ಪ್ರತಿನಿತ್ಯ ವೇದ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ದೇಹದಲ್ಲಿ ಹಲವು ಶಕ್ತಿಕೇಂದ್ರಗಳು ಅಥವಾ ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.
ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ.
ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ.
ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ.
ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ.
ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ.
ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ.
ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನಸ್ಸು ನಿರಾಳವಾಗುತ್ತದೆ - ಮನಸ್ಸು ಉದ್ವೇಗಗೊಂಡಿದ್ದಾಗ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.
ಖಿನ್ನತೆಯನ್ನು ನಿವಾರಿಸುತ್ತದೆ, ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವುಗಳನ್ನು ಮಂತ್ರ ಪಠಿಸುವ ಮೂಲಕ ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ.
ತೇಜಸ್ಸನ್ನು ಹೆಚ್ಚಿಸುತ್ತದೆ- ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸುವಾಗ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ.