ENTERTAINMENT:
ಕಚ್ಚಾ ಬಾದಮ್ ಹಾಡಿನಿಂದ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದ ಕಡ್ಲೆಕಾಯಿ ವ್ಯಾಪಾರಿ ಭುವನ್ ಬಡ್ಯಾಕರ್ ಕಾರು ಅಪಘಾತಗೊಂಡಿದ್ದು ಭುವನ್ ರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ಕಾರು ಅಪಘಾತವಾಗಿದ್ದು ಭುವನ್ ಬಡ್ಯಾಕರ್ ರನ್ನ ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತೀಚೆಗೆ ಭುವನ್ ಬಡ್ಯಾಕರ್ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದು ಕಾರು ಓಡಿಸುವುದನ್ನ ಕಲಿಯುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಸದ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭುವನ್ ಬಡ್ಯಾಕರ್ ಕಚ್ಚಾಬದಮ್ ಹಾಡಿನ ಮೂಲಕ ರಾತ್ರೊ ರಾತ್ರಿ ಇಂಟರ್ ನೆಟ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು.
ಭುವನ್ ಬದ್ಯಾಕರ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್ ನ ಕುರುಲ್ಜುರಿ ಗ್ರಾಮದ ದುಬ್ರಾಜ್ ಪುರ ಬ್ಲಾಕ್ ನ ನಿವಾಸಿಯಾಗಿದ್ದು ಪತ್ನಿ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯೊಂದಿಗೆ ಜೀವಿಸುತ್ತಿದ್ದಾರೆ. ಗುಜರಿ ಸಾಮಾನುಗಳು ಹಾಗೂ ಮುರಿದ ಗೃಹಪಯೋಗಿ ವಸ್ತುಗಳನ್ನು ಪಡೆದು ಅವುಗಳಿಗೆ ಪ್ರತಿಯಾಗಿ ಕಡಲೆಕಾಯಿಯನ್ನ ಮಾರಾಟ ಮಾಡುತ್ತಿದ್ದಾರೆ. ಕಡಲೆ ಕಾಯಿ ಮಾರಾಟ ಮಾಡುವ ವೇಳೆ ಹುಟ್ಟಿಕೊಂಡ ಕಚ್ಚ ಬದಾಮ್ ಹಾಡು ಇದೀಗ ಸಾಕಷ್ಟು ವೈರಲ್ ಆಗಿದ್ದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.