ಕ್ರೀಡೆ

ಕೊರೊನಾದಿಂದ ಆಟವಿಲ್ಲದೆ ನಿಂತ ಬದುಕಿನಾಟ

  • – ಸೋಮಶೇಖರ್ ಪಡುಕರೆ

ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ನಡೆಯಬೇಕಾಗಿದ್ದ ಹಲವಾರು ಕ್ರೀಡಾಕೂಟಗಳು ನಿಂತೇ ಹೋಗಿವೆ. ಬದುಕಿದ್ದರೆ ತಾನೇ ಆಟ? ಎಂದು ಹೇಳಬಹುದು. ನಿಜ ಒಪ್ಪುವ ವಿಚಾರ. ಆದರೆ, ಒಂದು ವರ್ಷದ ಕ್ರೀಡಾ ಬದುಕು ನಿಂತು ಹೋಯಿತೆಂದರೆ ಅದು ಎಲ್ಲೆಲ್ಲ ಪರಿಣಾಮ ಬೀಳುತ್ತದೆ ಎನ್ನುವುದನ್ನು ಗಮನಿಸಬೇಕು.

ಐಪಿಎಲ್ ಕ್ರಿಕೆಟನ್ನು ಯುಎಇಯಲ್ಲಿ ನಡೆಸಿದ್ದರಿಂದ 3,000 ಕೋಟಿ ರೂ, ನಷ್ಟವೆಂದು ಹೇಳಲಾಗುತ್ತಿದೆ. ಬಿಸಿಸಿಐನಲ್ಲಿ ಹಣವಿದೆ ಅದು ಮುಂದಿನ ದಿನಗಳಲ್ಲಿ ಈ ನಷ್ಟವನ್ನು ಸರಿದೂಗಿಸಬಹುದು. ಇಂಡಿಯನ್ ಸೂಪರ್ ಲೀಗ್ ಪಂದ್ಯಗಳು ಮುಚ್ಚಿದ ಅಂಗಣದಲ್ಲಿ ನಡೆಯಿತು. ಟಿಕೆಟ್ ಮಾರಾಟವಿಲ್ಲದೆ ನೂರಾರು ಕೋಟಿ ರೂ, ನಷ್ಟವಾಯಿತು. ಬ್ಯಾಡ್ಮಿಂಟನ್ ಲೀಗ್, ಹಾಕಿ ಲೀಗ್ ಗಳು ನಡೆಯಲೇ ಇಲ್ಲ. ಒಲಿಂಪಿಕ್ಸ್ ಗೆ ಸಜ್ಜಾದ ಜಪಾನ್ ಕ್ರೀಡಾಕೂಟವನ್ನೇ ಮುಂದೂಡುವ ಸ್ಥಿತಿ ಬಂದಾಗ ನೂರಾರು ಕೋಟಿ ರೂ.ಗಳ ನಷ್ಟ ಅನುಭವಿಸಬೇಕಾಯಿತು. ಇದೆಲ್ಲ ಅಂತಾರಾಷ್ಟ್ರೀಯ ಮಟ್ಟದ್ದು ನೋಡಿಕೊಳ್ಳಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಇದೆ ಕ್ರಿಕೆಟ್ ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇದೆ ಎಂದು ಹೇಳಬಹುದು. ಆದರೆ ಈ ಅಂತಾರಾಷ್ಟ್ರೀಯ ಸಂಘಟನೆಗಳಿಗೂ ಹಣ ಹರಿದುಬರಬೇಕಾದರೆ ಕ್ರೀಡಾಕೂಟಗಳು ನಡೆಯುತ್ತಿರಬೇಕು.

ಹೇಳ ಹೊರಟಿದ್ದು ಭಾರತದ ಕ್ರೀಡಾ ಬದುಕಿನ ಬಗ್ಗೆ. ಅದರಲ್ಲೂ ಸಣ್ಣಪುಟ್ಟ ಉತ್ಪಾದನಾ ಘಟಕಗಳ ಬಗ್ಗೆ. ಕಳೆದ ಒಂದು ವರ್ಷದಿಂದ ಶಾಲೆಗಳೇ ನಡೆಯುತ್ತಿಲ್ಲ. ಇದರಿಂದಾಗ ಭಾರತದಲ್ಲಿ ಯಾವುದೇ ಶಾಲಾ ಕ್ರೀಡಾಕೂಟಗಳೂ ನಡೆಯುತ್ತಿಲ್ಲ. ಇದು ಕೇವಲ ಆರ್ಥಿಕ ನಷ್ಟವನ್ನಲ್ಲ, ದೈಹಿಕ ಹಾಗೂ ಮಾನಸಿಕ ನಷ್ಟಗಳಿಗೂ ಕಾರಣವಾಗಿದೆ. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸಂಬಂಧಿಸಿದ್ದಲ್ಲ. ಉತ್ಪಾದಕರು ಮತ್ತು ಮಾರಾಟಗಾರರಿಗೆ ಆರ್ಥಿಕ ನಷ್ಟ ಸಂಭವಿಸಿದರೆ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ನಷ್ಟ ಸಂಭವಿಸಿದೆ.

ಬೆಂಗಳೂರಿನ ಜಿಮ್ ಸರಕುಗಳ ಉತ್ಪಾದಕರು ತಾವು ಅನುಭವಿಸಿದ ನಷ್ಟವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. “ಕಳೆದ ಒಂದು ವರ್ಷದಿಂದ ಯಾವುದೇ ಉತ್ಪನ್ನಗಳು ಮಾರಾಟವಾಗುತ್ತಿಲ್ಲ. ಸರಕಾರ ಬಾರ್ ನಡೆಸಲು ಅವಕಾಶ ನೀಡುತ್ತಿದೆ ಆದರೆ ಜಿಮ್ ಗೆ ಅವಕಾಶ ನೀಡಲಿಲ್ಲ. ಉತ್ಪಾದನೆ ನಿಂತಿದ್ದರೂ ಸಿಬ್ಬಂದಿಗಳಿಗೆ ವೇತನ ನೀಡಬೇಕು. ಎಷ್ಟೂ ಕ್ರೀಡಾ ಉತ್ಪನ್ನಗಳ ಮಾರಾಟಗಾರರ ಅಂಗಡಿಗಳು ಮುಚ್ಚಿದ್ದರಿಂದ ಲಕ್ಷಾಂತರ ಜನರ ಬದುಕು ಬೀದಿಪಾಆಲಾಗಿದೆ, ಇದು ಸಹಜ ಸ್ಥಿತಿಗೆ ಬರಲು ಕ್ರೀಡಾಕೂಟಗಳು ನಡೆಯಬೇಕು, ಶಾಲಾ ಕಾಲೇಜುಗಳು ತೆರೆದು ಕ್ರೀಡಾಚಟುವಟಿಕೆಗಳು ಆರಂಭಗೊಳ್ಳಬೇಕು,” ಎಂದು ಜಿಮ್ ಉತ್ಪನ್ನಗಳನ್ನು ತಯಾರಿಸುವ ಮತ್ತು ಆಮದು ಮಾಡಿಕೊಳ್ಳುವ ಅಚೀವರ್ಸ್ ಕಂಪೆನಿಯ ಮಾಲೀಕರಾದ ಜಯರಾಮ್ ಶೆಟ್ಟಿ ಅವರು ಹೇಳಿದ್ದಾರೆ.

ಒಂದು ರಾಷ್ಟ್ರೀಯ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆಯಿತೆಂದರೆ ಅಲ್ಲಿ ಸಾರಿಗೆ, ಹೊಟೇಲ್, ಪ್ರವಾಸೋದ್ಯಮ, ಟ್ರೋಫಿ, ಕ್ರೀಡಾಸಾಮಗ್ರಿಗಳು ಹೀಗೆ ಹಲವಾರು ವ್ಯಾಪಾರಗಳಿಗೆ ಅವಕಾಶ ಸಿಗುತ್ತದೆ. ಆದರೆ ಕ್ರೀಡಾಂಗಳು ಕೋವಿಡ್ ಆಸ್ಪತ್ರೆಗಳಾಗಿ ರೂಪುಗೊಂಡವು ಹೊರತು ಯಾವುದೇ ಕ್ರೀಡಾಕೂಟ ನಡೆಯಲಿಲ್ಲ.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚುವರಿ ಅಂಕ ಗಳಿಸಲು ನೆರವಾಗುತ್ತಿತ್ತು, ಆದರೆ ಕಳೆದ ವರ್ಷದಿಂದ ಯಾವುದೇ ಕ್ರೀಡಾಕೂಟಗಳು ನಡೆಯದ ಕಾರಣ ಕ್ರೀಡಾಪಟುಗಳಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆ ನೆರವಾಗುವ ಕ್ರೀಡಾಸಾಧನೆಗೆ ಯಾವುದೇ ಅವಕಾಶ ಸಿಗಲಿಲ್ಲ. ಒಬ್ಬ ಕ್ರೀಡಾ ಪಟುವಿನ ಬದುಕಿನಲ್ಲಿ ಎರಡು ವರ್ಷ ಕ್ರೀಡಾಚಟುವಟಿಕೆ ಇಲ್ಲದೆ ಮುಗಿಯಿತೆಂದರೆ ಅದು ಆತನ ಭವಿಷ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರಲಿದೆ. ವಯಸ್ಸಾದಂತೆ ದೇಹ ಸ್ಪರ್ಧೆಗೆ ಒಗ್ಗಿಕೊಳ್ಳುವುದು ಕಡಿಮೆ.

ಅನೇಕ ಕ್ರೀಡಾಪಟುಗಳ ಕ್ರೀಡೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುತ್ತಾರೆ. ಹೆತ್ತವರು ಕ್ರೀಡಾಸಾಧನೆಗಾಗಿ ಸಾಕಷ್ಟು ಹಣ ವ್ಯಯಮಾಡಿರುತ್ತಾರೆ. ಆದರೆ ಕ್ರೀಡಾಪಟುವಿಕೆ ಕಳೆದ ಎರಡು ವರ್ಷಗಳಲ್ಲಿ ತನ್ನ ಹೆತ್ತವರಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಲಿಲ್ಲ ಎಂಬ ನೋವು ಕಾಡುವುದು ಸಹಜ. ಕ್ರೀಡಾ ನಗದು ಬಹುಮಾನ, ಕ್ರೀಡಾ ಸ್ಕಾಲರ್ಶಿಪ್, ಅಂತರರಾಷ್ಟ್ರೀಯ ಟೂರ್ನಿ, ಉತ್ತಮ ಆಹಾರ, ಹೊರಾಂಗಣದ ಅಭ್ಯಾಸ ಎಲ್ಲವೂ ನಿಂತುಹೋಗಿ ಕ್ರೀಡಾಲೋಕ ಪುನಃ ತನ್ನ ಬದುಕನ್ನು ಆರಂಭಿಸಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button