BREAKING NEWS:
ಹೊಸದಿಲ್ಲಿ: ಒಮ್ಮೆ ನ್ಯಾಯಾಲಯದ ಎದುರು ವಿಚಾರವನ್ನು ತಂದ ಬಳಿಕ ಇಲ್ಲಿ ಸರಿಯಾದ ಚರ್ಚೆ ಮಾಡಿ ಎಂದು ಪೆಗಾಸಸ್ ಹಗರಣದ ವಿರುದ್ಧ ತನಿಖೆಗೆ ಆಗ್ರಹಿಸಿರುವ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಪ್ರತಿಪಕ್ಷ ನಾಯಕರು ಮತ್ತು ಹಿರಿಯ ಪತ್ರಕರ್ತರು ಪೆಗಾಸಸ್ ವಿರುದ್ಧ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಇನ್ನೊಂದೆಡೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಆಕ್ಷೇಪವೆತ್ತಿದ ಸುಪ್ರೀಂ ಕೋರ್ಟ್, ವ್ಯವಸ್ಥೆಯಲ್ಲಿ ನಂಬಿಕೆಯಿರಬೇಕು. ಸಾಮಾಜಿಕ ಮಾಧ್ಯಮದಲ್ಲಿನ ಸಮಾನಾಂತರ ಚರ್ಚೆಗಳಲ್ಲಿ ಭಾಗವಹಿಸುವುದನ್ನು ತಡೆಯಬೇಕು ಎಂದು ಹೇಳಿದೆ.
ನೀವು ಏನು ಹೇಳಬೇಕೋ ಅದನ್ನು ನ್ಯಾಯಾಲಯದಲ್ಲಿ ಹೇಳಿ ಎಂದೂ ಸುಪ್ರಿಂ ಕೋರ್ಟ್ ಸೂಚಿಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿತು.
ಕಳೆದ ವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್, ಪೆಗಾಸಸ್ ವಿರುದ್ಧದ ಮಾಧ್ಯಮದಲ್ಲಿನ ವರದಿಗಳು ನಿಜವೇ ಆಗಿದ್ದಲ್ಲಿ ಇದು ತುಂಬ ಗಂಭೀರ ಆರೋಪವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.