BREAKING NEWS:
ಮಾಸ್ಕೋ: ಉಕ್ರೇನ್ ಕುರಿತು ಪಶ್ಚಿಮ ರಾಷ್ಟ್ರಗಳೊಂದಿಗಿನ ಉದ್ವಿಗ್ನತೆ ಮಧ್ಯೆ ರಾಜತಾಂತ್ರಿಕ ಪರಿಹಾರಗಳನ್ನು ಹುಡಕಲು ನಾವು ಸಿದ್ದ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಆದರೆ ದೇಶದ ಹಿತಾಸಕ್ತಿಯನ್ನು ಬಿಟ್ಟು ಮಾತುಕತೆ ಸಿದ್ದ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಡಿಯೋ ಭಾಷಣದಲ್ಲಿ ಮಾತನಾಡಿದ ಅವರು, ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ರಾಜತಾಂತ್ರಿಕ ಪರಿಹಾರಗಳ ಹುಡುಕಾಟಕ್ಕಾಗಿ ನೇರ ಮತ್ತು ಪ್ರಾಮಾಣಿಕ ಸಂವಾದಕ್ಕೆ ರಷ್ಯಾ ಯಾವಾಗಲೂ ಮುಕ್ತ ಮನಸ್ಸು ಹೊಂದಿರುತ್ತದೆ ಎಂದಿದ್ದಾರೆ.
ಈ ನಡುವೆ ನ್ಯೂಜಿಲೆಂಡ್ ಸರ್ಕಾರ ಇಂದು ರಷ್ಯಾ ರಾಯಭಾರಿ ಜಾರ್ಜಿ ಜುಯೆವ್ ಅವರನ್ನು ಭೇಟಿಯಾಗಲು ಉನ್ನತ ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಅವರು ಉಕ್ರೇನ್ ಕುರಿತ ರಾಜತಾಂತ್ರಿಕ ಮಾತುಕತೆಗೆ ಮರಳಲು ರಷ್ಯಾವನ್ನು ಆಗ್ರಹಪಡಿಸಿದ್ದಾರೆ.
ನ್ಯೂಜಿಲೆಂಡ್ ನೆರೆಯ ರಾಷ್ಟ್ರವಾದ ಆಸ್ಟ್ರೇಲಿಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ 8 ಉನ್ನತ ಭದ್ರತಾ ಸಲಹೆಗಾರರ ಮೇಲೆ ನಿರ್ಬಂಧಗಳನ್ನು ಘೋಷಿಸಿದೆ.
ಈ ನಡುವೆ ಅಮೆರಿಕಾ ಕಾರ್ಯದರ್ಶಿ ಟೋನಿ ಬ್ಲಿಂಕೆನ್, ಉಗ್ರೇನ್ ನಲ್ಲಿ ರಷ್ಯಾದ ನಿಲುವನ್ನು ವಿರೋಧಿಸಿ ಈ ವಾರದ ನಂತರ ರಷ್ಯಾದ ಸಹವರ್ತಿ ಸೆರ್ಗೆಯ್ ಲಾವ್ರೋವ್ ಅವರೊಂದಿಗಿನ ತನ್ನ ನಿಗದಿತ ಸಭೆಯನ್ನು ರದ್ದುಗೊಳಿಸಿದ್ದಾರೆ.