BREAKING NEWS: ಕೋವಿಡ್ ಸೋಂಕಿನಿಂದ ವಿಶ್ವಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 40 ಲಕ್ಷಕ್ಕೂ ಅಧಿಕವಾಗಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಡೆಲ್ಟಾ ಪ್ರಬೇಧ ವೇಗವಾಗಿ ಹಬ್ಬುತ್ತಿದೆ. ಸೋಂಕು ಆರಂಭವಾಗಿ 1 ವರ್ಷದ ಅವಧಿಯೊಳಗೆ ಸುಮಾರು 20 ಲಕ್ಷ ಮಂದಿ ಸೋಂಕಿತರು ಸಾವನ್ನಪ್ಪಿದರೆ ಉಳಿದ 20 ಲಕ್ಷದಷ್ಟು ಮಂದಿ ಕಳೆದ 5 ತಿಂಗಳ ಅವಧಿಯೊಳಗೆ ಮೃತರಾಗಿದ್ದಾರೆ. ಪ್ರತಿನಿತ್ಯ ಸಾಯುವವರ ಸಂಖ್ಯೆ ಭಾರತ ಮತ್ತು ಬ್ರೆಜಿಲ್ ನಲ್ಲಿ ಹೆಚ್ಚಾಗಿದೆ. ಹಾಗೆಯೇ ಅಮೆರಿಕ, ರಷ್ಯಾ, ಮೆಕ್ಸಿಕೋ ದೇಶಗಳು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿವೆ. ಈ ಐದು ರಾಷ್ಟ್ರಗಳಲ್ಲಿ ಕೋವಿಡ್ ನಿಂದ ಸತ್ತವರ ಸಂಖ್ಯೆ ಜಗತ್ತಿನಲ್ಲಿ ಅರ್ಧ ಪಾಲಾಗುತ್ತದೆ. ಜನಸಂಖ್ಯೆಗೆ ಹೋಲಿಸಿ ನೋಡಿದಾಗ ಪೆರು, ಹಂಗೇರಿ, ಬೋಸ್ನಿಯಾ ಹಾಗೂ ಚೆಕ್ ಗಣರಾಜ್ಯಗಳಲ್ಲಿ ಸಾವಿನ ಸಂಖ್ಯೆ ಅತ್ಯಧಿಕವಾಗಿವೆ.