<strong>ಚಾರ್ಲ್ಸ್​ಟನ್ ಓಪನ್; ಡಬಲ್ಸ್​ನಲ್ಲಿ ಸಾನಿಯಾ ಜೋಡಿಗೆ ಸೋಲು</strong>

<strong>ಚಾರ್ಲ್ಸ್​ಟನ್ ಓಪನ್; ಡಬಲ್ಸ್​ನಲ್ಲಿ ಸಾನಿಯಾ ಜೋಡಿಗೆ ಸೋಲು</strong>

ಚಾರ್ಲ್ಸ್​ಟನ್ (ಯು.ಎಸ್) : ಭಾರತದ ಏಸ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಜೆಕ್​ನಲೂಸಿ ಹ್ರಾಡೆಕಾ ಅವರ ಮಹಿಳೆಯರ ಡಬಲ್ಸ್ ಜೋಡಿ ಭಾನುವಾರ ಚಾರ್ಲ್ಸ್​ಟನ್ ಓಪನ್​ನ ಕ್ಲೇ ಕೋರ್ಟ್​ ಫೈನಲ್ ಹಣಾಹಣಿಯಲ್ಲಿ ಸೋಲನ್ನನನುಭವಿಸಿದ್ದಾರೆ.

ಡಬ್ಲೂಟಿಎ 500 ಈವೆಂಟ್​ನ ಫೈನಲ್​ನಲ್ಲಿ ಮಿರ್ಜಾ ಮತ್ತು ಹಾಡ್ರೆಕಾ ಅವರು 2 ಗಂಟೆ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಆಂಡ್ರೆಜಾ ಕ್ಲೆಪಕ್ ಮತ್ತು ಮ್ಯಾಗ್ಡಾ ಲಿನೆಟ್​ರಿಂದ 6-2, 4-6 ಮತ್ತು 10-7ರಿಂದ ಪರಾಭವಗೊಂಡರು.

ಇದಕ್ಕೂ ಮೊದಲು, ಮಿರ್ಜಾ ಮತ್ತು ಹ್ರಾಡೆಕಾ ಸೆಮಿಫೈನಲ್​ನಲ್ಲಿ ಅಗ್ರ ಶ್ರೇಯಾಂಕದ ಜಅಂಗ್ ಶುವಾಯ್-ಕ್ಯಾರೊಲಿನ್ ಡೊಲೆಹೈಡ್ ವಿರುದ್ಧ 2-6, 6-4, 8-10 ಸೆಟ್​​ಗಳಿಂದ ಗೆದ್ದಿದ್ದರು.