BUSINESS:
ರಾಯಲ್ ಎನ್ ಫೀಲ್ಡ್ ಅಂದರೆ ಸಾಕು ಹುಡುಗಿಯರಿಂದ ಹುಡುಗರವರೆಗೆ ಕ್ರೇಜ್ ಇದೆ. ಮಾರುಕಟ್ಟೆಗೆ ಹೊಸ ಹೊಸ ಮಾಡೆಲ್ ನ ರಾಯಲ್ ಎನ್ ಫೀಲ್ಡ್ ಲಗ್ಗೆ ಇಟ್ಟಿದೆ ಅಂದರೆ ಸಾಕು ಶೋ ರೂಮ್ ಮುಂದೆ ಜನರು ಕ್ಯೂ ನಿಂತಿರುತ್ತಾರೆ. ಇದೀಗ ರಾಯಲ್ ಎನ್‌ಫೀಲ್ಡ್‌ನ ಹೊಸ ಮಾದರಿ ಗಾಡಿಯೊಂದು ಇಂದು ಬಿಡುಗಡೆಯಾಗಿದೆ. ಅದು ಹೊಸ ಕೂಲ್ ಮೋಟಾರ್‌ಸೈಕಲ್ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಇಂದು ಬಿಡುಗಡೆಯಾಗಿದೆ. ಈ ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ 2.03 ಲಕ್ಷದಿಂದ ರೂ 2.08 ಲಕ್ಷದವರೆಗೆ ಬಿಡುಗಡೆ ಮಾಡಲಾಗಿದೆ.ರಾಯಲ್ ಎನ್‌ಫೀಲ್ಡ್‌ನ ಹೊಸ ಬೈಕ್ ಎಡಿವಿ ಕ್ರಾಸ್‌ಒವರ್ ಆಗಿದ್ದು, ಇದು ಸಾಹಸ ಬೈಕ್‌ಗಳು ಮತ್ತು ಸ್ಕ್ರಾಂಬ್ಲರ್‌ಗಳನ್ನು ಸಂಯೋಜಿಸುತ್ತದೆ. ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಅನ್ನು ಹಲವಾರು ಆಕರ್ಷಕ ಬಣ್ಣಗಳಲ್ಲಿ ನೀಡಲಾಗಿದೆ. ಇವುಗಳಲ್ಲಿ ವೈಟ್ ಫ್ಲೇಮ್, ಸಿಲ್ವರ್ ಸ್ಪಿರಿಟ್, ಬ್ಲೇಜಿಂಗ್ ಬ್ಲ್ಯಾಕ್, ಸ್ಕೈಲೈನ್ ಬ್ಲೂ ಸೇರಿದಂತೆ 7 ಬಣ್ಣಗಳಿಂದ ಕೂಡಿದೆ.