ಈ ಕ್ಷಣ :

ನುಗ್ಗೆಕಾಯಿ ಕೃಷಿ ಮಾಡಿ ಕೈ ತುಂಬಾ ಗಳಿಸಿ ಲಕ್ಷ ಲಕ್ಷ ಹಣ!

Published 16 ಮಾರ್ಚ್ 2023, 14:25 IST
Last Updated 1 ಮೇ 2023, 16:59 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

SPECIAL:

ನುಗ್ಗೆ ಒಂದು ಬಹುವಾರ್ಷಿಕ ತರಕಾರಿ ಬೆಳೆ ಇದು ಮೊರಿಂಗೆಸಿ ಕುಟುಂಬಕ್ಕೆ ಸೇರಿದೆ. ಪ್ರಪಂಚದಲ್ಲಿ ನುಗ್ಗೆ ಉತ್ಪಾದನೆಯಲ್ಲಿ ಭಾರತವು ಉನ್ನತ ಸ್ಥಾನವನ್ನು ಪಡೆದಿದೆ. ವಿಶ್ವದ ಬೇಡಿಕೆಯಲ್ಲಿ ಶೇಕಡಾ ೮೦ ರಷ್ಟು ರಪ್ತು ಪೂರೈಸುತ್ತದೆ. ಗಿಡದ ಪ್ರತಿಯೊಂದು ಭಾಗವು ಸಹ ಉಪಯೋಗಕ್ಕೆ ಬಳಸಲಾಗುತ್ತದೆ. ಇತ್ತೀಚೆಗಿನ ನುಗ್ಗೆಯ ಕಾಯಿ ಮಾತ್ರವಲ್ಲದೆ ಇದರ ಸೊಪ್ಪಿಗೂ ಸಹ ಅಷ್ಟೇ ಬೇಡಿಕೆ ಹೆಚ್ಚಾಗುತ್ತಿದೆ .


ಈಗ ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಅದಾರಿಂದ ಟೀ ಹಾಗು ಅದರ ಪುಡಿಯನ್ನು ಸೇವಿಸುತ್ತಿದ್ದಾರೆ ಇದರಿಂದಾಗಿ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಅಲ್ಲದೆ ಇದರ ತೊಗಟೆಯನ್ನು ಜೀರ್ಣಕಾರಿ ವಸ್ತುವನ್ನಾಗಿ ಸಹ ಬಳಸಲಾಗುತ್ತಿದೆ. ಆಯುರ್ವೇದ ಔಷಧಿಯಾಗಿ ಬಳಕೆಯಾಗುತ್ತಿರುವ ಇದರ ಬೇಡಿಕೆ ದಿನೇ ದಿನೇ ಹೆಚ್ಚುತ್ತಲೇ ಇದೆ .
ಇಂತಹ ಬಹು ಉಪಯೋಗಿ ಬೆಳೆಯನ್ನು ನೀವು ಮುಖ್ಯಬೆಳೆಯಾಗಿ ಬೆಳೆಯುವುದು ಮಾತ್ರವಲ್ಲದೆ ಇದರ ಮಧ್ಯೆ ಅನೇಕ ಅಂತರ ಬೆಳೆಗಳನ್ನು ಸಹ ಬೆಳೆದು ಅದರಿಂದಲೂ ಸಹ ಆದಾಯವನ್ನು ಗಳಿಸಬಹುದು. ಇದರಿಂದಾಗಿ ಮಲ್ಟಿ ಆದಾಯವನ್ನು ಗಳಿಸಬಹುದಾಗಿದೆ ಆದಾಯ ದ್ವಿಗುಣಗೊಳಿಸುವುದರಲ್ಲಿಯೂ ಸಹ ಒಳ್ಳೆಯ ಬೆಳೆ ಇದಾಗಿದೆ.

ನುಗ್ಗೆ ಮರವನ್ನು ಚಾಪೆ ತಯಾರಿಕೆಗೆ ಮತ್ತು ಪೇಪರ್ ತಯಾರಿಕೆಗೆ ಸಹ ಬಳಸಲಿದ್ದು ಮತ್ತು ನುಗ್ಗೆ ಬೀಜಗಳನ್ನು ಸಸಿಗಳ ಉತ್ಪಾದನೆಗೆ ಮಾತ್ರವಲ್ಲದೆ ಈ ಬೀಜಗಳಿಂದ ತೆಗೆದ ಕೀಲೆಣ್ಣೆಯನ್ನು ಕೈಗಡಿಯಾರ ಮತ್ತು ನಿಖರ ಉಪಕರಣಗಳು ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆಯ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಎಲೆಗಳಿಂದ ತೆಗೆದ ರಸವನ್ನು ರಕ್ತದ ಒತ್ತಡವನ್ನು ಸ್ಥಿರಗೊಳಿಸುವುದು ಎಂದು ಸಹ ಹೇಳಲಾಗುತ್ತಿದೆ.
ಇದರ ಹೂವುಗಳು ಉರಿಯೂತ ಗುಣಪಡಿಸಲು ಕಾಯಿಗಳನ್ನು ಕೀಲು ನೋವುಗಳಿಗೆ ಹಾಗೂ ಬೇರುಗಳನ್ನು ಸಂಧಿವಾತಕ್ಕೆ ಬಳಸಲಾಗುತ್ತದೆ. ಬೆಳೆದ ಬೆಳೆಯಿಂದ ಯಾವ ರೀತಿ ಮೌಲ್ಯವಾರ್ದಿತ ಉತ್ಪನ್ನಗಳನ್ನು ತಯಾರಿಸಬಹುದು ಎನ್ನುವುದನ್ನು ಸಹ ಸರ್ಕಾರ ಅನೇಕ ತರಬೇತಿಯನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಗಳ ಮೂಲಕ ಆಗಿಂದಾಗೆ ನೀಡುತ್ತಲೇ ಇರುತ್ತದೆ. ಇದರ ಪ್ರಯೋಜನವನ್ನು ಪಡೆದು ಸ್ವಾವಲಂಬಿಗಳಾಗಿ ಉನ್ನತ ಮಟ್ಟಕ್ಕೆ ಏರಬಹುದು.


ರೈತರು ಯಾವುದೇ ಬೆಳೆಯನ್ನು ಕೇವಲ ಬೆಳೆಯುವುದು ಒಂದೇ ಅಲ್ಲ. ಅದರ ಬೇರೆ ಬೇರೆ ಉಪಯೋಗಗಳನ್ನು ತಿಳಿದರೆ ಅವರು ಸಹ ಮೌಲ್ಯವರ್ಧನೆ ಕಡೆಗೆ ಗಮನಹರಿಸಿ ಅದರಿಂದ ಹೆಚ್ಚಿನ ಆದಾಯವನ್ನು ಗಳಿಸುವಲ್ಲಿ ಸಹಾಯವಾಗುತ್ತದೆ. ನುಗ್ಗೆ ಬಹುವಾರ್ಷಿಕ ತರಕಾರಿ ಬೆಳೆಯಾಗಿದ್ದು , ಇದರ ಕಾಯಿಗಳಲ್ಲದೆ ಸೊಪ್ಪು ಹಾಗೂ ಹೂಗಳನ್ನು ಸಹ ತರಕಾರಿಯಂತೆ ಉಪಯೋಗಿಸಬಹುದು.


ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ ‘ ಸಿ ‘ ಅನ್ನಾಂಗ , ಕ್ಯಾರೋಟಿನ್ ಇದ್ದು ಕಬ್ಬಿಣ , ರಂಜಕ , ಸುಣ್ಣದ ಅಂಶಗಳೂ ಸಾಕಷ್ಟು ಪ್ರಮಾಣದಲ್ಲಿವೆ . ನುಗ್ಗೆಕಾಯಿಯು ರಂಜಕ ಹಾಗೂ ಕ್ಯಾರೋಟಿನ್ ಒದಗಿಸುತ್ತದೆ.


ನುಗ್ಗೆಕಾಯಿ ಕೃಷಿ ಎಷ್ಟು ಬಂಡವಾಳಬೇಕು
ನುಗ್ಗೆ ಕೃಷಿ ಮಾಡಲು ಒಂದು ಹೆಕ್ಟಾರ್ ಗೆ 80 ಸಾವಿರ ಹಾಗು ಇತರೆ ಖರ್ಚು 20 ಸಾವಿರ ಒಟ್ಟು 1 ಲಕ್ಷ ಬೇಕಾಗುತ್ತದೆ.


ತಳಿಗಳು
ಜಾಫ್ರಾ : ಗಿಡಗಳು 5 ಮೀ . ಎತ್ತರ ಬೆಳೆಯುತ್ತವೆ . ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬೆಳೆಯುವ ತಳಿಯಾಗಿದೆ. ನುಗ್ಗೆಕಾಯಿಗಳು 60 90 ಸೆಂ . ಮೀ . ಉದ್ದವಾಗಿದ್ದು ಮೆತ್ತನೆಯ ತಿರುಳು ಹಾಗೂ ಒಳ್ಳೆಯ ರುಚಿಯನ್ನು ಹೊಂದಿದೆ .
ಚವಕಚೇರಿ ಮುರುಂಗಾ: ಈ ತಳಿಯು ಜಾಫ್ರಾ ತಳಿಯ ಹೋಲಿಕೆ ಪಡೆದಿದ್ದು ನುಗ್ಗೆಕಾಯಿಗಳು 90-120 ಸೆಂ . ಮೀ . ಉದ್ದವಾಗಿರುತ್ತವೆ,
ಜಿ.ಕೆ.ವಿ.ಕೆ. -1: ಸುಮಾರು 250-300 ಕಾಯಿಗಳನ್ನು ಬಿಡುತ್ತದೆ. ಪ್ರತಿ ಕಾಯಿಯು 35-40 ಸೆಂ . ಮೀ . ಉದ್ದವಿದ್ದು 40 ಗ್ರಾಂ ತೂಕವಿರುತ್ತದೆ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ.
ಜಿ.ಕೆ.ವಿ.ಕೆ -2 : ಗಿಡ್ಡಜಾತಿಯ ಫಲಭರಿತವಾದ ತಳಿ, ಒಂದು ವರ್ಷಕ್ಕೆ ಸುಮಾರು 300-400 ಕಾಯಿಗಳನ್ನು ಬಿಡುತ್ತದೆ.
ಜಿ.ಕೆ.ವಿ.ಕೆ -3 : ಗಿಡ್ಡ ಜಾತಿಯ ತಳಿಯಾಗಿದೆ. ನುಗ್ಗೆಕಾಯಿಗಳು ತ್ರಿಕೋನಾಕಾರವಾಗಿದ್ದು , ಕಪ್ಪು ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತವೆ. ಈ ತಳಿಯು ಅಧಿಕ ಸಾಂದ್ರತೆಯ ಬೇಸಾಯಕ್ಕೆ ಯೋಗ್ಯವಾಗಿದೆ. ಒಂದು ವರ್ಷಕ್ಕೆ ಸುಮಾರು 250-300 ಕಾಯಿಗಳನ್ನು ಪ್ರತಿ ಗಿಡದಿಂದ ಪಡೆಯಬಹುದು .
ಧನರಾಜ ( ಸೆಲೆಕ್ಷನ್ 6/4 ): ಇದು ಗಿಡ್ಡ ತಳಿ , ತೆಂಗು ಮತ್ತು ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ ಜಲಾನಯನ ಪ್ರದೇಶಗಳಲ್ಲಿ ಇಡೀ ಬೆಳೆಯಾಗಿ ಹಾಗೂ ಕೃತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಬೀಜ ಬಿತ್ತಿದ ಕೇವಲ 5-10 ತಿಂಗಳುಗಳಲ್ಲಿ ಫಸಲು ಕೊಡುವುದು. ಎರಡು ವರ್ಷದ ಗಿಡ ಪ್ರತಿ ವರ್ಷ 250-300 ರವರೆಗೆ ಕಾಯಿ ಕೊಡುವುದು. ಕಾಯಿಗಳು 35-40 ಸೆಂ . ಮೀ . ಉದ್ದವಿರುತ್ತವೆ
ಪಿ.ಕೆ.ಎಂ.– 1:
ಇದು ತಮಿಳು ನಾಡಿನ ಗಿಡ್ಡ ಜಾತಿಯ ತಳಿ, ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6-12 ತಿಂಗಳಲ್ಲಿ ಫಸಲು ಕೊಡುತ್ತದೆ. ಮೆತ್ತನೆಯ ತಿರುಳು ಮತ್ತು ಉತ್ತಮ ರುಚಿಯನ್ನು ಹೊಂದಿರುತ್ತದೆ. ಈ ತಳಿಯ ಮೂಲವಾಗಿ ಗಿಡ ಜಾತಿಯದು. ಗಿಡದ ಎತ್ತರ 2-4 ಮೀ . ವರೆಗೆ ಬೆಳೆಯುವುದು. ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ ( 100-110 ದಿನಗಳು ನಾಟಿ ಮಾಡಿದ ನಂತರ ) ಒಟ್ಟು ನಾಟಿ ಮಾಡಿದ 160-180 ದಿನಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತದೆ .
ಈ ತಳಿಯ ವೈಶಿಷ್ಟತೆ ಎಂದರೆ ಕಾಯಿಗಳು ಬಿಟ್ಟಾಗಲೂ ಸಹಿತ ಗೊಂಚಲುಗಳಲ್ಲಿ ಹೂ ಹಾಗೂ ಮಿಡಿಕಾಯಿಗಳು ನಿರಂತರವಾಗಿ ಬರುವುದರಿಂದ ವರ್ಷವಿಡೀ ಫಸಲು ತೆಗೆಯಬಹುದು. ಪ್ರತಿ ಕಾಯಿಯು 60-70 ಸೆಂ . ಮೀ . ಉದ್ದವಿದ್ದು , ಕಡುಹಸಿರು ಬಣ್ಣ ಹೊಂದಿ ದುಂಡಗೆ ಇರುವುದು, ಪ್ರಥಮ ವರ್ಷದಿಂದ 350-400 ಕಾಯಿಗಳು ಹಾಗೂ ಎರಡನೇ ವರ್ಷದಲ್ಲಿ 800-1000 ಕಾಯಿಗಳ ಉತ್ತಮ ಫಸಲನ್ನು ಪಡೆಯಬಹುದು.


ಮಣ್ಣು ಹೇಗಿರಬೇಕು ?
ಸಾಧಾರಣವಾಗಿ ನುಗ್ಗೆಯನ್ನು ಎಲ್ಲಾ ತರಹದ ಮಣ್ಣಿನಲ್ಲಿ ಬೆಳೆಯಬಹುದು, ಆದರೆ ಜಿಗುಟು ಮಣ್ಣು ಯೋಗ್ಯವಾದುದಲ್ಲ, ಮರಳು ಮಿಶ್ರಿತ ಗೋಡು ಮಣ್ಣು ಈ ಬೆಳೆಗೆ ಅತಿ ಸೂಕ್ತ.
ಬಿತ್ತನೆ ಕಾಲ; ಇದು ಮುಖ್ಯವಾಗಿ ಅಲ್ಪ ಮಳೆ ಬೀಳುವ ಒಣ ಪ್ರದೇಶದ ಬೆಳೆ. ಇದನ್ನು ಜೂನ್ – ಜುಲೈ ತಿಂಗಳಲ್ಲಿ ನಾಟಿ ಮಾಡಬಹುದು, ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲ ಕಾಲದಲ್ಲಿ ಈ ಬೆಳೆಯನ್ನು ನಾಟಿ ಮಾಡಬಹುದು,


ಸಸಿ ಬೆಳೆಸುವ ಕ್ರಮಗಳು: 15 ಸೆಂ.ಮೀ. X 4 ಸೆಂ.ಮೀ. ಅಳತೆಯ ಪಾಲಿಥೀನ್ ಚೀಲದಲ್ಲಿ ಮರಳಿನ ಮಿಶ್ರಣವನ್ನು ತುಂಬಿ, ಪ್ರತಿ ಚೀಲಕ್ಕೆ ಎರಡು ಬೀಜಗಳಂತೆ 2 ಸೆಂ.ಮೀ. ಆಳದಲ್ಲಿ ನೆಟ್ಟು ಪ್ರತಿ ದಿನ ನೀರು ಹಾಕಬೇಕು, ಸುಮಾರು 7-10 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ, ನಂತರ ಪ್ರತಿ ಚೀಲಕ್ಕೆ ಒಂದು ಸಸಿಯನ್ನು ಉಳಿಸಬೇಕು. ಸಸಿಗಳು 3.5 ರಿಂದ 4.0 ತಿಂಗಳಗಳಲ್ಲಿ 20-30 ಸೆಂ.ಮೀ. ಎತ್ತರ ಬೆಳೆದು ಹೊಲದಲ್ಲಿ ನೆಡಲು ಸಿದ್ಧವಾಗುತ್ತವೆ. ಜೂನ್ – ಜುಲೈ ತಿಂಗಳುಗಳಲ್ಲಿ ಸಸಿಗಳನ್ನು ನಾಟಿ ಮಾಡಲು , ಬೀಜಗಳನ್ನು ಮಾರ್ಚ್‌ನಲ್ಲಿ ಬಿತ್ತಬೇಕು. ಸಸಿಗಳಿಗೆ ಎಲೆ ತಿನ್ನುವ ಕೀಟಗಳ ಬಾಧೆಯನ್ನು ತಡೆಯಲು ಮೆಲಾಥಿಯಾನ್ ದ್ರಾವಣವನ್ನು (ಪ್ರತಿ ಲೀಟರ್ ನೀರಿಗೆ 2 ಮಿಲಿ) ಸಿಂಪಡಿಸಬೇಕು .


ನುಗ್ಗೆಕಾಯಿ ಕೃಷಿ ಬೇಸಾಯ ಕ್ರಮ :
0.06 ಘನ ಮೀ. ಗುಣಿಗಳನ್ನು 3.25 ಮೀ. ಅಂತರದಲ್ಲಿ (ಗಿಡ್ಡ ಜಾತಿಗೆ) ಅಥವಾ 5 ಮೀ. ಅಂತರ ( ಎತ್ತರ ಜಾತಿಗೆ ) ದಲ್ಲಿ ತೆಗೆಯಬೇಕು. ಗುಣಿಗಳಿಗೆ ಸಮಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಕೊಡಬೇಕು. ನಂತರ ಪ್ರತಿ ಗುಣಿಗೆ ಒಂದು ಸಸಿಯನ್ನು ನೆಡಬೇಕು .


ಒಂದು ಮೀಟರ್ ಉದ್ದದ ಮತ್ತು 15 ಸೆಂ . ಮೀ . ವ್ಯಾಸದ ಟೊಂಗೆಗಳನ್ನು ನೇರವಾಗಿಯೂ ಸಹ ನಾಟಿಗೆ ಉಪಯೋಗಿಸಬಹುದು, ಸಣ್ಣ ಸಸಿಗಳಿಗೆ ಆಧಾರವನ್ನು ಒದಗಿಸಬೇಕು. ಶಿಫಾರಸ್ಸು ಮಾಡಿದ ಅರ್ಧ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ನಾಟಿ ಮಾಡಿದ 3 ತಿಂಗಳ ನಂತರ ಮತ್ತು ಉಳಿದ ಅರ್ಧ ಪ್ರಮಾಣದ ರಾಸಾಯನಿಕ ಗೊಬ್ಬರಗಳನ್ನು ಮೊದಲು ಕಂತು ಕೊಟ್ಟು 3 ತಿಂಗಳ ನಂತರ ಕೊಡಬೇಕು, ಎತ್ತರವಾಗಿ ಬೆಳೆದ ಗಿಡಗಳಿಗೆ ನಿರ್ಧಿಷ್ಟಪಡಿಸಿದ ರಾಸಾಯನಿಕ ಗೊಬ್ಬರವನ್ನು ಮಳೆಗಾಲ ಪ್ರಾರಂಭವಾದೊಡನೆ ಕೊಡಬೇಕು.
ನುಗ್ಗೆಕಾಯಿ ಕೃಷಿ ಇಳುವರಿ: ಗಿಡ್ಡ ತಳಿಗಳು ನೆಟ್ಟ 8 ತಿಂಗಳಲ್ಲಿ ಹೂ ಮತ್ತು ಕಾಯಿಗಳನ್ನು ಬಿಡಲು ಪ್ರಾರಂಭಿಸುವವು. ಆದರೆ ಎತ್ತರದ ಗಿಡಗಳಿಗೆ ಒಂದೂವರೆ ವರ್ಷದಿಂದ ಎರಡು ವರ್ಷ ಬೇಕು, ಗಿಡ್ಡ ತಳಿಗಳಲ್ಲಿ ಪ್ರತಿ ಗಿಡದಿಂದ ಎರಡು ವರ್ಷದ ನಂತರ 200-250 ಕಾಯಿಗಳನ್ನು ಪಡೆಯಬಹುದು, ಎತ್ತರದ ತಳಿಗಳಿಂದ ಪ್ರತಿ ಗಿಡಕ್ಕೆ 75 ರಿಂದ 100 ಕಾಯಿಗಳನ್ನು ಪಡೆಯಬಹುದು.


ಮಾರ್ಕೆಟಿಂಗ್ ಮಾಡುವುದು ಹೇಗೆ?
ಹೋಲ್ಸೇಲ್ ಮಾರ್ಕೆಟ್ ಸೇರಿದಂತೆ ದಿನಸಿ ಅಂಗಡಿ , ಹೋಟೆಲ್ , ಸೇರಿದಂತೆ ತರಕಾರಿ ಅಂಗಡಿಗಳಲ್ಲಿ ಸೇಲ್ ಮಾಡಿ ಉತ್ತಮ ಆದಾಯಗಳಿಸಬಹುದು. 5 ರಿಂದ 6 ತಿಂಗಳ ನಂತರ ನಿರಂತರವಾಗಿ ಆದಾಯವನ್ನು ಗಳಿಸಬಹುದು. ಪ್ರತಿ ದಿನಕ್ಕೆ ನೀವು ಒಂದು ಸಾವಿರಕ್ಕೂ ಹೆಚ್ಚು ಆದಾಯವನ್ನು ಗಳಿಸಬಹುದು.
ತಿಳಿದುಕೊಂಡ್ರಲ್ಲ, ಇದು ನುಗ್ಗೆ ಕೃಷಿಯ ಸಂಪೂರ್ಣ ಮಾಹಿತಿ. ಇವತ್ತು ನುಗ್ಗೆಗೆ ಸಾಕಷ್ಟು ಡಿಮ್ಯಾಂಡ್ ಇದೆ. ಹೀಗಾಗಿ ಪ್ರತಿಯೊಬ್ಬ ರೈತನು ಇದನ್ನ ಉಪಬೆಳೆಯಾಗಿ ಬೆಳೆದು ಆದಾಯಗಳಿಸಬಹುದು.


-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24x7 ಲೈವ್ ಕನ್ನಡ


ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45