ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಮುಂಬೈ: ಮುಂಬೈ ಇಂಡಿಯನ್ಸ್ ಹಾಲಿ ಆವೃತ್ತಿಯ ತನ್ನ ರಂಜನೀಯ ಗೆಲುವು ಕಂಡಿದೆ. ಕಳೆದ ಪಂದ್ಯದಲ್ಲಿ ಗೆಲುವು ಕಂಡಿದ್ದ ಮುಂಬೈ ಇಂಡಿಯನ್ಸ್ ಶುಕ್ರವಾರ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ವಿರುದ್ಧ 5 ರನ್ ಗಳ ರೋಚಕ ಗೆಲುವು ಕಂಡಿದೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಅವರ ಉತ್ತಮ ಆರಂಭಿಕ ಜೊತೆಯಾಟದ ಬಳಿಕ 6 ವಿಕೆಟ್ ಗೆ 177 ರನ್ ಕಲೆಹಾಕಿತು. ಕೊನೇ ಹಂತದಲ್ಲಿ ಟಿಮ್ ಡೇವಿಡ್ (44 *ರನ್, 21 ಎಸೆತ, 2 ಬೌಂಡರಿ, 4 ಸಿಕ್ಸರ್) ಗಳಿಸಿ ಅದ್ಭುತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಗೆ 177 ರನ್ ಬಾರಿಸಿತ್ತು.

ಪ್ರತಿಯಾಗಿ ಗುಜರಾತ್ ಟೈಟಾನ್ಸ್ ತಂಡ ಮೊದಲ ವಿಕೆಟ್ ಗೆ ವೃದ್ಧಿಮಾನ್ ಸಾಹ 55ರನ್ ಹಾಗೂ ಶುಭ್ ಮಾನ್ ಗಿಲ್ 52 ರನ್ ಆಡಿದ 106 ರನ್ ಗಳ ಅಮೋಘ ಜೊತೆಯಾಟದಿಂದ ಗೆಲುವಿನ ಹಾದಿಯಲ್ಲಿತ್ತು. ಆದರೆ, ಕೊನೇ ಓವರ್ ನಲ್ಲಿ ಡೇನಿಯಲ್ ಸ್ಯಾಮ್ಸ್ 9 ರನ್ ಗಳನ್ನ ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ಗುಜರಾತ್ ಟೈಟಾನ್ಸ್ 5 ವಿಕೆಟ್ ಗೆ 172 ರನ್ ಬಾರಿಸಿ ಸೋಲು ಕಂಡಿತು.