ಇತರ ಕ್ರೀಡೆಕ್ರೀಡೆಟೆನಿಸ್
ವಿಂಬಲ್ಡನ್ ಮಹಿಳಾ ಫೈನಲ್: ಬಾರ್ಟಿ ಎದುರಾಳಿ ಪ್ಲಿಸ್ಕೋವಾ

ಲಂಡನ್: ಅಗ್ರಶ್ರೇಯಾಂಕಿತ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಮತ್ತು ಮಾಜಿ ನಂ.1 ಆಟಗಾರ್ತಿ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ನಡುವೆ ಈ ಬಾರಿಯ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪಂದ್ಯ ನಡೆಯಲಿದೆ. ಯಾರೇ ಗೆದ್ದರೂ ವಿಂಬಲ್ಡನ್ ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾರ್ಟಿ ಅವರು ಏಂಜಲಿಕ್ ಕೆರ್ಬರ್ ವಿರುದ್ಧ 6-3, 7-6 (7-3) ಅಂತರದಲ್ಲಿ ಜಯ ಗಳಿಸಿದರೆ, ಪ್ಲಿಸ್ಕೋವಾ ಎರಡನೇ ಸೀಡ್ ಆಟಗಾರ್ತಿ ಅರಿನಾ ಸಬಲೆಂಕಾ ವಿರುದ್ಧ 5-7, 6-4, 6-4 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದರು. 1977ರ ನಂತರ ಮೊದಲ ಬಾರಿಗೆ ಇಬ್ಬರೂ ಆಟಗಾರ್ತಿಯರು ತಮ್ಮ ಚೊಚ್ಚಲ ಫೈನಲ್ ಪಂದ್ಯದಲ್ಲಿ ಸೆಣಸಲಿದ್ದಾರೆ.
ಇಂದು ಪುರುಷರ ವಿಭಾಗದ ಫೈನಲ್ ಪಂದ್ಯಗಳು ನಡೆಯಲಿದ್ದು, ವನಿತೆಯರ ಫೈನಲ್ ಶನಿವಾರ ನಡೆಯಲಿದೆ. ಸಿಂಗಲ್ಸ್ ನಲ್ಲಿ ವಿಜೇತ ಆಟಗಾರರು 17 ಕೋಟಿ ರೂ.ಗಳನ್ನು ತಮ್ಮದಾಗಿಸಕೊಳ್ಳಲಿದ್ದಾರೆ. ಪುರುಷ ಮತ್ತು ಮಹಿಳಾ ವಿಭಾಗಗಳಿಗೆ ಸಮಾನ ಬಹುಮಾವಿರುತ್ತದೆ.