Breaking NewsUncategorized
ಬೆಂಗಳೂರಿನಲ್ಲೂ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ

ನವದೆಹಲಿ: ಬೆಂಗಳೂರಿನಲ್ಲಿಯೂ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ.
ಜೂನ್ 18ರಂದು ಪೆಟ್ರೋಲ್ ಬೆಲೆ ಬೆಂಗಳೂರಲ್ಲಿ ಪ್ರತಿ ಲೀಟರ್ಗೆ ರೂ. 100.17 ಮುಟ್ಟಿದೆ. ಡೀಸೆಲ್ ಬೆಲೆ 92.97 ಪ್ರತಿ ಲೀಟರ್ ಆಗಿದೆ.
ಮೇ 29ರಂದು ಮೊದಲ ಬಾರಿಗೆ ಮುಂಬೈನಲ್ಲಿ ಪೆಟ್ರೋಲ್ ದರ 100ರು ಗಡಿ ದಾಟಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಲಡಾಕ್ ಅಲ್ಲದೇ ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ.
ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಶುಕ್ರವಾರ ಪರಿಷ್ಕರಣೆ ಮಾಡಿವೆ. ಮೇ 4ರಿಂದ ಇಲ್ಲಿಯತನಕ ಒಟ್ಟಾರೆ 27ನೇ ಬಾರಿಗೆ ಬೆಲೆ ಏರಿಕೆ ಆಗಿದೆ.