Uncategorizedಉಡುಪಿ

ಪಣಿಯಾಡಿ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನ ನವೀಕರಣ

ಉಡುಪಿ: ಇತಿಹಾಸ ಪ್ರಸಿದ್ಧ ಪಣಿಯಾಡಿಯಲ್ಲಿನ ಶ್ರೀ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ನವೀಕರಣದ ನಡೆಸಲಾಗಿದೆ. ಶಿಲಾಮಯ ಗರ್ಭಗೃಹ ಹಾಗೂ ಶಿಲಾಮಯ ತೀರ್ಥಮಂಟಪ ನಿರ್ಮಿಸಿ ದೇವರಿಗೆ ಸಮರ್ಪಣೆ ಮಾಡಲಾಯ್ತು. ಕೊರೋನಾ ಲಾಕ್ ಡೌನ್ ನಿಯಮ ಇರುವುದರಿಂದ ದೇಗುಲದ ಅರ್ಚಕ ಆಡಳಿತ ಮಂಡಳಿ ಸದಸ್ಯರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಶ್ರೀದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶ ಅಭಿಷೇಕವು ನಡೆಸಲಾಯ್ತು. ಉಡುಪಿ ಪುತ್ತಿಗೆ ಮಠಕ್ಕೆ ಆಡಳಿತವಿರುವ ದೇಗುಲದ ಪುನಃಸ್ಥಾಪನಾ ಕಾರ್ಯಕ್ರಮಗಳು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು. ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಹಾಗೂ ಪಂಜ ಭಾಸ್ಕರ ಭಟ್ ಇವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಆ ಶಾಸ್ತ್ರಕ್ಕೆ ಚ್ಯುತಿಯಾಗದಂತೆ ಸರಳವಾಗಿ ಕಾರ್ಯಕ್ರಮ ಸಂಪನ್ನ ಗೊಂಡಿತು. ಪ್ರತಿಷ್ಠೆ ಸಂದರ್ಭ 108 ಕಲಶಾಭಿಷೇಕ ನಡೆಸಲಾಗಿದ್ದು, ಜೀರ್ಣೋದ್ಧಾರ ಸಂಪೂರ್ಣವಾದ ನಂತರ 1008 ಕಲಶಾಭಿಷೇಕ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.

ಸತ್ಯನಾರಾಯಣ ಪೂಜೆಯನ್ನು ನಡೆಸುವ ಮೂಲಕ ಎರಡನೇ ಹಂತದ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button