ಪ್ರವಾಸವಿಶೇಷ

ಪ್ರಕೃತಿಯ ಅದ್ಭುತ ನೋಟ ಸವಿಯಲು ಬಿಸಿಲೆ ಘಾಟ್ ವ್ಯೂ ಪಾಯಿಂಟ್

  • ಪವಿತ್ರಾ

ಸಕಲೇಶಪುರದಲ್ಲಿ ರಮಣೀಯವಾದ ಪ್ರಕೃತಿ ಸೌಂದರ್ಯ ಸವಿಯಲು ಭೇಟಿ ನೀಡುವವರು ಅತ್ಯಂತ ಮೋಡಿ ಮಾಡುವಂತಹ ಬಿಸಿಲೆ ಘಾಟ್ ವ್ಯೂ ಪಾಯಿಂಟ್ ತೆರಳಿ. ಇಲ್ಲಿನ ಪಶ್ವಿಮ ಘಟದ ಕೆಲವು ವೀಕ್ಷಣೆಗಳು ನಿಮ್ಮನ್ನು ಮಂತ್ರಮುಗ್ಧರಾಗಿಸುತ್ತದೆ. ಬಿಸಿಲೆ ಘಾಟ್ ವ್ಯೂ ಪಾಯಿಂಟ್ ಬಳಿ ಇರುವ ಯೆನಿಕಲ್ಲು ಬೆಟ್ಟ, ದೊಡ್ಡಬೆಟ್ಟ ಮತ್ತು ಪುಷ್ಪಗಿರಿ ಮತ್ತು ಕುಮಾರ ಪರ್ವತ ಎಂಬ ಪರ್ವತ ಶ್ರೇಣಿಗಳ ಅದ್ಭುತ ನೋಟವನ್ನು ನೀಡುತ್ತವೆ.

ಬಿಸಿಲೆ ಘಾಟ್ ವ್ಯೂ ಪಾಯಿಂಟ್ ಒಂದು ಸಾಹಸಮಯ ಸ್ಥಳವನ್ನು ನೋಡಬಹುದು. ಇಲ್ಲಿ ಒಬ್ಬರು ವಾಂಟೇಜ್ ಪಾಯಿಂಟ್ ವರೆಗೆ ಚಾರಣವನ್ನು ಆನಂದಿಸಬಹುದು. ಇಲ್ಲಿ ಪ್ರವಾಸಿಗರು ಕಾಡಿನ ಮೂಲಕ ತೆರಳುವಾಗ ನವಿಲುಗಳು, ಕೋತಿಗಳು, ಜಿಂಕೆಗಳು, ಆನೆಗಳಂತಹ ಕೆಲವು ವೈದ್ಯಮಯ ಕಾಡು ಪ್ರಾಣಿಗಳನ್ನು ನೋಡಬಹುದು. ಇಲ್ಲಿ ಜಲಪಾತ ಮತ್ತು ತೊರೆಗಳು ಹಚ್ಚ ಹಸಿರಿನಿಂದ ಕೂಡಿದ್ದು, ಬಿಸಿಲೆ ಘಾಟ್ ವ್ಯೂ ಪಾಯಿಂಟ್ ಗೆ ಅತ್ಯುನ್ನತ ಗೌರವವನ್ನು ತಂದುಕೊಡುತ್ತದೆ.

ಬಿಸಿಲೆ ಘಾಟ್ ವ್ಯೂ ಪಾಯಿಂಟ್ ಗೆ ಸೆಪ್ಟಂಬರ್ ನಿಂದ ಡಿಸೆಂಬರ್ ವರೆಗೆ ಭೇಟಿ ನೀಡಬಹುದು. ಇಲ್ಲಿನ ಹಚ್ಚಹಸಿರಾದ ನಿಸರ್ಗ ಪ್ರಕೃತಿ ಪ್ರಿಯರಿಗೆ ಮರೆಯಲಾಗದ ನೆನಪನ್ನು ನೀಡುತ್ತವೆ. ಇದು ಬಸ್ ನಿಲ್ದಾಣದಿಂದ 55 ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ಇಲ್ಲಿಗೆ ಬಸ್ ಮೂಲಕ ತೆರಳಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button