ಈ ಕ್ಷಣ :

ಭಿನ್ನ ಬಣದ ಶ್ರೀರಾಮುಲುಗೆ ಬಿಎಸ್​ವೈ ಎದಿರೇಟು; ಇದು ಆಪ್ತನ ಬಂಧನದ ಅಸಲಿಯತ್ತು!

Published 15 ಮಾರ್ಚ್ 2023, 23:38 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

POLITICS:

ಲಕ್ಷ್ಮೀಸಾಗರ ಸ್ವಾಮಿಗೌಡ

ಬಿಜೆಪಿಯಲ್ಲಿರುವ ತಮ್ಮ ವಿರೋಧಿ ಪಡೆಯನ್ನು ಅಡ್ಡಡ್ಡ ಮಲಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಸಿದ್ಧರಾಗಿದ್ದಾರೆಯೇ? ಅದರಿಂದಲೇ ತಮ್ಮ ಆಪ್ತ ಬಸವರಾಜ ಬೊಮ್ಮಾಯಿಯವರ ಕೈಯಲ್ಲಿರುವ ಗೃಹ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ? ಸದ್ಯದ ವಿದ್ಯಮಾನಗಳನ್ನು ಮತ್ತು ಯಡಿಯೂರಪ್ಪನವರ ವಿರೋಧಿ ಪಡೆಯ ಮನಸ್ಸಿನಲ್ಲಾಗುತ್ತಿರುವ ತಲ್ಲಣಗಳನ್ನು ಗಮನಿಸಿದರೆ ಸದ್ಯಕ್ಕೆ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ತಮ್ಮ ವೈರಿಪಡೆಯ ವಿರುದ್ಧ ಮುರಕೊಂಡು ಬಿದ್ದಿರುವುದಂತೂ ಸತ್ಯ.

ಅಂದಹಾಗೆ ಈಗ ಬೆಂಗಳೂರಿನ ಸಿಸಿಬಿ ಪೊಲೀಸರು ಗುರುವಾರ ರಾತ್ರಿ ಬಂಧಿಸಿರುವ ರಾಜಣ್ಣ ಅಲಿಯಾಸ್ ಮಚ್ ಮೋರ್ ರಾಜುವಿನ ವಿಷಯಕ್ಕೆ ಬರೋಣ. ಈತನ ಬಂಧನದ ಕುರಿತು ಸಿಸಿಬಿ ಪೊಲೀಸರು ಮತ್ತು ಖುದ್ದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳುತ್ತಿರುವ ವಿವರಗಳನ್ನುಗಮನಿಸಿದರೆ ಎರಡೂ ಕಡೆಯಿಂದಲೂ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂಬುದಂತೂ ಸತ್ಯ.

ಅಸಲಿಗೆ, ಈಗ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ ಸಚಿವ ಶ್ರೀರಾಮುಲು ಆಪ್ತ ರಾಜಣ್ಣ ಅಲಿಯಾಸ್ ಮಚ್ ಮೋರ್ ರಾಜು ಸಭ್ಯನೇನಲ್ಲ. ಮೂಲತಃ ಬಳ್ಳಾರಿಯ ಗಾಂಧಿನಗರದ ಓಣಿಯಲ್ಲಿ ಹುಟ್ಟಿ ಬೆಳೆದವನು. ಬಳ್ಳಾರಿಯ ಹುಂಬ ಹುಡುಗರ ದಂಡು ಕಟ್ಟಿಕೊಂಡು ಹವಾ ಇಟ್ಟಿಕೊಂಡಿದ್ದವನು. 1998ರಿಂದಲೇ ಶ್ರೀರಾಮುಲು ಸಹವಾಸ ಮಾಡಿದ ರಾಜು, ಶ್ರೀರಾಮುಲು ಅವರಿಗಿದ್ದ ಆರು ಮಂದಿ ಆಪ್ತ ಸಹಾಯಕರ ಪೈಕಿ ಎರಡನೇ ಸ್ಥಾನದಲ್ಲಿದ್ದವನು. ಮೊದಲ ಸ್ಥಾನದಲ್ಲಿದ್ದ ಮಹೇಶ್ ರೆಡ್ಡಿ ಈಗ್ಗೆ ಆರು ತಿಂಗಳ ಹಿಂದೆ ನೇಣಿಗೆ ಗೋಣು ಕೊಟ್ಟಾಗ ಅನಾಯಾಸವಾಗಿ ಶ್ರೀರಾಮುಲು ಅವರ ಪಟ್ಟದ ಶಿಷ್ಯನಾಗಿ ಆಯಕಟ್ಟಿನ ಹುದ್ದೆಯಲ್ಲಿ ಕುಳಿತವನು. ಆದರೆ ಸಚಿವ ಶ್ರೀರಾಮುಲುವಿಗೆ ಇವರ್ಯಾರೂ ಸರ್ಕಾರದಿಂದ ನೇಮಕವಾದ ಆಪ್ತ ಸಹಾಯಕರಲ್ಲ. ಇವರೆಲ್ಲ ಸಚಿವ ಶ್ರೀರಾಮುಲುವಿನ ಖಾಸಗಿ ಬಂಟರು. ಶ್ರೀರಾಮುಲುವಿನ ಅಷ್ಟೂ ಹಡಬೆ ದಂಧೆಗಳ ವಸೂಲಿ ವೀರರು ಇವರೇ. ಶ್ರೀರಾಮುಲು ಯಾವುದೇ ವ್ಯವಹಾರ ನಡೆಸಿದರೂ ಅದನ್ನು ಈಗ ಬಂಧಿತನಾಗಿರುವ ರಾಜಣ್ಣನ ಮೊಬೈಲ್ ಮೂಲಕವೇ ನಡೆಸುತ್ತಿದ್ದುದು. ಈಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ರಾಜಣ್ಣನ ಮೊಬೈಲ್ ಶ್ರೀರಾಮುಲು ಅವರನ್ನು ಅಕ್ಷರಶಃ ಅಡಕತ್ತರಿಯಲ್ಲಿ ಸಿಕ್ಕಿಸಿರುವುದಂತೂ ದಿಟ.

ಈಗ್ಗೆ ಎರಡು ವಾರಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಬಂಡಾಯದ ಕಹಳೆ ಮೊಳಗಿತಲ್ಲಾ, ಅದರಿಂದ ತಮ್ಮ ಕುರ್ಚಿ ಹೊರಟೇ ಹೋಯಿತೇನೋ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧೀರರಾಗಿದ್ದು ನಿಜ. ತಮ್ಮ ವಿರುದ್ಧ ಬಂಡಾಯ ಎದ್ದಿರುವವರ ಬೆನ್ನ ಹಿಂದೆ ಖುದ್ದು ದೆಹಲಿಯ ಹೈಕಮಾಂಡ್ ಇದೆ ಎನ್ನುವುದು ಅವರ ಹೆದರಿಕೆಗೆ ಕಾರಣವಾಗಿತ್ತು. ರಾಜ್ಯ ಬಿಜೆಪಿಯ ಭಿನ್ನಮತವನ್ನು ಶಮನಗೊಳಿಸಲು ಬಂದ ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎದುರು ಕೇವಲ ಸಿ.ಪಿ.ಯೋಗೀಶ್ವರ್, ಅರವಿಂದ್ ಬೆಲ್ಲದ್, ಯತ್ನಾಳ್​ರಂಥ ಬೆರಳೆಣಿಕೆಯ ಮಂದಿ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಅಪಸ್ವರ ತೆಗೆದರೇ ಹೊರತು ಬೇರಾರೂ ಪಕ್ಷದ ಹೈಕಮಾಂಡ್ ಎದಿರು ನಾಯಕತ್ವದ ವಿರುದ್ಧ ಅಪಸ್ವರ ತೆಗೆಯಲೇ ಇಲ್ಲ.

ಅರುಣ್ ಸಿಂಗ್ ಬಂದು ಹೋದ ಮೇಲೆ ತಮ್ಮ ಅಧಿಕಾರಕ್ಕಿದ್ದ ವಿಘ್ನ ನಿವಾರಣೆಯಾಯಿತದು ಯಡಿಯೂರಪ್ಪ ಸಮಾಧಾನಗೊಂಡರೂ, ಅದರ ಬೆನ್ನಿಗೆ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ತಂದುಕೊಟ್ಟ ವರದಿ ಮುಖ್ಯಮಂತ್ರಿಗಳನ್ನು ದಿಗಿಲುಗೊಳಿಸಿತ್ತು. ಅಧಿಕಾರಿಗಳು ನೀಡಿದ ವರದಿಯಲ್ಲಿ ಸಚಿವ ಶ್ರೀರಾಮುಲು ಸೇರಿದಂತೆ ಬಳ್ಳಾರಿ ಮತ್ತು ಹೊಸಪೇಟೆ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಸಾಮೂಹಿಕವಾಗಿ ಕಾಂಗ್ರೆಸ್ಸಿಗೆ ಗುಳೇ ಹೋಗುವುದಕ್ಕೆ ಸಿದ್ಧವಾಗಿರುವುದು ಗಮನಕ್ಕೆ ಬಂದಿತ್ತು. ಈ ವ್ಯವಹಾರದಲ್ಲಿ ಸಚಿವ ಶ್ರೀರಾಮುಲು ತಮ್ಮ ಆಪ್ತ ಸಹಾಯಕ ರಾಜಣ್ಣನ ಮೊಬೈಲ್ ಬಳಸಿರುವುದು ಗೊತ್ತಾದ ತಕ್ಷಣ ಈಗ ರಾಜಣ್ಣನ ಬಂಧನವಾಗಿದೆ.

ಆ ಮೂಲಕ ಯಡಿಯೂರಪ್ಪ ಶ್ರೀರಾಮುಲು ಅವರಿಗೆ ಎದಿರೇಟು ಕೊಟ್ಟಿದ್ದು, ಸದ್ಯಕ್ಕೆ ಸಿಸಿಬಿ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮದ ಮೇಲೆಯೇ ಶ್ರೀರಾಮುಲು ಅವರ ಮಂತ್ರಿಗಿರಿಯ ಭವಿಷ್ಯ ನಿಂತಿದೆ. ಆ ಮೂಲಕ ಯಡಿಯೂರಪ್ಪ ತಮ್ಮ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವುದಂತೂ ಸತ್ಯ.


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45