POLITICS:
ಉತ್ತರ ಪ್ರದೇಶ ಚುನಾವಣಾ ಅಖಾಡಾ ಸಿದ್ದವಾಗುತ್ತಿದೆ...ಸಮಾಜವನ್ನು ಒಡೆಯುವ ಧ್ವೇಷದ ಭಾಷಣ ವಿಜೄಂಭಿಸುತ್ತಿದೆ.. ಅಲ್ಪಸಂಖ್ಯಾತರ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಬಹುಸಂಖ್ಯಾತ ಮತದಾರರನ್ನು ಒಗ್ಗೂಡಿಸಲು ಪ್ರಾರಂಭಿಸಿದೆ, ಜಾತಿ ರಾಜಕಾರಣವೂ ಮಿತಿ ಮೀರಿದೆ,, ಈ ನಡುವೆ ನನ್ನ ಕನಸಿನಲ್ಲಿ ಶ್ರೀಕೃಷ್ಣ ಬಂದಿದ್ದ ಎಂದು ಪಕ್ಷದ ಅಧ್ಯಕ್ಷರಿಗೆ ಬಿಜೆಪಿ ಸಂಸತ್ ಸದಸ್ಯರೊಬ್ಬರು ಮಥುರಾದಿಂದ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕೆ ಇಳಿಸುವಂತೆ ಶ್ರೀಕೃಷ್ಣ ಹೇಳಿದ್ದಾನೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ತಮ್ಮ ಕನಸಿನಲ್ಲಿ ಬಂದಿದ್ದ ಕೃಷ್ಣ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾನೆ ಎಂದು ವ್ಯಂಗ್ಯವಾಗಿ ಪ್ರತ್ಯುತ್ತರ ನೀಡಿದ್ದಾರೆ. ಬಿಜೆಪಿಯನ್ನು ಅಧಿಕಾರ ತಂದ ಶ್ರೀರಾಮನ ಜೊತೆ ಶ್ರೀಕೃಷ್ಣನನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ, ಈ ಅಧಿಕಾರದಾಹಿ ರಾಜಕಾರಣಿಗಳು... ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ