POLITICS:
-ಕೆ.ಆರ್.ಬಾಬು
ಪ್ರಪಂಚದಲ್ಲಿ ಚಿತ್ರ ವಿಚಿತ್ರ ಜನರಿದ್ದಾರೆ. ಅದೇ ರೀತಿ ಬಿಸಿನೆಸ್ ನಲ್ಲೂ ಅನೇಕ ಬಗೆಗಳಿವೆ. ಹೊಟ್ಟೆ ಪಾಡಿಗಾಗಿ ಜನ ಏನು ಬೇಕಾದ್ರೂ ಮಾಡ್ತಾರೆ. ಅದೇ ರೀತಿ ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಇದ್ದಾನೆ. ಅವನು ಮಾಡುತ್ತಿರೋ ಬಿಸಿನೆಸ್ ಕೂಡ ವಿಚಿತ್ರವಾದದ್ದೆ.ಆದ್ರೆ ಆದಾಯ ಕೇಳಿದ್ರೆ ನಾವು ನೀವು ಬೆಚ್ಚಿಬೀಳ್ತೀವಿ. ನಾವು ವಿಷ ಅಂತ ಬಡಿದು ಸಾಯಿಸುವ ಚೇಳುಗಳನ್ನ ಸಾಕಿಯೇ ಆತ ರಾಯಲ್ ಲೈಫ್ ಲೀಡ್ ಮಾಡ್ತಾ ಇದ್ದಾನೆ ಅಂದ್ರೆ ನಂಬಲೇಬೇಕು.
ಹೌದು, ಪ್ರಪಂಚದಲ್ಲಿ ಎಂತೆಂತದ್ದೋ ಬಿಸಿನೆಸ್ಗಳಿವೆ. ನಾವು ವಿಷಕಾರಿ ಅಂತ ಬಡಿದು ಕೊಲ್ಲುವ ಹಾವು ಚೇಳುಗಳನ್ನ ಸಾಕಿಯೇ ಜೀವನ ಮಾಡೋ ಭೂಪರು ನಮ್ಮ ನಿಮ್ಮ ನಡುವೆ ಇದ್ದಾರೆ ಅಂದ್ರೆ ನಂಬಲೇಬೇಕು. ಇಲ್ಲೊಬ್ಬ ಪುರಾತತ್ವ ಶಾಸ್ತ್ರದ ವಿದ್ಯಾರ್ಥಿ ತನ್ನ ಓದಿಗೆ ಗುಡ್ ಬೈ ಹೇಳಿ ಚೇಳಿನ ವಿಷ ಮಾರಾಟ ಮಾಡುವ ಸಂಸ್ಥೆಯನ್ನೇ ಶುರು ಮಾಡಿದ್ದಾನೆ. ಯೌವನದಲ್ಲೇ ಅವನು ಚೇಳಿನ ವಿಷ ಮಾರಿ ದುಡಿಯುತ್ತಿರೋದು ಕೋಟಿ ಕೋಟಿ.
ಚೇಳು ಮತ್ತು ಹಾವು ಅಂದ್ರೆ ಅವುಗಳನ್ನ ಕಂಡ್ರೆ ಕೊಲ್ಲೋ ಸಂಸ್ಕೃತಿ ನಮ್ಮದು. ಆದ್ರೆ ವಿದೇಶದಲ್ಲಿ ಹಾವು ಚೇಳುಗಳನ್ನ ಹಿಡಿದುಕೊಂಡು ತಿನ್ನೋದಷ್ಟೆ ಅಲ್ಲ, ಅವುಗಳ ವಿಷವನ್ನೂ ಮಾರಾಟ ಮಾಡೋ ಮಂದಿ ಇದ್ದಾರೆ. ನಮಗೂ ನಿಮಗೂ ತಿಳಿಯದ ವಿಷಯ ಏನಪ್ಪ ಅಂದ್ರೆ ಚೇಳು ಮತ್ತು ಹಾವುಗಳ ವಿಷವನ್ನ ಬಳಕೆ ಮಾಡ್ಕೊಂಡೇ ಅನೇಕ ರೀತಿಯ ಮೆಡಿಸಿನ್ ಗಳನ್ನ ತಯಾರಿಸಲಾಗುತ್ತೆ. ಆ ಮೆಡಿಸಿನ್ ಫ್ಯಾಕ್ಟರಿಗಳೇ ಈ ಚೇಳು ಸಾಕುವ, ಹಾವು ಸಾಕುವವರಿಗೆ ಆದಾಯದ ಮೂಲಗಳು.
ಆತನ ಹೆಸ್ರು ಮೊಹಮ್ಮದ್ ಹ್ಯಾಮಿ ಬೋಸ್ತಾ. ಮೂಲತಃ ಈಜಿಪ್ಟ್ ನ ಕೈರೋ ನಿವಾಸಿ. ಪುರಾತತ್ವ ಶಾಸ್ತ್ರ ಓದುತ್ತಿದ್ದ. ಓದುತ್ತಿರುವಾಗಲೇ ಆತನಿಗೆ ಚೇಳಿನ ವಿಷಕ್ಕೆ ಭಾರಿ ಬೆಲೆ ಇದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಚೇಳುಗಳನ್ನ ಸಾಕೋ ನಿರ್ಧಾರ ಮಾಡಿಕೊಂಡ. ಅದಕ್ಕೆ ಅಂತಲೇ ಕಾಲೇಜಿಗೆ ಗುಡ್ ಬೈ ಹೇಳಿಬಿಟ್ಟ. ನಂತ್ರ ಹೊರಟಿದ್ದು ಚೇಳುಗಳ ಬೇಟೆಗೆ. ಗುಡ್ಡಗಾಡು, ಬಿಲ, ಮರುಭೂಮಿ, ನದಿ ಕಿನಾರೆಗಳು ಯಾವ ಸ್ಥಳಗಳನ್ನೂ ಬಿಡದೇ ಚೇಳುಗಳನ್ನ ಹುಡುಕಾಡ ತೊಡಗಿದ.ಇವತ್ತು 80 ಸಾವಿರ ಚೇಳುಗಳನ್ನ ಸಾಕಿದ್ದಾನೆ. ಚೇಳಿನ ವಿಷದ ಮಾರಾಟಕ್ಕೆ ಅಂತಲೇ ಅಧಿಕೃತವಾಗಿ ಕೈರೋ ವೆನಮ್ ಕಂಪನಿ ಅನ್ನೋ ಸಂಸ್ಥೆಯನ್ನೂ ತೆರೆದಿದ್ದಾನೆ.
ಗ್ರಾಂ ವಿಷಕ್ಕೆ 7 ಲಕ್ಷ ನಲ್ವತ್ತು ಸಾವಿರ ರೂಪಾಯಿ..!
ಹೌದು. ಇಷ್ಟೊಂದು ಬೆಲೆಯಾ ಅಂತ ನಾವು ನೀವು ಬಾಯಿ ಮೇಲೆ ಬೆರಳಿಟ್ಟುಕೊಳ್ತೀವಿ. ಆದ್ರೆ ಇದೇ ಒಂದು ಗ್ರಾಂ ಚೇಳಿನ ವಿಷದಲ್ಲಿ ಸಂಧಿವಾತದಂತಹ ಖಾಯಿಲೆ ಗುಣಪಡಿಸೋ ಶಕ್ತಿ ಇದೆಯಂತೆ. ಇದನ್ನ ವಿಜ್ಞಾನಿಗಳು ಕೂಡ ದೃಡ ಪಡಿಸಿದ್ದಾರೆ. ಸಂಧಿವಾತದಂತಹ ಖಾಯಿಲೆಗೆ ಔಷಧಿ ತಯಾರಿಸೋ ಕಂಪನಿಗಳು ಬೋಸ್ತಾನ ಕೈರೋ ವೆನಮ್ ಕಂಪನಿಯೊಂದಿಗೆ ಅಗ್ರಿಮೆಂಟ್ ಕೂಡ ಮಾಡಿಕೊಂಡಿವೆ. ಅಷ್ಟು ಸುಲಭವಾಗಿ ದೊರೆಯದ ಕಾರಣ ಚೇಳಿನ ವಿಷಕ್ಕೆ ಭಾರಿ ಬೆಲೆ ಇದೆ.
ಇನ್ನು ಈ ವಿಷ ತೆಗೆಯೋ ಪ್ರಕ್ರಿಯೇ ಕೂಡ ಇಂಟ್ರೆಸ್ಟಿಂಗ್.ಹಿಡಿದುಕೊಂಡು ಬರೋ ಚೇಳುಗಳನ್ನ ಮೊದ್ಲಿಗೆ ಒಂದು ಬಾಕ್ಸಿನಲ್ಲಿ ಹಾಕಲಾಗುತ್ತೆ. ನಂತ್ರ ಚೇಳಿನ ಬಾಲದಲ್ಲಿರೋ ವಿಷವನ್ನ ತೆಗೆಯೋ ಮುನ್ನ ಅವುಗಳನ್ನ ಅಲ್ಟ್ರಾ ವೈಲೆಟ್ ಕಿರಣಗಳು ಸೂಸುವ ಬಾಕ್ಸಿಗೆ ಶಿಫ್ಟ್ ಮಾಡಲಾಗುತ್ತೆ. ಅಲ್ಲಿ ಸಣ್ಣದಾಗಿ ವಿದ್ಯುತ್ ಹರಿಸಲಾಗುತ್ತೆ.ಈ ಕ್ರಿಯೆಯಿಂದ ಚೇಳುಗಳು ಒತ್ತಡಕ್ಕೆ ಬಿದ್ದು ವಿಷ ಹೊರ ಬಿಡುತ್ತವೆ.ಆ ವಿಷವನ್ನ ಸಂಗ್ರಹಿಸಲಾಗುತ್ತೆ.ಚೇಳಿನ ಒಂದು ತೊಟ್ಟು ವಿಷದಲ್ಲಿ 20 ಸಾವಿರದಿಂದ 50 ಸಾವಿರ ಆಂಟಿ ಡೋಸ್ ಔಷಧಿ ತಯಾರಿಸಬಹುದು ಅಂತಾರೆ ತಜ್ಞರು.
ಚೇಳಿನ ವಿಷ ಒಂದು ಗ್ರಾಮಿಗೆ ಏಳುವರೆ ಲಕ್ಷ ರೂಪಾಯಿ ಆದ್ರೆ ಹಾವಿನ ವಿಷಕ್ಕೂ ಒಳ್ಳೆ ಬೆಲೆ ಇದೆ. ಹೀಗಾಗಿಯೇ ಇದೆ ಮೊಹಮ್ಮದ್ ಹ್ಯಾಮಿ ಬೋಸ್ತಾ ತನ್ನ ಕೈರೋ ವೆನಮ್ ಕಂಪನಿಯಲ್ಲಿ ಹಾವಿನ ವಿಷವನ್ನೂ ಕೂಡ ಮಾರಾಟ ಮಾಡುತ್ತಿದ್ದಾನೆ. ಲೀಗಲ್ ಆಗಿಯೇ ವ್ಯಾಪಾರ ಮಾಡ್ತಾ ಇರೋ ಬೋಸ್ತಾ ಅನೇಕ ಮೆಡಿಸಿನ್ ಕಂಪನಿಗಳೊಂದಿಗೆ ಒಪ್ಪಂದ ಮಾಡ್ಕೊಂಡು ವ್ಯವಹಾರ ನಡೆಸುತ್ತಿದ್ದಾನೆ. ಇನ್ನು ಹಾವಿನ ವಿಷಕ್ಕೆ ಕಾಳಸಂತೆಯಲ್ಲಿ ಭಾರಿ ಬೇಡಿಕೆ ಇದೆ. ಇದಕ್ಕೆ ಕಾರಣ ಮಾದಕ ವಸ್ತು ತಯಾರಿಕೆಯಲ್ಲಿ ಹಾವಿನ ವಿಷವನ್ನ ಬಳಸಲಾಗುತ್ತದೆ. ಅಷ್ಟೆ ಅಲ್ಲ, ಹಾವಿನಿಂದ ಕಚ್ಚಿಸಿಕೊಳ್ಳೋದು ಕೂಡ ವ್ಯಸನವಾಗಿ ಚಾಲ್ತಿಯಲ್ಲಿದೆ. ಹೀಗಾಗಿ ಅದು ಅಧಿಕೃತ ಮಾರಾಟಕ್ಕಿಂತ ಅನಧೀಕೃತ ಮಾರಟವೇ ಹೆಚ್ಚಾಗಿರುತ್ತೆ.
ಒಟ್ನಲ್ಲಿ ಚೇಳು ಸಾಕಿ ಕೂಡ ರಾಯಲ್ ಲೈಫ್ ಲೀಡ್ ಮಾಡಬಹುದು ಅನ್ನೋದನ್ನ ಹ್ಯಾಮಿ ಬೋಸ್ತಾ ತೋರಿಸಿಕೊಟ್ಟಿದ್ದಾನೆ. ಮೆಡಿಸಿನ್ ಕಂಪನಿಗಳಿಂದ ಈತನಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಚೇಳು ಸಾಕೋದನ್ನೇ ವೃತ್ತಿ ಮಾಡಿಕೊಂಡಿರೋ ಹ್ಯಾಮಿ ಬೋಸ್ತಾ ದುಡಿಯುತ್ತಿರೋದು ಲಕ್ಷ ಲಕ್ಷ. ಕ್ಯಾನ್ಸರ್, ಸಂಧೀವಾತದಂತಹ ಖಾಯಿಲೆ ಗುಣಪಡಿಸೋ ಚೇಳು ಕೂಡ ಎಷ್ಟು ಅಪಾಯಕಾರಿಯೋ ಅಷ್ಟೆ ಉಪಕಾರಿ ಅಲ್ವಾ.