SPORTS:
ಬೆಂಗಳೂರು : ವಿಶ್ವ ರಾಂಕಿಂಗ್ ಆಧಾರದ ಮೇಲೆ ಭಾರತದ ವೇಗದ ಓಟಗಾರ್ತಿ ದೂತಿ ಚಾಂದ್ 100 ಮತ್ತು 200ಮೀ. ಓಟದಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿರುತ್ತಾರೆ.
ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯ ಮೂಲಕ ಅರ್ಹತೆ ಪಡೆಯುವಲ್ಲಿ ವಿಫಲರಾದವರಿಗೆ ವಿಶ್ವ ರಾಂಕಿಂಗ್ ಕೋಟಾದ ಮೂಲಕ ಸ್ಪರ್ಧಿಸುವ ಅವಕಾಶವಿದೆ. ವಿಶ್ವದಲ್ಲಿ 44ನೇ ರಾಂಕ್ ಹೊಂದಿರುವ ಚಾಂದ್ ಅರ್ಹತೆ ಪಡೆಯುವಲ್ಲಿ ಸಫಲರಾದರು. 100 ಮೀ. ವಿಭಾಗದಲ್ಲಿ 22 ಸ್ಥಾನಗಳು ಮತ್ತು 15 ಸ್ಥಾನಗಳು 200 ಮೀ. ನಲ್ಲಿ ಉಳಿದಿದ್ದವು.
ಕಳೆದ ವಾರ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್ ಗ್ರಾನ್ ಪ್ರಿ 4ರಲ್ಲಿ ಚಾಂದ್ 11.7 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದರು. ಆದರೆ 0.02 ಸೆಕೆಂಡುಗಳಿಂದ ಒಲಿಂಪಿಕ್ಸ್ ಅರ್ಹತೆಯಿಂದ ವಂಚಿತರಾಗಿದ್ದರು.
ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದಿರುವ ಚಾಂದ್ ಅವರ ಹೆಸರನ್ನು ಒಡಿಶಾ ಸರಕಾರ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ.