POLITICS:
ನವದೆಹಲಿ : ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ಸುಗಮ ಕಲಾಪ ನಡೆಸಲು ಅವಕಾಶ ನೀಡುವಂತೆ ವಿರೋಧ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಸಂಸತ್ ಭವನದ ಬಳಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ ಬಜೆಟ್ ಮಂಡನೆ ಕೇವಲ ಆರ್ಥಿಕ ಬೆಳವಣಿಗೆ ಅಲ್ಲ. ಕಲಾಪದಲ್ಲಿ ಕೊರೊನಾ ಲಸಿಕೆ, ಆರೋಗ್ಯದ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುತ್ತೇವೆ. ಎಲ್ಲ ಸಂಸದರಿಗೂ ಚರ್ಚಿಸುವುದಕ್ಕೆ ಅವಕಾಶವಿದೆ ಎಂದರು.
ಬಜೆಟ್ ಅಧೀವೇಶನಕ್ಕೆ ಸಹಕಾರ ನೀಡುವ ವಿಶ್ವಾಸವಿದೆ. ಕೊರೊನಾ ಕಾಲದ ಈ ಬಜೆಟ್ ಮಹತ್ವದದ್ದು ಅಧಿವೇಶನದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆರ್ಥಿಕ ಅಭಿವೃದ್ದಿಯ ಬಗ್ಗೆ ಬಜೆಟ್ ಇರಲಿದೆ. ಅಧೀವೇಶನ ಶಾಂತಿಯುತವಾಗಿ ನಡೆಯಬೇಕು. ಸಂಸದರು ತಪ್ಪದೆ ಬಜೆಟ್ ಅಧಿವೇಶನಕ್ಕೆ ಹಾಜರಾಗಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.