BREAKING NEWS:
ಮಲ್ಪೆ: ಮ್ಯಾಂಡಸ್ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ನೀಡಿರುವ ಮುನ್ನೆಚ್ಚರಿಕೆಯ ಅನುಸಾರ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಹೆಚ್ಚಿನ ದೋಣಿಗಳೂ ತಟದತ್ತ ಧಾವಿಸಿವೆ.
ಮೂರ್‍ನಾಲ್ಕು ದಿನದ ಹಿಂದೆ ಉತ್ತರ ದಿಕ್ಕಿಗೆ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಮೀನುಗಾರರಿಗೆ ಯಾವ ಸಮಸ್ಯೆಯೂ ಎದುರಾಗಿಲ್ಲವಾದರೂ ದಕ್ಷಿಣದತ್ತ ಸಾಗಿದ ಬೋಟುಗಳು ಗಾಳಿಯ ಒತ್ತಡದಿಂ ದಾಗಿ ಮೀನುಗಾರಿಕೆ ನಡೆಸಲಾಗದೆ ಸಮೀಪದ ಬಂದರು ಪ್ರವೇಶಿಸಿವೆ.
ಇದೀಗ ಉತ್ತರದ ಕಡೆಯಲ್ಲೂ ಆಳಸಮುದ್ರದಲ್ಲಿ ಚಂಡಮಾರುತ ಪ್ರಭಾವ ಕಾಣಿಸಿಕೊಂಡಿದ್ದು ಅತ್ತ ತೆರಳಿದ್ದ ಆಳಸಮುದ್ರ ಬೋಟುಗಳ ಪೈಕಿ ಕೆಲವು ಸಮುದ್ರ ಮಧ್ಯೆ ಲಂಗರು ಹಾಕಿ ನಿಂತರೆ, ಇನ್ನು ಕೆಲವು ಸಮೀಪದ ಬಂದರನ್ನು ಆಶ್ರಯಿಸಿವೆ.
ಆಳಸಮುದ್ರದಲ್ಲಿರುವ ಬೋಟುಗಳು ಗಾಳಿಯ ಒತ್ತಡ ಕಡಿಮೆ ಆದಾಗ ಮೀನುಗಾರಿಕೆ ಮಾಡುವ ಸಾಧ್ಯತೆ ಇದೆ. ಬಂದರು ಸೇರಿರುವ ದೋಣಿಗಳು ಹವಾಮಾನ ಇಲಾಖೆ ಸೂಚನೆಯ ಬಳಿಕ ಹೊರಡಲಿವೆ ಎಂದು ಮಲ್ಪೆ ಮೀನುಗಾರರ ಸಂಘದ ಕಾರ್ಯದರ್ಶಿ ರತ್ನಾಕರ ಸಾಲ್ಯಾನ್ ತಿಳಿಸಿದ್ದಾರೆ.