ಈ ಕ್ಷಣ :

ರಫೇಲ್ ಡೀಲ್ ತನಿಖೆಗೆ ಫ್ರಾನ್ಸ್​ ಮರುಜೀವ; ಭಾರತದಲ್ಲೂ ಕೇಳಿಬರುತ್ತಿದೆ ಒತ್ತಾಯ

Published 15 ಮಾರ್ಚ್ 2023, 23:38 IST
Last Updated 6 ಮೇ 2023, 21:07 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

POLITICS:

ನವದೆಹಲಿ: 2016ರ ರಫೇಲ್ ಡೀಲ್ ಸಂಬಂಧ ಹೊಸದಾಗಿ ನ್ಯಾಯಾಂಗ ತನಿಖೆಗೆ ಫ್ರಾನ್ಸ್ ಮುಂದಾಗುತ್ತಿದ್ದಂತೆ ಭಾರತದ ರಾಜಕೀಯ ವಲಯದಲ್ಲೂ ಸಂಚಲನವೆದ್ದಿದೆ. 60 ಸಾವಿರ ಕೋಟಿಯ ರಕ್ಷಣಾ ಡೀಲ್ ವಿಚಾರವಾಗಿ ಈಗಾಗಲೇ ಹಲವು ಪ್ರಶ್ನೆಗಳನ್ನೆತ್ತಿದ್ದ ಪ್ರತಿಪಕ್ಷಗಳು ಮತ್ತು ಟೀಕಾಕಾರರು ಮತ್ತೊಮ್ಮೆ ಕೆಂದ್ರ ಸರ್ಆಕರದ ವಿರುದ್ಧ ತೊಡೆ ತಟ್ಟಲು ಸಜ್ಜಾಗುತ್ತಿದ್ದಂತೆ ಕಾಣಿಸುತ್ತಿದೆ.

ಫ್ರಾನ್ಸ್​ನ ಮೀಡಿಯಾಪಾರ್ಟ್ ಎಂಬ ವೆಬ್​ಸೈಟ್ ಕಳೆದೆರಡು ತಿಂಗಳಿಂದಲೂ ರಪೇಲ್ ಡೀಲ್​ನಲ್ಲಿ ನಡೆದಿರಬಹುದಾದ ಆರ್ಥಿಕ ಅವ್ಯವಹಾರದ ಹಲವಾರು ಸಾಧ್ಯತೆಗಳ ಬಗ್ಗೆ ಬಹಿರಂಗಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಸರ್ಕಾರ ಹೊಸದಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವವರಲ್ಲಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಪ್ರಮುಖರು. ಅವರು ಈ ಡೀಲ್ ವಿಚಾರವಾಗಿ ತನಿಖೆಗೂ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಗಿನ ಸಿಜೆಐ ರಂಜನ್ ಗೊಗೋಯ್ ಆ ಅರ್ಜಿ ವಜಾಗೊಳಿಸಿದ್ದರು.

'ದಿ ವೈರ್' ವೆಬ್ ಪತ್ರಿಕೆಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಪ್ರಶಾಂತ್ ಭೂಷಣ್ ಅವರು, ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿದ್ದ ತಪ್ಪು ಮಾಹಿತಿಗಳನ್ನೇ ಸತ್ಯವೆಂದು ನ್ಯಾಯಪೀಠ ನಂಬಿ, ತನಿಖೆಗೆ ಆಗ್ರಹಿಸಿದ್ದ ಅರ್ಜಿ ವಜಾಗೊಳಿಸಿದ್ದು ದುರದೃಷ್ಟಕರ ಎಂದಿರುವರಲ್ಲದೆ, ನಮ್ಮ ಮಾಧ್ಯಮಗಳು ಬೋಫೋರ್ಸ್ ಕೇಸ್ ವಿಚಾರದಲ್ಲಿ ಆಸಕ್ತಿ ತೋರಿಸಿದಂತೆ ರಫೇಲ್ ಹಗರಣದ ವಿಚಾರದಲ್ಲಿ ಬೆನ್ನುಬೀಳದೇ ಹೋದದ್ದು ಮತ್ತೊಂದು ದುರದೃಷ್ಟದ ಸಂಗತಿ ಎಂದಿದ್ದಾರೆ.

ಫ್ರೆಂಚ್ ಮಾಧ್ಯಮವು ಈ ಡೀಲ್ ಹೀಮದಿನ ಸತ್ಯಗಳನ್ನು ಬಹಿರಂಗಗೊಳಿಸಿರುವ ರೀತಿಯು ಹಗರಣದ ಸ್ವತಂತ್ರ ತನಿಖೆಗೆ ಆದೇಶ ಹೊರಬೀಳುವುದಕ್ಕೆ ಕಾರಣವಾಗಿದೆ. ಅನಿಲ್ ಅಂಬಾನಿಯ ಅಂಬಾನಿ ವಿಚಾರವೂ ಹೊರಬರಲಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಫ್ರಾನ್ಸ್​ನ ಮೀಡಿಯಾಪಾರ್ಟ್ ವರದಿ ಬಹಿರಂಗಪಡಿಸಿರುವುದೇನು?:
ಪ್ರಧಾನಿ ನರೇಂದ್ರ ಮೋದಿ ಹೊಸ ರಫೇಲ್ ಒಪ್ಪಂದವನ್ನು ಘೋಷಿಸುವ ಎರಡು ವಾರಗಳ ಮೊದಲೇ ಅನಿಲ್ ಅಂಬಾನಿ ಈಗಾಗಲೇ ಫ್ರೆಂಚ್ ವಿಮಾನ ತಯಾರಕ ಕಂಪನಿ ದಸಾಲ್ಟ್ ಜೊತೆ ಒಪ್ಪಂದ ಮಾಡಿಕೊಂಡಿರಬಹುದು ಎಂಬುದನ್ನು ಮೀಡಿಯಾಪಾರ್ಟ್ ತನಿಖೆ ತೋರಿಸುತ್ತದೆ.

ಅನಿಲ್ ಅಂಬಾನಿಯ ರಿಲಯನ್ಸ್ ಸಮೂಹದ ಸಹಭಾಗಿತ್ವದಲ್ಲಿ ಡಸಾಲ್ಟ್ ಭಾರತಕ್ಕೆ 36 ರೆಡಿ-ಟು-ಫ್ಲೈ ವಿಮಾನಗಳನ್ನು ಪೂರೈಸಬೇಕಾಗಿದ್ದ ಹೊಸ ಒಪ್ಪಂದವು 60,000 ಕೋಟಿಯದ್ದು. ಇದು ಮೊದಲೇ ಆಗಿದ್ದ ಒಪ್ಪಂದವನ್ನು ಬದಲಿಸಿತು. ಇದರಲ್ಲಿ ಡಸಾಲ್ಟ್ ಭಾರತಕ್ಕೆ 126 ರಾಫೆಲ್ ಫೈಟರ್ ಜೆಟ್‌ಗಳನ್ನು ಪೂರೈಸಬೇಕಾಗಿತ್ತು. ಅದರಲ್ಲಿ 108ನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತಂತ್ರಜ್ಞಾನ ವರ್ಗಾವಣೆ ಒಪ್ಪಂದದ ಮೂಲಕ ತಯಾರಿಸಬೇಕಾಗಿತ್ತು. ವಿವಿಧ ಅಂದಾಜಿನ ಪ್ರಕಾರ, ಹೊಸ ಒಪ್ಪಂದವು ಹಿಂದಿನ ಒಪ್ಪಂದಕ್ಕಿಂತ ಮೂರು ಪಟ್ಟು ಹೆಚ್ಚು ದುಬಾರಿಯಾದುದಾಗಿದೆ.

ರಫೇಲ್ ಡೀಲ್ ಕುರಿತು ಫ್ರಾನ್ಸ್ ಮತ್ತೆ ತನಿಖೆ ಕೈಗೆತ್ತಿಕೊಳ್ಳುತ್ತಿದೆ. ಬಾರತ ಅದರಲ್ಲಿ ಭಾಗಿಯಾಗಿದ್ದರೆ, ದೇಶಕ್ಕೆ ಸತ್ಯವನ್ನು ಹೇಳಬೇಕಿರುವುದು ಅಗತ್ಯ. ಸರ್ಕಾರ ಅಂಥ ಸ್ಪಷ್ಟತೆಯನ್ನು ಈವರೆಗೂ ಕೊಟ್ಟಿಲ್ಲ. ಫ್ರೆಂಚ್ ನ್ಯಾಯಾಲಯವು ತನ್ನ ತನಿಖೆಯಲ್ಲಿ ಕಂಡುಕೊಳ್ಳಲಿರುವ ಸತ್ಯಕ್ಕಾಗಿ ನಾವು ಕಾಯುತ್ತೇವೆ ಎಂದು ಆರ್​ಜೆಡಿ ರಾಜ್ಯಸಭಾ ಸದಸ್ಯ ಮನೋಜ್​ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ವಕ್ತಾರ ರಣ್​ದೀಪ್ ಸುರ್ಜೇವಾಲಾ, ಇದರ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಎಬೇಕೆಂಬ ಪಕ್ಷದ ಆಗ್ರಹವನ್ನು ಮರು ಪ್ರಸ್ತಾಪಿಸಿದ್ದಾರೆ. ಈಗ ಹೊರಬೀಳುತ್ತಿರುವ ವಿಚಾರಗಳು ಜಂಟಿ ಸಂಸದೀಯ ಸಮಿತಿಯ ತನಿಖೆಯ ಅಗತ್ಯವನ್ನು ಒತ್ತಿಹೇಳುತ್ತಿವೆ. ನಾವಂತೂ ಇದರ ಅಗತ್ಯವನ್ನು ಪ್ರತಿಪಾದಿಸುತ್ತಲೇ ಬಂದಿದ್ದೇವೆ ಎಂದಿದ್ದಾರೆ.

ಫ್ರಾನ್ಸ್ ತನ್ನ ಮಾಜಿ ಅಧ್ಯಕ್ಷ, ಮಾಜಿ ರಕ್ಷಣಾ ಸಚಿವ ಮತ್ತು ಪ್ರಾಯಶಃ ಈಗಿನ ಅಧ್ಯಕ್ಷರ ಪಾತ್ರದ ಬಗ್ಗೆಯೂ ತನಿಖೆ ನಡೆಸಲು ಮುಂದಾಗಿದೆಯೆಂದಾದರೆ, ಈ ಡೀಲ್​ನಲ್ಲಿ ಸಂಬಂಧವಿರುವ ಭಾರತವೂ ಕೂಡ ಈ ವಿಷಯದಲ್ಲಿ ತನಿಖೆಗೆ ಮುಂದಾಗಲು ಯಾಕೆ ಸ್ಪಷ್ಟ ನಿಲುವು ತಳೆಯಬಾರದು ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಇದು ದೇಶದ ಭದ್ರತೆ ಮತ್ತು ಘನತೆಯ ಪ್ರಶ್ನೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಪೈಪೋಟಿಯ ವಿಚಾರವಲ್ಲ. ಕೇಂದ್ರ ಸರ್ಕಾರಕ್ಕೆ ಗಂಭೀರ ಪ್ರಶ್ನೆಗಳು ಎದುರಾಗುವುದ ಈ ವಿಚಾರದಲ್ಲಿ ಸಹಜ ಎಂದೂ ಹೇಳಿರುವ ಸುರ್ಜೇವಾಲಾ, ಮೂಮಬರುವ ಮುಂಗಾರು ಅಧಿವೇಶನದಲ್ಲಿ ಈ ವಿಚಾರವನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಲಿದೆ ಎಂದಿದ್ದಾರೆ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45