SPORTS:
ಬೆಂಗಳೂರು: ಮುಂದಿನ ತಿಂಗಳು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್ ಅವರು ದೇಶವನ್ನು ಪ್ರತಿನಿಧಿಸಲಿದ್ದಾರೆ.
ಅದಿತಿ ಅವರಿಗೆ ಇದು ಸತತ ಎರಡನೇ ಒಲಿಂಪಿಕ್ಸ್. 2016ರ ರಿಯೋ ಒಲಿಂಪಿಕ್ಸ್ ನಲ್ಲಿಯೂ ಭಾರತದ ಶ್ರೇಷ್ಠ ಗಾಲ್ಫರ್ ಬೆಂಗಳೂರಿನ ಅದಿತಿ ಭಾರತವನ್ನು ಪ್ರತಿನಿಧಿಸಿದ್ದರು. “2016ರ ರಿಯೋ ಒಲಿಂಪಿಕ್ಸ್ ನಿನ್ನೆ ಮುಗಿದಂತಿದೆ. ದೇಶದ ಪರ ಆಡುವುದು ಹೆಮ್ಮೆಯ ಸಂಗತಿ. ಮತ್ತೊಮ್ಮೆ ನನ್ನ ಕ್ರೀಡೆಯ ಮೂಲಕ ದೇಶವನ್ನು ಪ್ರತಿನಿಧಿಸಲು ಉತ್ಸುಕಳಾಗಿರುವೆ,” ಎಂದು ಅದಿತಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಅನಿರ್ಬಾನ್ ಲಾಹಿರಿ ಮತ್ತು ಉದಯನ್ ಮಾನೆ ಈಗಾಗಲೇ ಟೋಕಿಯೋಗೆ ಆಯ್ಕೆಯಾಗಿದ್ದಾರೆ. ಆಗಸ್ಟ್ 4 ರಿಂದ 7 ರವರೆಗೆ ಮಹಿಳಾ ವಿಭಾಗದ ಗಾಲ್ಫ್ ಸ್ಪರ್ಧೆ ಕಸುಮಿಗಾಸೆಕಿ ಕಂಟ್ರಿ ಕ್ಲಬ್ ನಲ್ಲಿ ನಡೆಯಲಿದೆ.