Breaking Newsಕ್ರಿಕೆಟ್ಕ್ರೀಡೆ

ವಿಶ್ವಟೆಸ್ಟ್ ಫೈನಲ್: ಭಾರತ 217ಕ್ಕೆ ಆಲೌಟ್

ಸೌಥ್ ಹ್ಯಾಂಪ್ಟನ್: ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 217 ರನ್ ಗೆ ಆಲೌಟ್ ಆಯಿತು.

ಮಳೆಯಿಂದಾಗಿ ಬ್ಯಾಟಿಂಗ್ ಗೆ ಕಠಿಣವೆನಿಸಿರುವ ಪಿಚ್ ನಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಗಳಿಸಿರುವ ಈ ಮೊತ್ತ ಕಿವೀಸ್ ಪಡೆಗೆ ಕಠಿಣವೆನಿಸಲೂಬಹುದು.

ಎರಡನೇ ದಿನದಲ್ಲಿ 146 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ, ಮೂರನೇ ದಿನದ ಭೋಜವ ವಿರಾಮ ಮುಗಿಯುತ್ತಿದ್ದಂತೆ ಸರ್ವ ಪತನ ಕಂಡಿತು. ಭಾರತ 250 ರನ್ ಗಡಿ ದಾಟಿರುತ್ತಿದ್ದರೆ ಎದುರಾಳಿ ತಂಡದ ಮನೋಬಲವನ್ನು ಕುಗ್ಗಿಸಬಹುದಾಗಿತ್ತು. ಜೆಮಿಸನ್ 31 ರನ್ ಗೆ 5 ವಿಕೆಟ್ ಗಳಿಸಿ ಭಾರತದ ರನ್ ಗಳಿಕೆಗೆ ಕಡಿವಾಣ ಹಾಕಿದರು. ರವೀಂದ್ರ ಜಡೇಜಾ (15) ಅಂತಿಮ ಹಂತದಲ್ಲಿ ರನ್ ಗಳಿಸಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು.

ಎರಡನೇ ದಿನದಲ್ಲಿ 44 ರನ್ ಗಳಿಸಿ ಆಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ (44) ಅದೇ ಮೊತ್ತಕ್ಕೆ ಪೆವಿಲಿಯನ್ ಸೇರಿದ್ದು ಭಾರತದ ದುರಾದೃಷ್ಟ. ಜೆಮಿಸನ್ ಅವರ ನಿಖರ ದಾಳಿಗೆ ಕೊಹ್ಲಿ ಎಲ್ಬಿಗೆ ಬಲಿಯಾದರು. ಆಸೀಸ್ ಪ್ರವಾಸದ ವೇಳೆ ತಂಡಕ್ಕೆ ಶ್ರೀರಕ್ಷೆಯಾಗಿದ್ದ ರಿಶಬ್ ಪಂಥ್, 20 ಎಸೆತಗಳನ್ನು ಎದುರಿಸಿದ ನಂತರ ಬೌಂಡರಿಯೊಂದಿಗೆ ಖಾತೆ ತೆರೆದು ಆತ್ಮವಿಶ್ವಾಸ ಮೂಡಿಸಿದರು. ಆದರೆ ಜಮಿಸನ್ ಅವರ ಅದೇ ಓವರ್ ನಲ್ಲಿ ನಥಾನ್ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು. ವಿಶ್ವ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿರುವ ಅಜಿಂಕ್ಯ ರಹಾನೆ ಫೈನಲ್ ಪಂದ್ಯದಲ್ಲೂ ತಾಳ್ಮೆಯ ಆಟ ಪ್ರದರ್ಶಿಸಿದರು. ಆದರೆ 49 ರನ್ ಗಳಿಸುವಷ್ಟರಲ್ಲೇ ವ್ಯಾಗನರ್ ಬೌಲಿಂಗ್ ನಲ್ಲಿ ಲಥಾಮ್ ಗೆ ಕ್ಯಾಚಿತ್ತು ನಿರ್ಗಮಿಸಿದರು. 117 ಎಸೆತಗಳನ್ನೆದುರಿಸಿದ ರಹಾನೆ ಅವರ ಇನ್ನಿಂಗ್ಸ್ ನಲ್ಲಿ 5 ಬೌಂಡರಿ ಸೇರಿತ್ತು. ರವಿಚಂದ್ರನ್ ಅಶ್ವಿನ್ ಅಮೂಲ್ಯವಾದ 22 ರನ್ ಕೊಡುಗೆ ನೀಡಿ ತಂಡದ ಸಾಧಾರಣ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ ಪ್ರಥಮ ಇನ್ನಿಂಗ್ಸ್ (92.1 ಓವರ್ ಗಳಲ್ಲಿ 217)

ವಿರಾಟ್ ಕೊಹ್ಲಿ – 44, ಅಜಿಂಕ್ಯಾ ರಹಾನೆ – 49, ಆಶ್ವಿನ್ 22, ಜೆಮಿನಸ್ 31ಕ್ಕೆ 5

Spread the love

Related Articles

Leave a Reply

Your email address will not be published. Required fields are marked *

Back to top button