ENTERTAINMENT:
ಬಾಲಿವುಡ್ ನಟ ವರುಣ್ ಧವನ್ ಅವರು ತಾವು ಪ್ರೀತಿಸುತ್ತಿದ್ದ ಗೆಳತಿ ನತಾಶಾ ದಲಾಲ್ ಅವರನ್ನು ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ವಿವಾಹವಾದರು. ಮತ್ತು ಈ ವಿವಾಹ ಸಮಾರಂಭದಲ್ಲಿ ನಟನ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಹಾಗಾಗಿ ನಟ ವರುಣ್ ಧವನ್ ಯಾಕೆ ಇಷ್ಟು ಸರಳವಾಗಿ ವಿವಾಹವಾದರೂ ಎಂಬ ಬೇಸರ ಅಭಿಮಾನಿಗಳಲಿತ್ತು.
ಈ ಬಗ್ಗೆ ಇತ್ತೀಚೆಗೆ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ನಟ, ನಾನು ಯಾವುದೇ ಸಮಾರಂಭವನ್ನು ಗ್ರ್ಯಾಂಡ್ ಆಗಿ ಮಾಡಲು ಇಷ್ಟಪಡುವುದಿಲ್ಲ. ನನ್ನ ಮದುವೆಗೆ ಸಾಕಷ್ಟು ವಯೋವೃದ್ಧರು ಬರುತ್ತಿದ್ದಾರೆ. ಹಾಗಾಗಿ ಎಲ್ಲರೂ ಸುರಕ್ಷಿತವಾಗಿರಬೇಕು ಎಂದು ಬಯಸುತ್ತೇನೆ. ಹಾಗಾಗಿ ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ವಿವಾಹವಾದೆ ಎಂಬುದಾಗಿ ತಿಳಿಸಿದ್ದಾರೆ.
ಅಲ್ಲದೇ ಅವರ ಪತ್ನಿ ನತಾಶಾ ಕೂಡ ಸರಳ ವಿವಾಹನ್ನು ಇಷ್ಟಪಡುತ್ತಿದ್ದರು. ಹಾಗೇ ಅವಳು ಗ್ಲಾಮರ್ ಗೆ ಒಡ್ಡಿಕೊಂಡಿಲ್ಲ. ಹಾಗಾಗಿ ಅವಳು ಕೂಡ ತಮ್ಮ ಮದುವೆಯನ್ನು ಖಾಸಗಿಯಾಗಿಡಲು ಆದ್ಯತೆ ನೀಡಿದಳು ಎಂದು ವರುಣ್ ತಿಳಿಸಿದ್ದಾರೆ.