ಈ ಕ್ಷಣ :

ಮಗನ ಚಿತ್ರಕ್ಕೆ ಸ್ಟೇ ತಂದ ಅಲ್ಲು ಅರ್ಜುನ್ ತಂದೆ

Published 16 ಮಾರ್ಚ್ 2023, 13:08 IST
Last Updated 7 ಮೇ 2023, 01:54 IST
ಸ್ನೇಹಿತನ ಕತ್ತು ಕೊಯ್ದು ರಕ್ತ ಕುಡಿದ ಕಿರಾತಕ! ಬೆಚ್ಚಿಬಿದ್ದ ಚಿಂತಾಮಣಿ

ENTERTAINMENT:

ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ಪುಷ್ಪ ಚಿತ್ರ ನೋಡಿದ ಬಳಿಕ ಪಾರ್ಟ್ 2ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಚಿತ್ರದ ಬಳಿಕ ಅಲ್ಲು ಅರ್ಜುನ್ ಗೆ ಬಾಲಿವುಡ್ ನಿಂದಲೂ ಸಾಕಷ್ಟು ಆಫರ್ ಗಳು ಬರ್ತಿವೆ, ಆದ್ರೆ ಇದೀಗ ಮಗನ ಸಿನಿಮಾಗೆ ತಂದೆಯೇ ಅಡ್ಡಗಾಲಾಗಿದ್ದಾರಂತೆ.

ಟಾಲಿವುಡ್ ನ ಸ್ಟಾರ್ ನಟರಲ್ಲಿ ನಟ ಅಲ್ಲು ಅರ್ಜುನ್ ಕೂಡ ಒಬ್ಬರು. ಅಲ್ಲು ಅರ್ಜುನ್ ನಟನೆಯ ಸಾಕಷ್ಟು ಸಿನಿಮಾಗಳು ಈ ಹಿಂದೆ ಪರ ಭಾಷೆಯಲ್ಲಿ ತೆರೆಕಂಡಿವೆ. ಆದ್ರೆ ಹೇಳಿಕೊಳ್ಳುವಷ್ಟು ಜನಪ್ರಿಯತೆ ಸಿಕ್ಕಿರಲಿಲ್ಲ. ಆದರೆ ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್ ನಟನೆಯ ಹಳೆಯ ಸಿನಿಮಾಗಳಿಗೂ ಬೇಡಿಕೆ ಹೆಚ್ಚಿದೆ.

ಪುಷ್ಪ ಸಿನಿಮಾ ಹಿಂದಿ ಭಾಷೆಯಲ್ಲೂ ತೆರೆಕಂಡಿದ್ದು ಉತ್ತಮ ಕಲೆಕ್ಷನ್ ಮಾಡಿದೆ. ಇದೀಗ ಅಲ್ಲು ಅರ್ಜುನ್ ನಟನೆಯ, ಕಳೆದ ವರ್ಷ ತೆರೆಕಂಡ ವೈಕುಂಟಪುರಂಲೋ ಚಿತ್ರವನ್ನ ಹಿಂದಿಗೆ ಡಬ್ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ,. ಆದರೆ ಈ ಸಿನಿಮಾ ಬಿಡುಗಡೆ ಆಗದಂತೆ  ಸ್ವತಃ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತಡೆಯೊಡ್ಡುತ್ತಿದ್ದಾರಂತೆ.

ಅಲಾ ವೈಕುಂಟಪುರಂಲೋ ಸಿನಿಮಾದ ಹಿಂದಿ ಡಬ್ ಅನ್ನು ಜನವರಿ 26ರಂದು ರಿಲೀಸ್ ಮಾಡೋಕೆ ಸಿದ್ದತೆ ಮಾಡಿಕೊಳ್ಳಲಾಗಿದೆ, ಅಲಾ ವೈಕುಂಟಪುರಂಲೋ ಸಿನಿಮಾದ ಹಿಂದಿ ರಿಮೇಕ್ ಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದಾರೆ, ಹಿಂದಿ ರಿಮೇಕ್ ನ ಚಿತ್ರೀಕರಣ ಈಗಾಗಲೇ ಕೊನೆಯ ಹಂತದಲ್ಲಿದೆ. ತೆಲುಗು ಸಿನಿಮಾದಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ ಪಾತ್ರವನ್ನ ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಿರ್ವಹಿಸುತ್ತಿದ್ದಾರೆ., ಜೊತೆಗೆ ಪೂಜಾ ಹೆಗ್ಡೆ ಪಾತ್ರವನ್ನ ಕೃತಿ ಸೆನನ್ ನಿರ್ವಹಿಸುತ್ತಿದ್ದು, ಚಿತ್ರಕ್ಕೆ ಶೆಹಜಾದ್ ಎಂದು ಹೆಸರನ್ನ ಇಡಲಾಗಿದೆ.

ಅಲಾ ವೈಕುಂಟಪುರಂಲೋ ಹಿಂದಿ ರಿಮೇಕ್ ಇನ್ನೆನ್ನೂ ಕೆಲವೇ ದಿನಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ. ಅಲ್ಲಾ ವೈಕುಂಠಪುರಲೋ ಹಿಂದಿ ರಿಮೇಕ್ ಹಾಗೂ ಹಿಂದಿ ಡಬ್ಬಿಂಗ್ ಎರಡೂ ಒಟ್ಟೊಟ್ಟಿಗೆ ಬಿಡುಗಡೆಯಾದರೆ ರಿಮೇಕ್ ಸಿನಿಮಾ ನೆಲಕಚ್ಚಿ ಅಲ್ಲು ಅರ್ಜುನ ತಂದೆ ಅಲ್ಲು ಅರವಿಂದ್ ನಷ್ಟ ಅನುಭವಿಸೋ ಸಾಧ್ಯತೆ ಹೆಚ್ಚಿದೆ.

ಅಲಾ ವೈಕುಂಟಪುರಂಲೋ ಮೂಲ ತೆಲುಗು ಸಿನಿಮಾಗೆ ಅಲ್ಲು ಅರವಿಂದ್ ಬಂಡವಾಳ ಹೂಡಿದ್ದರು. ಅಲ್ಲು ಅರ್ಜುನ್ ಗೆ ಹಿಂದಿಯಲ್ಲಿ ಆ ವೇಳೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಹೀಗಾಗಿ ಅತಿ ಕಡಿಮೆ ಮೊತ್ತಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟ ಮಾಡಿದ್ದರು. ಇದೀಗ ರಿಮೇಕ್ ಹಾಗೂ ಡಬ್ಬಿಂಗ್ ಎರಡೂ ಚಿತ್ರಗಳು ಒಟ್ಟೊಟ್ಟಿಗೆ ರಿಲೀಸ್ ಆಗ್ತಿರೋದ್ರಿಂದ ಡಬ್ಬಿಂಗ್ ಚಿತ್ರಕ್ಕೆ ಸ್ಟೇ ತರೋಕೆ ಅಲ್ಲು ಅರವಿಂದ್ ಮುಂದಾಗಿದ್ದಾರೆ.

ಹೆಚ್ಚು ಓದಿದ ಸುದ್ದಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ

ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಘಟನೆ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್. ಅಶೋಕ್ ವಾಗ್ದಾಳಿ
Published 22 ಡಿಸೆಂಬರ್ 2023, 23:16

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ

ಧರ್ಮದ ವಿಷ ಬೀಜ ಬಿತ್ತುವುದೇ ಮಜವಾದಿ ಸಿದ್ದರಾಮಯ್ಯ ಗ್ಯಾರಂಟಿ: ಹಿಜಾಬ್ ವಿಚಾರಕ್ಕೆ ಬಿಜೆಪಿ ಕಿಡಿ
Published 22 ಡಿಸೆಂಬರ್ 2023, 23:14

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್

ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ತಳ್ಳಿ ಹರಕೆಯ ಕುರಿಯಾಗಿಸುವ, ಯಡಿಯೂರಪ್ಪ & ಸನ್ಸ್ ಕಂಪೆನಿ ಮುಗಿಸಲು ತಂತ್ರ-ಕಾಂಗ್ರೆಸ್
Published 31 ಮಾರ್ಚ್ 2023, 17:40

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ

ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು: ಸಾಹಿತಿ ಹರಿಹರ ಪ್ರಿಯ
Published 16 ಮಾರ್ಚ್ 2023, 14:45

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ

ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ
Published 16 ಮಾರ್ಚ್ 2023, 14:45

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ

ಅಮಿತಾಬ್ ಬಚ್ಚನ್ ರಿಗೆ ಭಾರತ ರತ್ನ: ಘೋಷಣೆ ಎತ್ತಿದ ಮಮತಾ ಬ್ಯಾನರ್ಜಿ
Published 16 ಮಾರ್ಚ್ 2023, 14:45

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!

ಕೇಸರಿ 'ಬಿಕಿನಿ' ಅಖಾಡಕ್ಕೆ ನಟ ಚೇತನ್ ಎಂಟ್ರಿ!
Published 16 ಮಾರ್ಚ್ 2023, 14:45

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್

ಮತದಾರರ ಪಟ್ಟಿ ಪರಿಷ್ಕರಣೆಗೆ 12 ಕೆಎಎಸ್​ ಅಧಿಕಾರಿಗಳ ನೇಮಕ: ತುಷಾರ್ ಗಿರಿನಾಥ್
Published 16 ಮಾರ್ಚ್ 2023, 14:45

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ

ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಖಚಿತ
Published 16 ಮಾರ್ಚ್ 2023, 14:45

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!

ನಾನು ರೈಲಿನಲ್ಲಿ ಯಾವತ್ತೂ ಟಿಕೆಟ್ ತಗೊಳ್ತಾ ಇರಲಿಲ್ಲ ಎಂದ ನಿತ್ಯಾನಂದ!
Published 16 ಮಾರ್ಚ್ 2023, 14:45

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ

ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ : ಸೌಭಗ್ಯ ಬಸವರಾಜನ್ ಪೊಲೀಸ್ ವಶಕ್ಕೆ
Published 16 ಮಾರ್ಚ್ 2023, 14:45

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ

ಬಿಜೆಪಿ ಸೇರಲು ಹಣದ ಆಮಿಷವೊಡ್ಡಿದ್ದ ವಿಜಯೇಂದ್ರ
Published 16 ಮಾರ್ಚ್ 2023, 14:45