LIFESTYLE:
ಮದುವೆ ಅಂದರೆ ಎರಡು ಹೃದಯಗಳನ್ನು ಬೆಸೆಯುವ ಸಂಬಂಧ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀವಿ ಅಂದರೆ ನಮ್ಮಲ್ಲಿ ಇರುವ ಸ್ವತಂತ್ರ್ಯವನ್ನ ಕಳೆದಕೊಂಡಂತೆ. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿ ಇರುತ್ತದೆ. ಆದರೆ ಇಬ್ಬರು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕಾಗುತ್ತದೆ. ಮದುವೆ ನಂತರ ಹುಡುಗಿಯರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ನನ್ನ ಗಂಡ ಹಾಗೆ ಇರಬೇಕು, ಹೀಗೆ ಇರಬೇಕು ಎಂದು. ಆದರೆ ಇವರಿಬ್ಬರ ನಡುವೆ ಬಿರುಕು ಬಿಟ್ಟರೆ ಜೀವನವೇ ಅಲ್ಲೋಲ್ಲ-ಕಲ್ಲೋಲ್ಲ ಆಗುತ್ತದೆ. ಹೀಗಿರುವಾಗ ಪರಸ್ಪರ ಸರಿಯಾಗಿ ಜವಾಬ್ದಾರಿಗಳನ್ನು ಸ್ವೀಕರಿಸಿದರೆ ಆಗ ಖಂಡಿತವಾಗಿಯೂ ಇದು ದಾಂಪತ್ಯವನ್ನು ಕಾಪಾಡಲು ಸಾಧ್ಯವಾಗುವುದು. ದೀರ್ಘಕಾಲಿಕ, ಆರೋಗ್ಯಕಾರಿ ಸಂಬಂಧವನ್ನು ಹೇಗೆ ಕಾಪಾಡಬಹುದು ಎಂದು ತಿಳಿಯಿರಿ.
ಬದ್ಧತೆ
ಬದ್ಧತೆಯು ದೀರ್ಘಕಾಲಿಕವಾಗಿ ಸಂಬಂಧವನ್ನು ಕೊಂಡೊಯ್ಯಬಲ್ಲದು. ಜೀವನಕ್ಕೆ ಸಂಗಾತಿಯನ್ನು ಆಯ್ಕೆ ಮಾಡುವುದು ಹಾಗೂ ಜೀವನದ ಏಳುಬೀಳುಗಳಲ್ಲಿ ಅದನ್ನು ನಿಭಾಯಿಸಿಕೊಂಡು ಹೋಗುವುದು ಕೂಡ ಇಲ್ಲಿ ಮುಖ್ಯವಾಗಿರುವುದು.
ಬದ್ಧತೆಯಿಂದ ಸಂಗಾತಿಯ ಜತೆಗೆ ಸಂಸಾರ ನಡೆಸಬೇಕಾದ ಸಂದರ್ಭದಲ್ಲಿ ಮನಸ್ಸಿನಲ್ಲಿ ಹಲವಾರು ಬಗೆಯ ಸಂಶಯಗಳು ಮೂಡಬಹುದು. ಆದರೆ ಇದೆಲ್ಲವೂ ಸಂಸಾರದಲ್ಲಿ ತಾತ್ಕಾಲಿಕ ಎಂದು ತಿಳಿದು ಮುಂದುವರಿಯಬೇಕು.
ಪ್ರೀತಿ
ಇಂದಿನ ದಿನಗಳಲ್ಲಿ ಹೆಚ್ಚಿನ ದಾಂಪತ್ಯವು ಆರಂಭವಾಗುವುದು ಪ್ರೀತಿಯಿಂದ. ಆದರೆ ವಿವಾಹದ ಬಳಿಕ ಪ್ರೀತಿಯನ್ನು ಹಾಗೆ ಮುಂದುವರಿಸಿಕೊಂಡು ಹೋಗುವುದು ಅವರಿಗೆ ಕಷ್ಟವಾಗುವುದು.
ಸಂಗಾತಿಗೆ ಮೊದಲ ಆದ್ಯತೆ ನೀಡಿದ ಬಳಿಕ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಇರುವುದು ಮುಖ್ಯ. ಇಬ್ಬರ ನಡವಳಿಕೆ ಮತ್ತು ಅಭ್ಯಾಸಗಳನ್ನು ಸ್ವೀಕರಿಸಿಕೊಂಡು ಮುಂದುವರಿಯಬೇಕು. ಏನಾದರೂ ತಪ್ಪಾದರೆ ಆಗ ಅಲ್ಲಿ ಅವರನ್ನು ಕ್ಷಮಿಸಿ ಮುನ್ನಡೆಯುವುದು ಕೂಡ ಮುಖ್ಯವಾಗಿರುವುದು.
ಗೌರವ ನೀಡಿ
ಪ್ರೀತಿ ಎಷ್ಟೇ ಇದ್ದರೂ ಅಲ್ಲಿ ಗೌರವವು ಇಲ್ಲದೆ ಇದ್ದರೆ ಆ ಪ್ರೀತಿಗೆ ಯಾವುದೇ ಮೌಲ್ಯವು ಇರೋದಿಲ್ಲ. ಸಂಗಾತಿಯ ಗುಣಗಳು, ಆಲೋಚನೆಗಳು ಮತ್ತು ಸಾಮರ್ಥ್ಯವನ್ನು ಸ್ವೀಕರಿಸಿ, ಅದನ್ನು ಗೌರವಿಸುವುದು ಅತೀ ಅಗತ್ಯ.
ಪರಸ್ಪರರ ಮೇಲೆ ಗೌರವವಿದ್ದರೆ ಆಗ ಪರಸ್ಪರರ ಅಭಿಪ್ರಾಯಗಳನ್ನು ಸ್ವೀಕರಿಸುವರು. ಅದೇ ರೀತಿಯಲ್ಲಿ ಇದು ಸವಾಲು ಮತ್ತು ಭಿನ್ನಾಭಿಪ್ರಾಯವನ್ನು ದೂರ ಮಾಡಲು ಸಾಧ್ಯವಾಗಲಿದೆ.
ನಂಬಿಕೆ
ನಂಬಿಕೆ ಎನ್ನುವುದು ತುಂಬಾ ಸೂಕ್ಷ್ಮ ವಿಚಾರ ಎಂದು ಹೇಳಲಾಗುತ್ತದೆ. ಇದು ಗಾಜಿನಂತೆ, ಒಮ್ಮೆ ಒಡೆದುಹೋದರೆ ಅದನ್ನು ಮತ್ತೆ ಸರಿಪಡಿಸುವುದು ತುಂಬಾ ಕಷ್ಟ. ವೈವಾಹಿಕ ಜೀವನದಲ್ಲಿ ನಂಬಿಕೆ ಬೆಳೆಸಲು ಸಾಧ್ಯವಾಗುತ್ತದೆ.