Breaking NewsLatestಕ್ರಿಕೆಟ್ಕ್ರೀಡೆ

ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್: ಊಟಕ್ಕೆ ಮುನ್ನ ಭಾರತದ ಅದ್ಭುತ ಆಟ!

ಸೌತ್ ಹ್ಯಾಂಪ್ಟನ್: ನಾಲ್ಕನೇ ದಿನದ ಅಂತ್ಯಕ್ಕೆ 101ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನ ಐದನೇ ದಿನದ ಭೋಜನ ವಿರಾಮಕ್ಕೆ ಮುನ್ನ ಸಂಕಷ್ಟಕ್ಕೆ ಸಿಲುಕಿದೆ.

ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಪರಸ್ಪರ ಮೂರು ವಿಕೆಟ್ ಗಳನ್ನು ಹಂಚಿಕೊಳ್ಳುವುದರೊಂದಿಗೆ ಕಿವೀಸ್ 135 ರನ್ ಗೆ ಅಮೂಲ್ಯ 5 ವಿಕೆಟ್ ಕಳೆದುಕೊಂಡಿತು‌.

ಮಳೆಯಿಂದಾಗಿ ಪಂದ್ಯ ತಡವಾಗಿಯೇ ಆರಂಭಗೊಂಡಿತು. ಖಾತೆ ತೆರೆಯದೆ ದಿನದಾಟ ಆರಂಭಿಸಿದ ರಾಸ್ ಟೇಲರ್ 11ರನ್ ಗಳಿಸುತ್ತಲೇ ಶಮಿ ಬೌಲಿಂಗ್ ನಲ್ಲಿ ಗಿಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಹೆನ್ರಿ ನಿಕೊಲಾಸ್ ಕೂಡ ಹೆಚ್ಚು ಕಾಲ ಕ್ರೀಸಿನಲ್ಲುಳಿಯದೆ 7 ರನ್ ಗಳಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ವಾಟ್ಲಿಂಗ್ ಕೂಡ ಶಮಿಯ ವೇಗವನ್ನರಿಯದೆ 1 ರನ್ ಗೆ ತೃಪ್ತಿಪಟ್ಟರು. ಈಗ ಕಿವೀಸ್ ಪಡೆ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಆಧರಿಸಿದೆ. ವಿಲಿಯಮ್ಸ್ ನ್ 112 ಎಸೆತಗಳನ್ನೆದುರಿಸಿ ತಾಳ್ಮೆಯ 19 ರನ್ ಗಳಿಸಿರುತ್ತಾರೆ.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್: 217
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ : 135/5 (ವಿಲಿಯಮ್ಸನ್ 19* , ಇಶಾಂತ್ ಶರ್ಮಾ 27ಕ್ಕೆ2, ಶಮಿ 31ಕ್ಕೆ2)

Spread the love

Related Articles

Leave a Reply

Your email address will not be published. Required fields are marked *

Back to top button