BUSINESS:
ಬೆಂಗಳೂರು : ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ಬೆಲೆ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಶುಭಕಾರ್ಯಗಳ ಸೀಸನ್ ಶುರುವಾದ ನಂತರ ಸಹಜವಾಗಿಯೇ ಬಂಗಾರ ಪ್ರಿಯರು ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಚಿನ್ನ ಖರೀದಿಸುವವರಿಗೆ ಇಂದು ಬೇಸರವಾಗಿದ್ದು, ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ.
ಮಾರ್ಚ್ 24 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,795 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,950 ಆಗಿದೆ.
ಇನ್ನು ಯಾವ ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅಂತ ನೋಡೋದಾದ್ರೆ
ಬೆಂಗಳೂರು 22 ಕ್ಯಾರೆಟ್ ಚಿನ್ನಕ್ಕೆ ₹47,950
ಬೆಂಗಳೂರು 24 ಕ್ಯಾರೆಟ್ ಚಿನ್ನಕ್ಕೆ ₹52,310
ದೆಹಲಿ 22 ಕ್ಯಾರೆಟ್ ಚಿನ್ನಕ್ಕೆ ₹47,950
ದೆಹಲಿ 24 ಕ್ಯಾರೆಟ್ ಚಿನ್ನಕ್ಕೆ ₹52,310
ಹೈದರಾಬಾದ್ 22 ಕ್ಯಾರೆಟ್ ಚಿನ್ನಕ್ಕೆ ₹47,950
ಹೈದರಾಬಾದ್ 24 ಕ್ಯಾರೆಟ್ ಚಿನ್ನಕ್ಕೆ ₹52,310
ಮುಂಬೈ 22 ಕ್ಯಾರೆಟ್ ಚಿನ್ನಕ್ಕೆ ₹47,950
ಮುಂಬೈ 24 ಕ್ಯಾರೆಟ್ ಚಿನ್ನಕ್ಕೆ ₹52,310
ಚೆನ್ನೈ 22 ಕ್ಯಾರೆಟ್ ಚಿನ್ನಕ್ಕೆ ₹48,310
ಚೆನೈ 24 ಕ್ಯಾರೆಟ್ ಚಿನ್ನಕ್ಕೆ ₹52,700
ಕೋಲ್ಕತ್ತಾ22 ಕ್ಯಾರೆಟ್ ಚಿನ್ನಕ್ಕೆ ₹47,950
ಕೋಲ್ಕತ್ತಾ 24 ಕ್ಯಾರೆಟ್ ಚಿನ್ನಕ್ಕೆ ₹52,310
ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹5,231 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹52,310 ಆಗಿದೆ.
ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹685 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹68,500 ಆಗಿದೆ. ಮಾರ್ಚ್ 23ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,350 ಮತ್ತು 1 ಕೆಜಿಗೆ ₹67,600 ನಲ್ಲಿ ಕೊನೆಗೊಂಡಿದ್ದವು.
pic credit: shuttershock.com