ಫುಟ್ಬಾಲ್ ವಿಶ್ವಕಪ್ 2022: ಆ್ಯಡಿಡಾಸ್ ಸಂಸ್ಥೆ ತಯಾರಿಸಿರುವ ಚೆಂಡು!

ಫುಟ್ಬಾಲ್ ವಿಶ್ವಕಪ್ 2022: ಆ್ಯಡಿಡಾಸ್ ಸಂಸ್ಥೆ ತಯಾರಿಸಿರುವ ಚೆಂಡು!

ನವದೆಹಲಿ: ವರ್ಷಾಂತ್ಯದಲ್ಲಿ ಕತಾರ್‌ನಲ್ಲಿ ನಡೆಯಲಿರುವ 2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಅಧಿಕೃತ ಚೆಂಡನ್ನು ಅನಾವರಣಗೊಳಿಸಿದ್ದಾಗಿದೆ. ಆ್ಯಡಿಡಾಸ್‌ ಸಂಸ್ಥೆ ಹೊರತಂದಿರುವ ಚೆಂಡಿಗೆ ಪಯಣ ಎಂಬ ಅರ್ಥ ಬರುವ ‘ಅಲ್‌ ರಿಹ್ಲಾ’ ಎಂಬ ಅರೇಬಿಕ್‌ ಹೆಸರಿಡಲಾಗಿದ್ದು, ಇದು ಈವರೆಗಿನ ವಿಶ್ವಕಪ್‌ಗಳಲ್ಲೇ ಗಾಳಿಯಲ್ಲಿ ಅತೀ ವೇಗವಾಗಿ ಚಲಿಸುವ ಚೆಂಡು ಎಂಬ ಖ್ಯಾತಿ ಗಳಿಸಿದೆ. ಆ್ಯಡಿಡಾಸ್‌ ಸಂಸ್ಥೆಯು ಸತತ 14ನೇ ಬಾರಿ ವಿಶ್ವಕಪ್‌ ಚೆಂಡನ್ನು ತಯಾರಿಸಿದೆ. ಚೆಂಡು ಮುಂದಿನ ಕೆಲ ವಾರಗಳಲ್ಲಿ ದುಬೈ, ಟೋಕಿಯೋ, ಮೆಕ್ಸಿಯೋ, ನ್ಯೂಯಾರ್ಕ್ ಸೇರಿದಂತೆ ವಿಶ್ವದ 10 ಪ್ರಮುಖ ನಗರಗಳಲ್ಲಿ ಸಂಚರಿಸಲಿದೆ. ಇದೇ ವೇಳೆ ವಿಶ್ವಕಪ್‌ನ ಅಧಿಕೃತ ಗೀತೆಯೂ ಬಿಡುಗಡೆಗೊಂಡಿದೆ.

ಈ ಬಾರಿ ಚೆಂಡು ತಯಾರಿಕೆಯಲ್ಲಿ ಪರಿಸರ ರಕ್ಷಣೆಗೆ ಒತ್ತು ನೀಡಲಾಗಿದೆ. ಜಲ ಆಧರಿತ ಶಾಯಿ ಹಾಗೂ ಅಂಟು ಬಳಸಿ ಈ ಚೆಂಡನ್ನು ತಯಾರಿಸಲಾಗಿದೆ. ಇದು ವಿಶ್ವಕಪ್‌ನ 92 ವರ್ಷಗಳ ಇತಿಹಾಸದಲ್ಲಿ ವಿಶ್ವದಾದ್ಯಂತ ಸಂಕಷ್ಟದಲ್ಲಿರುವವರ ನೆರವಿಗೆ ಸ್ಪಂದಿಸಲು ನೇರವಾಗಿ ನಿಧಿ ಸಂಗ್ರಹಿಸುವ ಮೊದಲ ಚೆಂಡು ಇದಾಗಿದೆ ಈ ಚೆಂಡಿನ ಮಾರಾಟದಿಂದ ಬರುವ ಒಂದಂಶವನ್ನು ನಿಧಿಗಾಗಿ ಇಡಲಾಗುವುದು ಎಂದು ತಿಳಿದು ಬಂದಿದೆ. ಆರಬ್ ದೇಶವೊಂದರಲ್ಲಿ ನಡೆಯುತ್ತಿರುವ ಮೊದಲ ಪುಟ್ಬಾಲ್ ವಿಶ್ವಕಪ್ ಇದಾಗಿದೆ. ಕತಾರ್, ದೋಹಾ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುವ 32 ತಂಡಗಳ ಪಂದ್ಯಾವಳಿ ನವೆಂಬರ್ 21,ರಂದು ಉದ್ಘಾಟನೆಯಾಗಲಿದೆ, ಮತ್ತು ಡಿಸೆಂಬರ್ 18 ರಂದು ಫೈನಲ್ಸ್ ನಡೆಯಲಿದೆ.