POLITICS:
1.ಮಂಡ್ಯದ ಗಣಿ ಪ್ರದೇಶಗಳಿಗೆ ಸಂಸದೆ ಸುಮಲತಾ ಅಂಬರೀಷ್ ಭೇಟಿ ವಿಚಾರಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಇಡೀ ಜೆಡಿಎಸ್ ಪಾಳಯ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಗಣಿ ಲಾಬಿಯ ರಕ್ಷಣೆಗೆ ಯಾವ ಮುಲಾಜೂ ಇಲ್ಲದೆ ನಿಂತಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ.
ಮಂಡ್ಯ ಗಣಿ ಗದ್ದಲ; ಸುಮಲತಾ ವಿರುದ್ಧದ ಜೆಡಿಎಸ್ ನಡೆ ಹಿಂದೆ ‘ಅಕ್ರಮ’ ರಕ್ಷಣೆ ಸರ್ಕಸ್?
2. ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಎ.ಟಿ.ಎಸ್.ತಂಡ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್) ಭಟ್ಕಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣ; ಭಟ್ಕಳಕ್ಕೆ ಭೇಟಿ ನೀಡಿದ ಎಟಿಎಸ್ ತಂಡ
3.ಮೊದಲೇ ನರೇಂದ್ರ ಮೋದಿ ಸರ್ಕಾರ 50 ಕಿ.ಮಿ. ವೇಗದಲ್ಲಿ ಓಡುತ್ತಿತ್ತು. ಈಗ ಹೊಸಬರನ್ನ ಹಾಕಿದ್ದಾರೆ. ಈಗ 30 ಕಿ.ಮಿ ವೇಗದಲ್ಲಿ ಸರ್ಕಾರ ಓಡಲಿದೆ. ಪಂಡರಾಪುರ ಕಾರು ಹೋದಂತೆ ಹೋಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಕ್ಯಾಬಿನೆಟ್ ಪಂಡರಾಪುರ ಕಾರು ಹೋದಂತೆ ಹೋಗಲಿದೆ: ಸತೀಶ್ ಜಾರಕಿಹೊಳಿ ಲೇವಡಿ
4. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ವೀರಭದ್ರ ಸಿಂಗ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 87 ವರ್ಷದ ವೀರಭದ್ರ ಅವರಿಗೆ ಸೋಮವಾರ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ವೆಂಟಿಲೇಟರನ್ಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನ
5.ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಟಿ ಜೆ ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿದೆ.
ಬಿಎಸ್ವೈ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪದ ದೂರು ವಜಾ
6. ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಿಗ್ಗೆ ಸಿಬಿಐನಿಂದ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರನ್ನು ಸಿಬಿಐ ಅಧಿಕಾರಿಗಳ ತಂಡ ಬಂಧಿಸಿದೆ.
ಯೋಗೇಶ್ಗೌಡ ಕೊಲೆ ಪ್ರಕರಣ; ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಬಂಧನ
7. ಬರಿಗಾಲಲ್ಲೇ ಓಟವನ್ನು ಆರಂಭಿಸಿ, ಗಾರೆ ಕೆಲಸದ ಮೂಲಕ ಫಿಟ್ನೆಸ್ ಕಾಯ್ದುಕೊಂಡು, ಓಟದ ಮೂಲಕ ಎಲ್ಲರನ್ನೂ ಅಚ್ಚರಿ ಮೂಡಿಸಿದ್ದ ಚೆನ್ನೈನ ಪೊಲೀಸ್ ಕಾನ್ಸ್ಟೇಬಲ್ ಈಗ ಟೋಕಿಯೋ ಒಲಿಂಪಿಕ್ಸ್ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ.
ಟೋಕಿಯೋ ಒಲಿಂಪಿಕ್ಸ್ ಗೆ ಪೊಲೀಸ್ ಕಾನ್ಸ್ಟೇಬಲ್
8. ರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕ್ಷೇತ್ರದಲ್ಲಿರುವ ವಾಣಿಜ್ಯ ಮಳಿಗೆಗಳು ಕುಡುಕರ ತಾಣವಾಗುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.
ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದ ವಾಣಿಜ್ಯ ಮಳಿಗೆ ಕುಡುಕರ ತಾಣ
9. ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯದ ಗಡಿ ಜಿಲ್ಲೆಯ ಸಂಸದ ಭಗವಂತ ಖೂಬಾ ಅವರಿಗೆ ಮಂತ್ರಿ ಭಾಗ್ಯ ಒಲಿದು ಬಂದಿದೆ. ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಭಗವಂತ ಖೂಬಾ ಈ ಉನ್ನತ ಹುದ್ದೆಗೇರಿದ್ದಾರೆ.
ಅಂದು ಸಾಮಾನ್ಯ ಕಾರ್ಯಕರ್ತ, ಇಂದು ಕೇಂದ್ರ ಸಚಿವ; ಬೀದರ್ ಸಂಸದ ಖೂಬಾ ನಡೆದುಬಂದ ದಾರಿ
10. ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದ ರೈಲ್ಬೆ ನಿಲ್ದಾಣದಲ್ಲಿ ರಾತ್ರಿ ನಡೆದಿದೆ.