಂಚಿನ ಪದಕ ಪಡೆದ ಲೋವ್ಲಿನಾ; ನವದೆಹಲಿಯಲ್ಲಿ ಚಿನ್ನದ ಸಾಧನೆ ಮಾಡಿದ ಬೊರ್ಗೊಹೈನ್
ಲೋವ್ಲಿನಾ ರಷ್ಯಾದಲ್ಲಿ ನಡೆದ ಎರಡನೇ ವಿಶ್ವಬಾಕ್ಸಿಂಗ್ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು. ಲೋವ್ಲಿನಾ 69 ಕೆಜಿ ವಿಭಾಗದಲ್ಲಿ ಜೀನಾದ ಯಾಂಗ್ ಲಿಯು ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು. ಇದಿಷ್ಟೇ ಅಲ್ಲದೆ ಲೋವ್ಲಿನಾ ಭಾರತದಲ್ಲಿ ನಡೆದ ಅಂತರಾಷ್ಟ್ರೀಯ ಪಂದ್ಯದಲ್ಲಿ ಚಿನ್ನದ ಹುಡುಗಿಯಾಗಿ ಸಾಧನೆ ಮಾಡಿದಳು. ನವದೆಹಲಿಯಲ್ಲಿ ನಡೆದ ಮೊದಲ ಇಂಡಿಯಾ ಓಪನ್ ಅಂತರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಲೋವ್ಲಿನಾ ಚಿನ್ನದ ಪದಕ ಗೆದ್ದ ಸಾಧನೆಯನ್ನು ಮಾಡಿದರು.
ಟೋಕಿಯೊ ಒಲಂಪಿಕ್ಸ್ನಲ್ಲಿ ಮತ್ತೊಮ್ಮೆ ಕಂಚಿನ ಸಾಧನೆ; ಅಸ್ಸಾಂನಿಂದ ಒಲಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಮಹಿಳೆ
ಬಾಕ್ಸಿಂಗ್ನಲ್ಲಿ ಲೋವ್ಲಿನಾ ಬೊರ್ಗೊಹೈನ್ ಓಟ ಇಲ್ಲಿಗೆ ನಿಲ್ಲಲಿಲ್ಲ. ಟೋಕಿಯೊ ಒಲಂಪಿಕ್ಸ್ 2020ರ ಮಹಿಳೆಯರ ವೆಲ್ಟರ್ವೇಟ್ 69 ಕೆಜಿ ಸೆಮಿಫೈನಲ್ನಲ್ಲಿ ಮತ್ತೊಮ್ಮೆ ಲೊವ್ಲಿನಾ ಕಂಚಿನ ಪದಕದ ಸಾಧನೆ ಮಾಡಿದರು. ವಿಜೇಂದರ್ ಸಿಂಗ್ ಮತ್ತು ಮೇರಿ ಕೋಮ್ ನಂತರ ಪದಕವನ್ನು ಖಚಿತಪಡಿಸಿದ ಮೂರನೇ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಲೋವ್ಲಿನಾ ಪಾತ್ರರಾದರು. ಇಷ್ಟೇ ಅಲ್ಲದೆ ಲೋವ್ಲಿನಾ ಅಸ್ಸಾನಿಂದ ಒಲಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಮಹಿಳೆ ಮತ್ತು ಶಿವ ಥಾಪಾ ನಂತರ ದೇಶವನ್ನು ಪ್ರತಿನಿಧಿಸಿದ ರಾಜ್ಯದ ಎರಡನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
24 ವರ್ಷದ ಲೋವ್ಲಿನಾ ಎಂಬ ಮಿಂಚು ಇಂದು ಭಾರತದ ಬಾಕ್ಸಿಂಗ್ ಆಶಾಕಿರಣವಾಗಿದ್ದಾರೆ.. ಇಂದೂ ಸಹ ಭಾರತದ ಬಾಕ್ಸಿಂಗ್ನಲ್ಲಿ ಲೋವ್ಲಿನಾ ಹೆಸರು ಮುಂಚೂಣಿಯಲ್ಲಿದೆ. ಲೋವ್ಲಿನಾ ಬೊರ್ಗೊಹೈನ್ ಎಂಬ ಈ ಬಾಕ್ಸರ್ಗೆ ಭಾರತ ಸರ್ಕಾರ ಆಕೆಯ ಅದ್ಭುತ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಾಗಿತ್ತು ಇಂದಿನ ವಿಶೇಷ. ನೋಡ್ತಾಯಿರಿ ಬಾಲಾಜಿ ಮೀಡಿಯಾ24x7ಲೈವ್ ಕನ್ನಡ