ಈ ಕ್ಷಣ :

ವಿರೋಧದ ನಶೆಯಲ್ಲಿ ನಿಷೇಧ ಹೇರುವುದೇ?

Published 15 ಮಾರ್ಚ್ 2023, 23:30 IST
Last Updated 6 ಮೇ 2023, 07:28 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPORTS:

ಸೋಮಶೇಖರ್ ಪಡುಕರೆ,

ಬೆಂಗಳೂರು : 4,36,011 ಕೋಟಿ ರೂ. ಮೌಲ್ಯದ ಸರಕುಗಳನ್ನು ಚೀನಾದಿಂದ ಆಮದುಮಾಡಿಕೊಳ್ಳಬಹುದು, ಆದರೆ 10 ಕೋಟಿ ರೂ. ಮೌಲ್ಯದ ಲೀ-ನಿಂಗ್ ಕ್ರೀಡಾ ಕಿಟ್ ಮತ್ತು ಉಡುಪನ್ನು ಭಾರತ ತಂಡ ಒಲಿಂಪಿಕ್ಸ್ ನಲ್ಲಿ ಧರಿಸಿದರೆ ದೇಶದ ಘನತೆಗೆ, ದೇಶಭಕ್ತಿಗೆ ದಕ್ಕೆಯಾಗುತ್ತದೆ ಎಂಬುದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮತ್ತು ಕ್ರೀಡಾ ಸಚಿವಾಲಯದ ನಿಲುವಿಗೆ ಅರ್ಥವಿಲ್ಲವಾಗಿದೆ.

ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಕ್ರೀಡಾಪಟುಗಳಿಗೆ ಕಿಟ್ ಒದಗಿಸಲು ಚೀನಾದ ಕ್ರೀಡಾ ಸರಕುಗಳ ಉತ್ಪಾದನಾ ಸಂಸ್ಥೆ ಲೀ-ನಿಂಗ್ ಜತೆ ಒಪ್ಪಂದ ನಡೆದಿತ್ತು. ಆದರೆ ಭಾರತ ಹಾಗೂ ಚೀನಾ ನಡುವಿನ ರಾಜಕೀಯ ಸಂಬಂಧ ಗಾಲ್ವಾನ್ ಕಣಿವೆಯಲ್ಲಿನ ಘಟನೆಯ ನಂತರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಚೀನಾದ ಕಂಪೆನಿಯ ಜತೆಗಿನ ಒಪ್ಪಂದ ಬೇಡ ಎಂದು ಪ್ರಕಟಿಸಿದೆ. ಬದಲಾಗಿ ಆನ್ ಲೈನ್ ಬೆಟ್ಟಿಂಗ್ ಕಂಪೆನಿಯಾದ ಎಂಪಿಎಲ್ ನ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಶನ್ ನ ಜತೆ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಿಗೆ ಕಿಟ್ ಒದಗಿದಲು ಒಪ್ಪಂದ ಮಾಡಿಕೊಂಡಿದೆ.

ಗಡಿಯಲ್ಲಿ ಚೀನಾದದ ಸೈನಿಕರು ತೋರಿದ ಉದ್ದಟತನಕ್ಕೆ ಪ್ರತಿಯಾಗಿ ಭಾರತವು ಚೀನಾದ ಕೆಲವು ಯ್ಯಾಪ್ ಗಳನ್ನು ನಿಷೇಧ ಮಾಡಿ ತಕ್ಕ ತಿರುಗೇಟು ನೀಡಿದೆ. ಆದರೆ ಚೀನಾದಿಂದ ಮಾಡುತ್ತಿದ್ದ ಆಮದು ವ್ಯವಹಾರವನ್ನು ಮುಂದುವರಿಸಿದೆ. 2019-20ರಲ್ಲಿ ಭಾರತ ಸುಮಾರು 58.71 ಶತಕೋಟಿ ಡಾಲರ್ ಮೊತ್ತದಷ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ. ಭಾರತ ಈಗ ಅತಿ ಹೆಚ್ಚು ವಸ್ತುಗಳನ್ನು ಆಮದುಮಾಡಿಕೊಳ್ಳುವುದು ಚೀನಾದಿಂದಲೇ. ಆದರೆ ಉತ್ತಮ ಕ್ರೀಡಾ ಉತ್ಪನ್ನಗಳನ್ನು ನೀಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಲೀ-ನಿಂಗ್ ಒಪ್ಪಂದವನ್ನು ಕೈ ಬಿಡುವುದುರಿಂದ ಚೀನಾ ಮತ್ತು ಭಾರತದ ನಡುವಿನ ಗಡಿವಿವಾದ ಇತ್ಯರ್ಥವಾಗುತ್ತದೆ ಎಂಬ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ನಿಲುವು ಒಲಿಂಪಿಕ್ಸ್ ಸಿದ್ಧಾಂತಕ್ಕೇ ವಿರುದ್ಧವಾದುದು.

ಕ್ರೀಡೆ ಮೂಲಕ ಶಾಂತಿ ನೆಲೆಸಬೇಕು, ಎರಡು ದೇಶಗಳ ನಡುವಿನ ಸೌಹಾರ್ದತೆಗೆ ಕ್ರೀಡೆ ಸೇತುವಾಗಬೇಕು ಎಂದು ಒಲಿಂಪಿಕ್ಸ್ ಸಂದೇಶ ಸಾರುತ್ತಿದೆ. ಆದರೆ, ಒಲಿಂಪಿಕ್ಸ್ ಸಂಸ್ಥೆಯ ಅಧಿಕಾರದಲ್ಲಿರುವವರು ಮಾತ್ರ ವಿಷದ ಬೀಜ ಬಿತ್ತುತ್ತಿರುವುದು ಸ್ಪಷ್ಟವಾಗಿದೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ದೇಶದ ವಿವಿಧ ಭಾಗಗಳಿಂದ ಒತ್ತಡ ಬಂದಿದ್ದು, ಚೀನಾದ ಉತ್ಪನ್ನಗಳನ್ನು ಒಲಿಂಪಿಕ್ಸ್ ವೇಳೆ ಧರಿಸಿರುವುದರಿಂದ ಜನರ ಭಾವವೆಗಳಿಗೆ ದಕ್ಕಯುಂಟಾಗುತ್ತದೆ ಎಂಬುದು ಕ್ರೀಡಾ ಸಚಿವರು ಒಬ್ಬ ಸಾಮಾನ್ಯ ಪ್ರಜೆಯಂತೆ ಹೇಳಿಕೆ ನೀಡಿದ್ದಾರೆ. ಕೇಂದ್ರ ಕ್ರೀಡಾ ಸಚಿವರಿಗೆ 4,36,0111 ಕೋಟಿ ರೂ,ಗಳ ಆಮದು ನಡೆಯುತ್ತಿರವುದು ಗೊತ್ತೇ ಇರಲಿಲ್ಲ ಅನಿಸುತ್ತೆ.

ಪಿವಿ ಸಿಂಧೂ 50 ಕೋಟಿ ರೂ. ಗುತ್ತಿಗೆ ಕೈ ಬಿಡ್ತಾರಾ?

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಫೇವರಿಟ್ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಅವರು ಕಳೆದ ಕೆಲವು ವರ್ಷಗಳಿಂದ ಲೀ-ನಿಂಗ್ ಬ್ಯಾಟ್ ಮತ್ತು ಇತರ ಉತ್ಪನ್ನಗಳನ್ನು ಬಳಸುತ್ತಿದ್ದರು. ಅವರ ಜನಪ್ರಿಯತೆ ಹೆಚ್ಚಾದಂತೆ ಭಾರತದಲ್ಲಿ ಯೊನೆಕ್ಸ್ ಸ್ಥಾನವನ್ನು ಲೀ-ನಿಂಗ್ ಆವರಿಸಿತು. ಹೆಚ್ಚಿನ ವೃತ್ತಿಪರ ಆಟಗಾರರು ಲೀ-ನಿಂಗ್ ಉತ್ಪನ್ನಗಳನ್ನೇ ಬಳಸಲಾರಂಭಿಸಿದರು. ಎರಡು ವರ್ಷಗಳ ಹಿಂದೆ ಲೀ-ನಿಂಗ್ 50 ಕೋಟಿ ರೂ.ಗಳಿಗೆ ಸಿಂಧೂ ಅವರನ್ನು ತನ್ನ ಬ್ರಾಂಡ್ ನ ರಾಯಭಾರಿಯಾಗಿಸಿಕೊಂಡಿದೆ. ಈಗ ಸಿಂಧೂ ಅವರು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ನಿಲುವಿಗೆ ಒಪ್ಪಿ ಲೀ-ನಿಂಗ್ ಒಪ್ಪಂದವನ್ನು ಮುರಿದು ದೇಶಪ್ರೇಮವನ್ನು ಸಾಬೀತುಪಡಿಸುವರೋ ಇಲ್ಲ, ವ್ಯಾವಹಾರಿಕ ಒಪ್ಪಂದವನ್ನು ಮುಂದುವರಿಸುವರೋ ಕಾದು ನೋಡಬೆಕು. 2023ರವರೆಗೂ ಈ ಒಪ್ಪಂದವಿರುತ್ತದೆ.

ಒಲಿಂಪಿಕ್ಸ್ ನಡೆಯುವಾಗ ಎರಡು ದೇಶಗಳ ನಡುವಿನ ವೈರತ್ವವನ್ನು ಮರೆತು ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳಬೇಕಾಗುತ್ತದೆ. ಆದರೆ ನಾವು ವಿಷದ ಬೀಜ ಬಿತ್ತಿ ಕ್ರೀಡಾಪಟುಗಳನ್ನು ಒಲಿಂಪಿಕ್ಸ್ ಗೆ ಕಳುಹಿಸುತ್ತಿದ್ದೇವೆ. ಲೀ-ನಿಂಗ್ ಉತ್ಪನ್ನ ನಿಷೇಧ ಮಾಡುವದರಿಂದ ಆ ಕಂಪೆನಿಗೆ ಆರ್ಥಿಕ ನಷ್ಟವಾಗಬಹುದು, ಆದರೆ ಅದರ ಬ್ರ್ಯಾಂಡ್ ಇಮೇಜ್ ಮತ್ತಷ್ಟು ಹೆಚ್ಚುತ್ತದೆ. ನಿಷೇಧ ಮಾಡುವ ನಾವು ಇತರ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಭಾರತಕ್ಕೆ ಬಾರದಂತೆ ನೋಡಿಕೊಳ್ಳಬೇಕು.

ಕ್ರೀಡಾ ಸಂಸ್ಥೆಗಳಲ್ಲಿ ಕ್ರೀಡಾಪಟುಗಳೇ ಉನ್ನತ ಹುದ್ದೆಯಲ್ಲಿದ್ದರೆ ಇಂಥ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ, ಆದರೆ ನರೇಂದ್ರ ಬಾತ್ರಾ ಮತ್ತು ರಾಜೀವ್ ಮೆಹ್ತಾ ಅವರಿಗೆ ಕ್ರೀಡೆ ಹೇಳುವ ಸೌಹಾರ್ದತೆಯ ಸಂದೇಶ ಅರ್ಥವಾಗುವುದಿಲ್ಲವೋ ಅಥವಾ ಕೇಂದ್ರದ ಆದೇಶಕ್ಕೆ ತಲೆ ಬಾಗಿದ್ದಾರೋ ತಿಳಿಯದು. ಚೀನಾದ ಮೇಲಿನ ವೈರತ್ವದ ಅಮಲಿನಲ್ಲಿ 2008ರಲ್ಲಿ ಗೆದ್ದ ಬೀಜಿಂಗ್ ಒಲಿಂಪಿಕ್ಸ್ ಪದಕಗಳನ್ನು ಹಿಂದಿರುಗಿಸಿ ಎಂದು ಆದೇಶಿಸಿದರೂ ಅಚ್ಚರಿಪಡುವಂತಿಲ್ಲ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45