ಧೋನಿ ನಾಯಕತ್ವದಲ್ಲಿ ಗೆಲುವಿನ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್

ಧೋನಿ ನಾಯಕತ್ವದಲ್ಲಿ ಗೆಲುವಿನ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್

ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಧೋನಿ ನಾಯಕತ್ವದಲ್ಲಿ ಗೆಲುವಿನ ಹಳಿಗೆ ಮರಳಿದೆ. 15ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 8 ಪಂದ್ಯಗಳ ಬಳಿಕ ನಾಯಕತ್ವ ವಹಿಸಿಕೊಂಡ ಎಂ.ಎಸ್.ಧೋನಿ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸಿಎಸ್‌ಕೆ 13 ರನ್ ಗೆಲುವು ದಾಖಲಿಸಿದೆ.
ಗೆಲುವಿಗೆ 203ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಆತ್ಮವಿಶ್ವಾಸವನ್ನು ಮೊದಲಿಗೆ ಕಳೆದುಕೊಂಡಿತು. ಧೋನಿ ನಾಯಕತ್ವ ಹೈದರಾಬಾದ್ ತಂಡಕ್ಕೆ ಸವಾಲಾಗಿ ಪರಿಣಮಿಸಿತು. ಆದರೆ ಅಭಿಶೇಕ್ ಶರ್ಮಾ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 58 ರನ್ ಜೊತೆಯಾಟ ನೀಡಿದರು. 24 ಎಸೆತದಲ್ಲಿ 39 ರನ್ ಸಿಡಿಸಿ ಅಭಿಷೇಕ್ ಶರ್ಮಾ ಔಟಾದರು.
ಇದರ ಬೆನ್ನಲ್ಲೇ ರಾಹುಲ್ ತ್ರಿಪಾಠಿ ಡಕೌಟ್ ಆದರು. ಆ್ಯಡಿನ್ ಮರ್ಕ್ರಮ್ ಕೇವಲ 17 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಕೇನ್ ವಿಲಿಯಮ್ಸನ್ 37 ಎಸೆತದಲ್ಲಿ 47 ರನ್ ಸಿಡಿಸಿ ಔಟಾದರು. ಆದರೆ ನಿಕೋಲಸ್ ಪೂರನ್ ಹೋರಾಟ ಹೈದರಾಬಾದ್ ತಂಡದಲ್ಲಿ ಸಣ್ಣದೊಂದು ಗೆಲುವಿನ ಆಸೆ ಚಿಗುರಿಸಿತ್ತು.
ಶಶಾಂಕ್ ಸಿಂಗ್ ಹಾಗೂ ವಾಶಿಂಗ್ಟನ್ ಸುಂದರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಅಬ್ಬರಿಸಿದ ಪೂರನ್ ಹಾಫ್ ಸಂಚುರಿ ಸಿಡಿಸಿದರು. ಪೂರನ್ 33 ಎಸೆತದಲ್ಲಿ ಅಜೇಯ 64 ರನ್ ಸಿಡಿಸಿ ಗೆಲುವಿಗಾಗಿ ಶ್ರಮಿಸಿದರು. ಆದರೆ ತಂಡ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು. ಇದರೊಂದಿಗೆ ಧೋನಿ ಪಡೆ 13 ರನ್ ಗೆಲುವು ಸಾಧಿಸಿತು.