ಬಿಜೆಪಿಯಲ್ಲಿ ಕರ್ನಾಟಕ ಸಿಎಂ ಬದಲಾವಣೆ ಅಜೆಂಡಾ ಇಲ್ಲ: ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ: ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಮಾಧ್ಯಮಗಳಲ್ಲಿ ಬರ್ತಿರೋ ಕಾರಣದಿಂದ ಒಂದು ಅದಕ್ಕೆ ಫುಲ್ ಸ್ಟಾಪ್ ಹಾಕಬೇಕು ಎಂದು ಸಿಎಂ ಹಾಗೆ ಹೇಳಿದ್ದಾರೆ ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸೂಚನೆ ನೀಡದ್ರೆ ನಾನು ರಾಜೀನಾಮೆ ಕೊಡ್ತೀನಿ ಅಂದಿದ್ದಾರೆ.ಹೈಕಮಾಂಡ್ ನಲ್ಲಾಗಲಿ, ರಾಜ್ಯದಲ್ಲಾಗಲಿ ಸಿಎಂ ಬದಲಾವಣೆ ಅಜೆಂಡಾ ಇಲ್ಲ.ಮಾಧ್ಯಮಗಳಲ್ಲಿ ಬರ್ತಿರೋ ಕಾರಣಗಳಿಂದ ರೆಕ್ಕೆಪುಕ್ಕಗಳನ್ನು ಹಚ್ತಿರೋ ಕೆಲಸ ನಡಿತಿವೆ ಅಷ್ಟೇ.ಅದಕ್ಕೆ ಅದನ್ನ ಯಾರೂ ಗಂಭೀರವಾಗಿ ಪರಿಗಣಿಸಬಾರದು.ನಮ್ಮ ಪಕ್ಷದ ಮುಂದೆ ಕರ್ನಾಟಕದ ಸಿಎಂ ಬದಲಾವಣೆ ಅಜೆಂಡಾ ಇಲ್ಲ. ಯಡಿಯೂರಪ್ಪ ಅವ್ರೇಪೂರ್ಣಾವಧಿ ಸಿಎಂ ಆಗಿರ್ತಾರೆ.ಇಂತಹ ಸುದ್ದಿಗಳಿಗೆ ಹೆಚ್ಚಿನ ಬೆಲೆ ಕೊಡುವ ಅವಶ್ಯಕತೆ ಇಲ್ಲ ಎಂದರು.
ಪ್ರತಿಪಕ್ಷ ಕಾಂಗ್ರಸ್ಸಿನವರು ಟೀಕೆ ಮಾಡ್ತಾರೆ.ಕಾಂಗ್ರೆಸ್ಸಿನವರಿಗೆ ಬಹಳ ಅವಸರವಾಗಿ ಚುನಾವಣೆ ಬರಬೇಕಿದೆ.ಈಗಾಗಲೇ ಅಭ್ಯರ್ಥಿಗಳಿಗೆ ಕೆಲಸಾನೂ ಹಚ್ಚಿದ್ದಾರೆ ಅಂತ ನನಗೆ ಮಾಹಿತಿ ಇದೆ.೨೨೪ ಕ್ಷೇತ್ರದಲ್ಲೂ ಬೇಗ ಚುನಾವಣೆ ಮಾಡಬೇಕು ಅಂತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಅಂತ ಕೇಳಿದ್ದೀನಿ.ಆದ್ರೆ ಅವರ ಆಸೆ ಈಡೇರಲಿಕ್ಕೆ ಸಾಧ್ಯವಿಲ್ಲ.ಖಂಡಿತವಾಗಿಯೂ ಅವಧಿ ಮುಗಿದ ಮೇಲೆಯೇ ಕರ್ನಾಟಕದಲ್ಲಿ ಚುನಾವಣೆ ಬರುತ್ತೆ ಹೊರತು, ಮಧ್ಯದಲ್ಲಿ ಬರಲ್ಲ.ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬರಬೇಕು ಅಂತೇಳಿ ಹಗಲು ಕನಸು ಕಾಣ್ತಿದಾರೆ ಅದು ಬರಲಿಕ್ಕೆ ಸಾಧ್ಯವಿಲ್ಲ ಎಂದರು.