BUSINESS:
ನವದೆಹಲಿ: ಮುಂದಿನ ತಿಂಗಳ ಒಂದರಂದು ಮಂಡನೆಯಾಗಲಿರುವ 2022-23 ರ ಕೇಂದ್ರ ಬಜೆಟ್ ನಲ್ಲಿ ಯಾವುದಕ್ಕೆ ಆದ್ಯತೆ, ಯಾವುದಕ್ಕೆ ಒತ್ತು ಸಿಗಲಿದೆ ಹಣಕಾಸು ಸಚಿವೆ ನಿರ್ಮಲಾ ಲೆಕ್ಕ ಏನು? ಎತ್ತ? ಎಂಬ ಕುತೂಹಲ ದೇಶಾದ್ಯಂತ ಗರಿಗೆದರಿದೆ. ಹಣಕಾಸು -ಮಾರುಕಟ್ಟೆ ವಲಯದ ತಜ್ಞರ ಪ್ರಕಾರ ವ್ಯಾಪಾರ, ಕೃಷಿ ಸಾಲ ಮನ್ನಾ, ತೆರಿಗೆ ಕಡಿತ, ವೈದ್ಯಕೀಯ ವಲಯ , ಸಾರಿಗೆ, ಆಟೋ ಮೊಬೈಲ್ ಕ್ಷೇತ್ರಗಳಿಗೆ ಮುಂಬರುವ ಬಜೆಟ್‌ನಲ್ಲಿ ವಿಶೇಷ ಒತ್ತು ಸಿಗಬಹುದು ಎಂದು ವಿಶ್ಲೇಷಿಸಿದ್ದಾರೆ.
ಇದರ ಜೊತೆಗೆ ಮುಂದಿನ ತಿಂಗಳು ನಡೆಯಲಿರುವ ಪಂಚ ರಾಜ್ಯಗಳ ಚುನಾವಣೆಗಳ ಕಾರಣದಿಂದಲೂ ಕೆಲವು ಜನಪ್ರಿಯ ಯೋಜನೆ ಪ್ರಕಟವಾಗುವ ಸಾಧ್ಯತೆ ತಳ್ಳಿಹಾಕಲಾಗುದು.
ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ಹಣದುಬ್ಬರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಕೋವಿಡ್ ಮತ್ತು ನಂತರ ಒಮಿಕ್ರಾನ್ ರೂಪಾಂತರಿ ಸೋಂಕಿನ ಹಿನ್ನೆಲೆಯಲ್ಲಿ ಕಳದೆ ವರ್ಷದ ಲಾಕ್‌ಡೌನ್‌ಗಳು, ವಾರಾಂತ್ಯದ ಕರ್ಫ್ಯೂ ಮತ್ತು ಕೆಲವು ನಿರ್ಬಂಧಗಳು ವ್ಯಾಪಾರ ಕೇತ್ರದ ಮೇಲೆ ಬಹಳ ಪರಿಣಾಮ ಬೀರಿವೆ.
ಇವುಗಳ ಜೊತೆಗೆ ಗ್ರಾಮೀಣ ಜನರನ್ನು ಮೆಚ್ಚಿಸಲು ಮನ್ರೇಗಾ-ಪಿಎಂ ಕಿಸಾನ್ ಯೋಜನೆ ಮತ್ತು ಕೃಷಿ ಸಾಲ ಮನ್ನಾಕ್ಕೆ ಹೆಚ್ಚಿನ ಒತ್ತು ಮಧ್ಯಮ ವರ್ಗದ ವೈಯಕ್ತಿಕ ತೆರಿಗೆಗೆ ಸ್ಟಾಂಡರ್ಡ್ ಡಿಡಕ್ಷನ್ ಹೆಚ್ಚಳದ ಕೆಲ ಉತ್ತೇಜಕ ಕ್ರಮ ನಿರೀಕ್ಷಿಸಬಹುದು ಎಂದು ಹಣಕಾಸು ವಲಯದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.