ಮತದಾರರಿಗೆ ನಾನು ಒಂದು ರೂಪಾಯಿ ಹಣ ಕೊಡುವುದಿಲ್ಲ: ವಾಟಾಳ್ ನಾಗರಾಜ್

ಮೈಸೂರು: ಎಂಎಲ್ ಸಿ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಮತದಾರರಿಗೆ ನಾನಂತೂ ಒಂದು ರೂಪಾಯಿ ಕೊಡಲ್ಲ, ಆದ್ರೆ ಮೂರು ಪಕ್ಷಗಳ ಅಭ್ಯರ್ಥಿಗಳು ಕೊಡುವುದಿಲ್ಲ ಎಂದು ಆಣೆ ಮಾಡಿ ಎಂದು ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಸವಾಲ್ ಹಾಕಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು ನಾನು ಮತದಾರರಿಗೆ ಒಂದು ರೂ. ನೀಡುವುದಿಲ್ಲ. ನಿಮ್ಮ ಪರವಾಗಿ ಎಲ್ಲಿಯಾದರೂ ಹೋರಾಟ ಮಾಡುತ್ತೀನಿ ಅಂತ ಭರವಸೆ ನೀಡಿದ್ದೀನಿ ಎಂದರು.

ಧರ್ಮಸ್ಥಳ ಮಂಜುನಾಥ ಸೇರಿದಂತೆ ನೀವು ಸೂಚಿಸಿದ ದೇವರ ಮೇಲೆ ಆಣೆ ಮಾಡುತ್ತೀನಿ. ಅದೇ ತರ ಇತರೆ ಪಕ್ಷದ ಅಭ್ಯರ್ಥಿಗಳಿಂದ ಆಣೆ ಮಾಡಿಸಿ ಎಂದರು. ಬಿಜೆಪಿ ಅಭ್ಯರ್ಥಿ ಕೌಟಿಲ್ಯ ರಘು ಮಾತನಾಡಿ, ಮೂರು ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ಯಾವುದೇ ಆಮಿಷ ಒಡ್ಡುವುದಿಲ್ಲ ಎಂದು ಸಂವಿಧಾನದ ಮೇಲೆ ಆಣೆ ಮಾಡಿದರು.

ಸಚಿವ ಸೋಮಶೇಖರ್ ಅವರು ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡರ ಮೇಲೆ ಗಂಭೀರ ಆರೋಪಕ್ಕೆ ಸೋಮಶೇಖರ್ ಅವರೇ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮಾತನಾಡಿ, ಸಚಿವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಚುನಾವಣೆ ಆಯೋಗ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೀನಿ. ಆರೋಪ ಸಾಬೀತುಪಡಿಸಿದರೆ, ಚುನಾವಣೆ ಕಣದಿಂದಲೇ ಹಿಂದೆ ಸರಿಯುವೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ತಿಮ್ಮಯ್ಯ ಮಾತನಾಡುತ್ತಾ, ಇದೇ ಮೊದಲ ಬಾರಿಗೆ ನಾನು ಚುನಾವಣೆ ಸ್ಫರ್ಧೆ ಮಾಡಿದ್ದೀನಿ. ಮತದಾರರಿಗೆ ಯಾವುದೇ ಆಮಿಷಯೊಡ್ಡಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here