ENTERTAINMENT:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೇರಿದ್ದ ಸಾಕಷ್ಟು ನಿರ್ಬಂಧಗಳನ್ನ ಸಡಿಲ ಮಾಡಲಾಗಿದೆ. ಆದ್ರೆ ಚಿತ್ರಮಂದಿರಗಳಿಗೆ ವಿಧಿಸಿದ್ದ 50-50 ರೂಲ್ಸ್ ಮುಂದುವರೆದಿದ್ದು ಸಾಕಷ್ಟು ವಿರೋಧಗಳು ಕೇಳಿ ಬಂದಿತ್ತು. ಇದೀಗ ನಟ ವಿಜಯ್ ರಾಘವೇಂದ್ರ ಪ್ರತಿಕ್ರಿಯಿಸಿದ್ದು ಸರ್ಕಾರದ ನಿರ್ಧಾರದ ಹಿಂದೆ ಒಂದು ಅರ್ಥ ಇರುತ್ತದೆ ಎಂದಿದ್ದಾರೆ.
ಸರ್ಕಾರದ ಕೆಲವೊಂದು ನಿರ್ಧಾರ ಹಾಗೂ ಉದ್ದೇಶಗಳ ಹಿಂದೆ ಒಂದು ಅರ್ಥ ಇರುತ್ತದೆ. ಹಾಗಾಗಿ ಇದುವರೆಗೂ ಹೇಗೆ ನಾವು ಎಲ್ಲವನ್ನು ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದೇವೋ ಹಾಗೆಯೇ ಮುಂದೆಯೂ ಕೊಂಚ ತಾಳ್ಮೆ ಇದ್ದರೆ ಖಂಡಿತ ಚಿತ್ರ ಮಂದಿರಳಿಗೂ ಒಳ್ಳೆ ರಿಲ್ಯಾಕ್ಸೇಷನ್ ಸಿಗುತ್ತದೆ. ಕೊರೋನಾ ಎಂಬುದು ನಮ್ಮ ಹಿಡಿತದಲ್ಲಿಲ್ಲ. ನಮ್ಮ ನಮ್ಮ ಜವಬ್ದಾರಿಯನ್ನ ನಾವು ತೆಗೆದುಕೊಂಡರೆ ಬೇರೆ ಉದ್ಯಮಗಳಿಗೆ ಸಿಕ್ಕಂತೆ ನಮಗೂ 100% ಅವಕಾಶ ಸಿಗಲಿದೆ. ಸರ್ಕಾರದ ಕೆಲವೊಂದು ನಿರ್ಧಾರಗಳನ್ನ ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಕೆಲವೇ ದಿನಗಳಲ್ಲಿ 100 ಆಕ್ಯೂಪೆನ್ಸಿ ಸಿಗಲಿದೆ ಎಂದು ನಟ ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಇತ್ತೀಚೆಗೆ ಸರ್ಕಾರದ ನಿರ್ಧಾರದ ಬಗ್ಗೆ ನಟ ವಿನೋದ್ ರಾಜ್ ಕುಮಾರ್ ಆಕ್ರೋಶ ಹೊರ ಹಾಕಿದ್ದು ಚಿತ್ರಮಂದಿರಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ನೀಡಿರುವ ಬಗ್ಗೆ ಕೇಳಿ ನನಗೆ ಶಾಕ್ ಆಯ್ತು. ಸಿನಿಮಾದವರಿಗೆ ಎಲ್ಲಾ ಸಮಯದಲ್ಲೂ ಅನ್ಯಾಯ ಆಗಿದೆ. ನಾವು ಭೂಮಿ ಮೇಲೆ ಬಂಡವಾಳ ಹಾಕುತ್ತಿಲ್ಲ. ಇದು ಕಲೆ ಮೇಲೆ ಹಾಕುವ ಬಂಡವಾಳ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂಬಂಧ ಈಗಾಗ್ಲೆ ಗೃಹ ಕಚೇರಿ ಕೃಷ್ಣಾಗೆ ತೆರಳಿದ್ದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಂ ಸುರೇಶ್ ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಇಂದು ಮತ್ತೊಮ್ಮೆ ಸಿಎಂರನ್ನ ಭೇಟಿ ಮಾಡಲು ವಾಣಿಜ್ಯ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.