ಕನಕಪುರದಲ್ಲಿ ವಿದೇಶಿ ಹಕ್ಕಿಗಳ ಕಲರವ

ರಾಮನಗರ: ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಮರಳೇಬೇಕುಪ್ಪೆ ಕೆರೆಯಲ್ಲಿ ಪೇಂಟೆಡ್ ಸ್ಟಾರ್ಕ್ ವಿದೇಶಿ ಪಕ್ಷಿಗಳು ಪ್ರತ್ಯಕ್ಷವಾಗಿವೆ.
ರಷ್ಯಾ ದೇಶದ ಸೈಬೀರಿಯದಿಂದ ನೂರಾರು ವಿದೇಶಿ ಪಕ್ಷಿಗಳು ಆಗಮನವಾಗಿದ್ದು, ಕನಕಪುರ ತಾಲ್ಲೂಕಿನಲ್ಲಿ ನೂರಾರು ಕೆರೆಗಳ ಹೂಳೆತ್ತಿ ಕೆರೆ ಅಭಿವೃದ್ಧಿ ಪಡಿಸುವ ಕೆಲಸ ಪೂರ್ಣಗೊಂಡಿದ್ದು ತಾಲ್ಲೂಕಿನ ಎಲ್ಲಾ ಕೆರೆಗಳಲ್ಲಿ ನೀರು ಇರುವುದರಿಂದ ವಿದೇಶಿ ಪಕ್ಷಿಗಳು ಕನಕಪುರ ತಾಲ್ಲೂಕಿನ ನ್ನು ಆಯ್ಕೆ ಮಾಡಿಕೊಂಡಿವೆ. ಮರಳೇಬೇಕುಪ್ಪೆ ಕೆರೆಯಲ್ಲಿ ಮೀನು ಹಿಡಿಯದಂತೆ ಗ್ರಾಮಸ್ಥರಿಗೆ ಕಾಂಗ್ರೆಸ್ ಅಧ್ಯಕ್ಷ ಎಂ ಡಿ ವಿಜಯದೇವ್ ಅವರು ಮನವಿ ಮಾಡಿದ್ದರು.
ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು, ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿ ಧಾಮದಲ್ಲಿ ಕಂಡು ಬರುತ್ತಿದ್ದ ವಿದೇಶಿ ಪಕ್ಷಿಗಳು ಪ್ರಸ್ತುತ ಕನಕಪುರ ತಾಲ್ಲೂಕಿನ ಕೆರೆಗಳಲ್ಲಿ ಕಂಡು ಬರುತ್ತಿವೆ.
ಕನಕಪುರ ತಾಲೂಕಿನ ಕೆರೆಗಳನ್ನು ಅಭಿವೃದ್ಧಿ ಮಾಡಿರುವ ಸಂಸದ ಡಿ. ಕೆ. ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಂಎಲ್ಸಿ ಎಸ್. ರವಿ ಅವರಿಗೆ ಧನ್ಯವಾದಗಳನ್ನು ಪರಿಸರ ಪ್ರೇಮಿ ಮರಸಪ್ಪ ರವಿ ತಿಳಿಸಿದ್ದಾರೆ.