ಈ ಕ್ಷಣ :

ಅಂಜೂರ ಕೃಷಿ: ರೈತರಿಗೆ ಉತ್ತಮ ಆದಾಯ ನೀಡುವ ಒಣಪ್ರದೇಶದ ಬೆಳೆ!

Published 16 ಮಾರ್ಚ್ 2023, 14:27 IST
Last Updated 1 ಮೇ 2023, 16:40 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

ಮೂಲತಃ ದಕ್ಷಿಣ ಅರೇಬಿಯಾದ ಬೆಳೆಯಾದ ಅಂಜೂರವು ಒಣಪ್ರದೇಶಕ್ಕೆ ಸೂಕ್ತವಾದದ್ದರಿಂದ ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ . ಅಂಜೂರ ಬೆಳೆಯಲ್ಲಿ ಇಳುವರಿ ಹೆಚ್ಚಾಗಲು ರೈತರು ಸುಧಾರಿತ ಬೇಸಾಯ ಕ್ರಮವನ್ನು ಅಳವಡಿಸಿಕೊಳ್ಳಬೇಕು . ತೋಟಗಾರಿಕಾ ಬೆಳೆಗಳಲ್ಲಿ ಅಂಜೂರವು ಒಂದು ಒಣಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಬಹುದು ಆದ್ದರಿಂದ ಹೈದ್ರಾಬಾದ್ ಕರ್ನಾಟಕದಲ್ಲಿ ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.


ಗುಣಮಟ್ಟದ ಅಂಜೂರ ಬೆಳೆದು ಉತ್ತಮ ಇಳುವರಿ ಪಡೆಯಲು ರೈತರು ಸುಧಾರಿತ ಬೇಸಾಯ ಕ್ರಮವನ್ನು ಅಳವಡಿಸಿಕೊಂಡು ಬೆಳೆಯುವುದು ಅವಶ್ಯಕ. ಆಂಜೂರ ಬೆಳೆ ಅನ್ನುವುದು ಪ್ರಾಚೀನ ಕಾಲದಿಂದಲೂ ಚಿರಪರಿಚಿತವಾದ ಹಣ್ಣಿನ ಬೆಳೆಯಾಗಿದೆ. ಇದು ಮೂಲತಃ ದಕ್ಷಿಣ ಅರೇಬಿಯಾ ದೇಶಕ್ಕೆ ಸೇರಿದ್ದು. ಈ ಅಂಜೂರ ಬೆಳೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಒಣ ಪ್ರದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದುತ್ತಿದೆ .


ಇದರಲ್ಲಿ ಹೆಚ್ಚಿನ ಸಕ್ಕರೆ ಪ್ರಮಾಣವನ್ನು ನೋಡಬಹುದು. ಕಡಿಮೆ ಪ್ರಮಾಣದಲ್ಲಿ ಆಮ್ಲತೆಯನ್ನು ಹೊಂದಿರುತ್ತದೆ. ಹಾಗೆ ಇದರಲ್ಲಿ ಖನಿಜ ಅಂಶಗಳಾದಂತಹ ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ ಇದರ ಜೊತೆಗೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಅಂಜೂರ ಬೇಸಾಯ ಮಾಡಲು ಸೂಕ್ತ ಮಣ್ಣು ಮತ್ತು ಕಡಿಮೆ ಸಾಧಾರಣ ಉಷ್ಣಾಂಶ ಇರುವುದು ಅಗತ್ಯ. ಹಾಗೆ ಕಪ್ಪು ಮಣ್ಣು ಇದ್ದರು ಈ ಬೆಳೆಯನ್ನು ಬೆಳೆಯಬಹುದು.


ಸಾಧಾರಣವಾದ ಉಷ್ಣಾಂಶ, ಹಾಗೆ ಕಡಿಮೆ ಆರ್ಧ್ರತೆಯನ್ನು ಹೊಂದಿರುವಂತಹ ಹವಾಮಾನ ಇದ್ದಾರೆ ಸೂಕ್ತವಾಗಿರುತ್ತದೆ. ಅಂಜೂರದ ಸಸ್ಯ ಉತ್ಪಾದನೆಯನ್ನು ಕಾಂಡದ ತುಂಡುಗಳು ಮತ್ತು ಕಸಿಕಟ್ಟುವ ವಿಧಾನದ ಮೂಲಕ ಮಾಡಬಹುದು. ಅಂಜೂರ ಬೆಳೆ ಬೆಳೆಯಲು ಸೂಕ್ತವಾದ ಸಮಯ ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಟಿ ಮಾಡಲು ಸೂಕ್ತವಾಗಿರುತ್ತೆ. ಅಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಇರುವುದರಿಂದ ಇದರ ಕಾಂಡದ ತುಂಡುಗಳು ಚೆನ್ನಾಗಿ ಬೆಳೆಯುತ್ತದೆ.


ಅಂಜೂರದಲ್ಲಿ ವಿವಿಧ ತಳಿಗಳು ಲಭ್ಯವಿದ್ದು ತಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ಬೆಳೆದು ಉತ್ತಮ ಆದಾಯ ಗಳಿಸಬಹುದು. ಇದರಲ್ಲಿ ೫ ರಿಂದ ೬ ತಳಿಗಳನ್ನು ನೋಡಬಹುದು, ಪೂನಾ ಅಂಜೂರ ಅಥವಾ ಬಳ್ಳಾರಿ ಅಂಜೂರ , ಡಯಾನಾ ಅಂಜೂರ ತಳಿಗಳನ್ನ ಹೇರಳವಾಗಿ ಕಾಣಬಹುದಾಗಿದೆ.


ಬೇಸಾಯಕ್ರಮಗಳು
ಎಷ್ಟು ಅಂತರದಲ್ಲಿ ನಾಟಿ ಮಾಡಬೇಕು: ಗಿಡದಿಂದ ಗಿಡಕ್ಕೆ 15 ಅಡಿ ಅಂತರ ಸಾಲಿನಿಂದ ಸಾಲಿಗೆ 15 ಅಡಿ ಅಂತರ ಕೊಟ್ಟು ನಾಟಿ ಮಾಡಬೇಕು. ಹೀಗೆ ನಾಟಿ ಮಾಡಿದರೆ ಒಂದು ಎಕರೆಗೆ 140 ರಿಂದ 150 ಗಿಡವನ್ನು ಕೂರಿಸಬಹುದು. ಅಂಜೂರ ಬೆಳೆಗೆ ಸುಧಾರಿತ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪ್ರದಾನ ಮತ್ತು ಸೂಕ್ಷ್ಮ ಪೋಷಕಾಂಶವನ್ನು ಒದಗಿಸಬೇಕು.


ಪೋಷಕಾಂಶಗಳನ್ನು ಯಾವಾಗಲು ಮಣ್ಣು ಪರೀಕ್ಷೆ ಆದ ಮೇಲೆ ರೈತರು ಒದಗಿಸಬೇಕಾಗುತ್ತದೆ ಪ್ರತಿಯೊಂದು ಗಿಡಕ್ಕೆ ರೈತರು 25 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು. ಮೊದಲ ಒಂದು ವರ್ಷದಲ್ಲಿ 25 ಕೆಜಿ ಕೊಟ್ಟಿಗೆ ಗೊಬ್ಬರ ನೀಡಬೇಕು. 3 ನೇ ಮತ್ತು 5 ನೇ ವರ್ಷದಲ್ಲಿ ಮೊದಲನೇ ವರ್ಷದಲ್ಲಿ ನೀಡಿರುವ ಗೊಬ್ಬರಕ್ಕಿಂತ ದ್ವಿಗುಣಗೊಳಿಸಿ ನೀಡಬೇಕಾಗುತ್ತದೆ .


ಒಂದು ಸಾರಿ ನಾಟಿ ಮಾಡಿದ ಮೇಲೆ ಗಿಡಗಳು ಒಂದು ಆಕಾರ ಬಂದ ಮೇಲೆ ಅವುಗಳನ್ನು 3 ಅಥವಾ 4 ರಂಬೆಯನ್ನು ಉಳಿಸಿಕೊಂಡು ಉಳಿದ ರಂಬೆಯನ್ನು ಸವರಬೇಕು. ಪ್ರತಿಯೊಂದು ರಂಬೆಯಲ್ಲಿ 5 ರಿಂದ 8 ರೆಂಬೆಯನ್ನು ಉಳಿಸಿಕೊಳ್ಳಬೇಕು. ಹೀಗೆ ನೀವು ಆಕಾರ ಕೊಡಬೇಕು. ಯಾಕಂದ್ರೆ ಯಾವುದೇ ರೀತಿಯ ಕೀಟಗಳ ತೊಂದರೆ ಹಾಗೆ ರೋಗ ಬಾಧೆ ಆದಾಗ ಔಷಧಿ ಸಿಂಪಡಣೆ ಮಾಡಲು ಸಹಾಯವಾಗುತ್ತದೆ .


ಅಂಜೂರದ ಗಿಡವನ್ನು ಎಷ್ಟು ಎತ್ತರದಲ್ಲಿ ಬೆಳೆಸಬೇಕು: ಅಂದರೆ ಕನಿಷ್ಠ 90 ರಿಂದ 120 ಸೆಂಟಿಮೀಟರ್ ಎತ್ತರಕ್ಕೆ ಬೆಳೆಸಬೇಕು. ನಾಟಿ ಮಾಡಿದ 2 ವರ್ಷದಿಂದ ಅಂಜೂರದ ಫಸಲು ಪಡೆಯಬಹುದು. ಕೊಯ್ಲಿನ ನಂತರ ಬೆಲೆ ಸಿಗದಿದ್ದರೆ ಒಣಗಿಸಿ ಮಾರಾಟ ಮಾಡಬಹುದಾಗಿದೆ.


ಒಂದು ಸಾರಿ ನಾಟಿ ಮಾಡಿದ ಮೇಲೆ ೨ ನೇ ವರ್ಷದಿಂದ ಹಣ್ಣು ಬಿಡಲು ಪ್ರಾರಂಭ ಆಗುತ್ತದೆ ೨ ನೇ ವರ್ಷದ ನಂತರ ಪ್ರತಿ ಗಿಡದಿಂದ ೨ ರಿಂದ ೩ ಕೆಜಿ ಹಣ್ಣುಗಳನ್ನು ಪಡೆದುಕೊಳ್ಳಬಹುದು. ವಾಣಿಜ್ಯ ಕೊಯ್ಲು ಅಂತ ಬಂದಾಗ ಇದು ೫ ರಿಂದ ೬ ವರ್ಷ ಆದ ನಂತರ ಪ್ರತಿ ಅಂಜೂರದ ಗಿಡ ೨೦ ರಿಂದ ೨೫ ಕೆಜಿ ಹಣ್ಣುಗಳನ್ನು ಕೊಡುತ್ತದೆ. ಒಂದು ಹೆಕ್ಟಾರ್ ಪ್ರದೇಶಕ್ಕೆ ೮ ರಿಂದ ೧೨ ಟನ್ ಗಳಷ್ಟು ಹಣ್ಣುಗಳನ್ನು ಪಡೆದುಕೊಳ್ಳಬಹುದು.
ಇದು ಅಂಜೂರ ಕೃಷಿಯ ಮಾಹಿತಿ. ರೈತರು ಸರಳವಾಗಿ ತಮ್ಮ ಜಮೀನುಗಳಲ್ಲಿ ಅಂಜೂರ ಬೆಳೆದು ಲಾಭಗಳಿಸಬಹುದಾಗಿದೆ.
-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24x7 ಲೈವ್ ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45