BREAKING NEWS:
ನವದೆಹಲಿ: ಪಾಕಿಸ್ತಾನಕ್ಕೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‌ಎಟಿಎಫ್) 'ಬೂದು ಪಟ್ಟಿ'ಯಿಂದ ಮುಕ್ತಿ ದೊರಕಿಲ್ಲ. ಭಯೋತ್ಪಾದಕ ಹಣಕಾಸು ವ್ಯವಸ್ಥೆ ಕುರಿತಂತೆ ಯಾವುದೇ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ ಪಾಕಿಸ್ತಾನ ಬೂದು ಪಟ್ಟಿಯಲ್ಲಿಯೇ ಉಳಿದುಕೊಂಡಿದೆ.
ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರು ಮತ್ತು ಕಮಾಂಡರ್‌ಗಳನ್ನು ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಲು ಎಫ್‌ಎಟಿಎಫ್ ಇಸ್ಲಾಮಾಬಾದ್‌ಗೆ ಸೂಚಿಸಿದೆ. ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಸೇರಿದಂತೆ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ವಿರುದ್ಧದ ಕಠಿಣ ಕ್ರಮಕೈಗೊಳ್ಳುವಂತೆಯೂ ಅದು ಸೂಚಿಸಿದೆ.
ಮನಿ ಲ್ಯಾಂಡರಿಗೆ ಅಪಾಯಗಳನ್ನು ಪರಿಶೀಲಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ. ಇದು ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿಗೆ ಕಾರಣವಾಗಿದೆ. ಹೀಗಾಗಿ ಪಾಕಿಸ್ತಾನವು 'ಹೆಚ್ಚಿದ ಮೇಲ್ವಿಚಾರಣಾ ಪಟ್ಟಿಯಲ್ಲಿ' ಮುಂದುವರಿಯುತ್ತದೆ ಎಂದು ಎಫ್ಎಟಿಎಫ್ ಅಧ್ಯಕ್ಷ ಮಾರ್ಕ್ಸ್ ಫ್ಲೈಯರ್ ಹೇಳಿದ್ದಾರೆ.
2018ರಲ್ಲಿ ನೀಡಲಾದ 27 ಕ್ರಿಯಾಶೀಲ ವಸ್ತುಗಳ ಪೈಕಿ 26 ಅನ್ನು ಪಾಕಿಸ್ತಾನ ಈಗ ಪೂರ್ಣಗೊಳಿಸಿದೆ. ಆದರೆ ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಫ್‌ಎಟಿಎಫ್ ಪಾಕಿಸ್ತಾನವನ್ನು ಕೇಳಿದೆ.