Uncategorizedಸಿನಿಮಾಸೆಲೆಬ್ರಿಟಿ

ಅನಾಮಧೇಯನಿಂದ ಉಪೇಂದ್ರಗೆ ಉಲ್ಟಾ ಪ್ರಶ್ನೆ!

ಪೂರ್ಣ ವಿ-ರಾಮ

ನಟ ನಿರ್ದೇಶಕ ಉಪೇಂದ್ರ ಸದ್ಯ ಹೆಚ್ಚು ಸುದ್ದಿಯಲ್ಲಿರೋ ವ್ಯಕ್ತಿ. ಲಾಕ್ ಡೌನ್ ಸಮಯದಲ್ಲಿ ಒಂದಷ್ಟು ಬಡ ಕಲಾವಿದರು ಮತ್ತು ಕಾರ್ಮಿಕರಿಗೆ ಸಹಾಯ ಹಸ್ತ ಚಾಚುತ್ತಾ ಬಂದಿರೋ ಪ್ರಜಾಕೀಯದ ರೂವಾರಿ ರೀಯಲ್ ಸ್ಟಾರ್ ಉಪೇಂದ್ರ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ವ್ಯಕ್ತಿಯೊಬ್ಬ ಕೇಳಿದ್ದಾನೆ. ಅದು ಇದೀಗ ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್​ಗಳಲ್ಲಿ ಹೆವೀ ಸದ್ದು ಮಾಡುತ್ತಿದೆ. ಉಪೇಂದ್ರ ಅವರು ವಯಕ್ತಿಕವಾಗಿ ಹೇಗೆ? ಅವರ ಆಸ್ತಿ ಪಾಸ್ತಿಗಳ ವಿವರವೇನು? ಅವರ್ಯಾಕೆ ಪ್ರಜಾಕೀಯ ಅಂತ ಮಾತೆತ್ತಿದರೆ ಎದ್ದು ನಿಲ್ಲುತ್ತಾರೆ ಎಂಬೆಲ್ಲಾ ವಿಷಯಕ್ಕೆ ಪ್ರಶ್ನೆ ಎತ್ತಿದ್ದಾರೆ! ಹಾಗಾದರೆ ಆ ಹದಿನಾಲ್ಕು ಪ್ರಶ್ನೆಗಳು ಯಾವುದು? ಇಲ್ಲಿದೆ ಡೀಟೇಲ್ಸ್…!

“ಉಪೇಂದ್ರ ಅವರಿಗೆ ಪ್ರಶ್ನೆ…

1) ಉಪೇಂದ್ರ ನಿಮ್ಮ ಆಸ್ತಿ ಎಷ್ಟಿದೆ
2) ನೀವು ಅಮಿತ್ ಶಾ ಅವರನ್ನು ಭೇಟಿ ಮಾಡಿ ಒಳ್ಳ ಒಪ್ಪಂದ ಮಾಡಿಕೊಂಡಿರಾ ಅಲ್ವಾ
3) ಬಿಜೆಪಿ ಜೊತೆ ಹೊಂದಾಣಿಕೆ ಇದೆ ಅಲ್ವಾ
4) ಅಹೋರಾತ್ರ ಅವರು ಬ್ರಾಹ್ಮಣರು ಮತ್ತು ನಿಮ್ಮ ಸ್ನೇಹಿತರು ಎಂದು ಟಿಕೆಟ್ ಕೊಟ್ಟಿದು ನಿಜ ಅಲ್ವಾ (ಬ್ರಾಹ್ಮಣ ಕ್ರೇತದಲ್ಲಿ)
5) ನೀವು UB ಎಂಬ BEER ಕಂಪನಿಗೆ ಜಾಹಿರಾತು ಕೊಟ್ಟಿದು ನಿಜ ಅಲ್ವಾ?
6) ಅಹೋರಾತ್ರ ಅವರನ್ನು ಸುದೀಪ್ ಹಿಂದೆ ಬಿಟ್ಟಿದು ನೀವೇ… (RUMMY GAME)
7) ಮುನಿರತ್ನ ಅವರಿಗೆ ಅನುಕೂಲ ಆಗಲಿ ಎಂದು ಪ್ರಜಾಕೀಯದಿಂದ ಯಾರಿಗೂ ಸ್ಪರ್ಧೆ ಮಾಡಲು ಅವಕಾಶ ನೀಡಲಿಲ್ಲ ನೀವು ಅಲ್ವಾ
8) ನೀವು ದೆಹಲಿಗೆ ಭೇಟಿ ನೀಡಿ, ಬಿಜೆಪಿ ಬ್ರಾಹ್ಮಣರ ಹೈಕಮಾಂಡ್ ಭೇಟಿ ಮಾಡಿದ್ದು ನಿಜ ಅಲ್ವಾ?
9) ನಿಮ್ಮ ಬೇನಾಮಿ ಆಸ್ತಿ ನಿಮ್ಮ ಅಣ್ಣನ ಹೆಸರಿನಲ್ಲಿ ಇದೆ ಅಲ್ವಾ?
10) ಅಂಬೇಡ್ಕರ್ ಮತ್ತು ಸಂವಿಧಾನ ಬದಲಾವಣೆ ಮಾಡಲು ನಿಮ್ಮ ಉದ್ದೇಶ ಅಲ್ವಾ?
11) ಬ್ರಾಹ್ಮಣರು ಬುದ್ಧಿವಂತರು ಅವರಿಗೆ ಶೂದ್ರರನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿದೆ?
12) ಮೇಲು ಕೀಳು ಎಂದು ಹುಟ್ಟಿಹಾಕಿದ್ದು ಬ್ರಾಹ್ಮಣರು..
13) ಉಪೇಂದ್ರ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ..
14) ಬಿಜೆಪಿ ಪಕ್ಷದ ಭ್ರಷ್ಟಾಚಾರ ವಿರುದ್ಧ ಒಂದು ಮಾತು ಆಡೋದಿಲ್ಲ ಯಾಕೆ?!”

**************

ಮೇಲೆ ಇರೋ ಪ್ರಶ್ನೆಗಳನ್ನ ನಾವು ಕೂಲಂಕಷವಾಗಿ ಪರಾಮರ್ಶೆ ಮಾಡಿ ನೋಡಿದಾಗ ಸಿಗುವ ಉತ್ತರ ನಾನವನಲ್ಲ ನಾನವನಲ್ಲವೋ ಅಥವಾ ಐ ಲೈಕ್ ಇಟ್ ಐ ಲೈಕ್ ಇಟ್ ಕಾಂತವೋ ಕಾದು ನೋಡಬೇಕಿದೆ. ಖುದ್ದು ಉಪ್ಪಿಯವರು ಈ ಅಮಾಮಧೇಯನ ಅನ್ ಬಿಲೀವೆಬಲ್ ಪ್ರಶ್ನೆಗೆ ಉತ್ತರಿಸಬೇಕಿದೆ!

 

 

Spread the love

Related Articles

Leave a Reply

Your email address will not be published. Required fields are marked *

Back to top button