LIFESTYLE:
ನಟಿ ಆಮಿ ಜಾಕ್ಸನ್ ಅವರು ಮಾರ್ಚ್ 2019ರಲ್ಲಿ ಬ್ಯೂ ಜಾರ್ಜ್ ಪನಾಯೊಟೌ ಅವರೊಂದಿಗೆ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುವುದಾಗಿ ಘೋಷಿಸಿದ್ದರು. ಬಳಿಕ ಅವರಿಬ್ಬರು ಮೇ 2019ರಲ್ಲಿ ನಿಶ್ಚಿತಾರ್ಥ ಮಾಡಕೊಂಡಿದ್ದರು. ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಬಳಿಕ ಮದುವೆ ವಿಳಂಬವಾಗಿದೆ. ಆದರೆ ಇವರಿಬ್ಬರ ಸಂಬಂಧ ಮುರಿದುಬಿದ್ದಿದೆ ಎಂಬ ಅನುಮಾನ ಶುರುವಾಗಿದೆ.
ಯಾಕೆಂದರೆ ಆಮಿ ಜಾಕ್ಸನ್ ಅವರ ಇನ್ ಸ್ಟಾಗ್ರಾಂನಲ್ಲಿ ಅವರ ಗೆಳೆಯ ಬ್ಯೂ ಜಾರ್ಜ್ ಪನಾಯೊಟೌ ಅವರ ಹಲವಾರು ಅಮೂಲ್ಯ ಚಿತ್ರಗಳು ಕಾಣೆಯಾಗಿದೆ. ಜಾರ್ಜ್ ಜೊತೆಗೆ ಬೇಬಿ ಇರುವ ಫೋಟೊವನ್ನು ನಟಿ ಡಿಲೀಟ್ ಮಾಡಿದ್ದಾರೆ. 2020ರಲ್ಲಿ ತಮ್ಮ ಮಗುವಿನ ಮೊದಲ ಫಾದರ್ಸ್ ಡೇ ಪೋಸ್ಟ್ ಅನ್ನು ಕೂಡ ಅವರ ಖಾತೆಯಿಂದ ಡಿಲೀಟ್ ಮಾಡಲಾಗಿದೆ.
ಅಲ್ಲದೇ ಆಮಿ ಹಾಗೂ ಅವರ ಗೆಳೆಯ ಜಾರ್ಜ್ ಜಾಂಬಿಯಾದಲ್ಲಿ ನಡೆಸಿದ ಖಾಸಗಿ ಭೋಜನಕೂಟದ ಫೋಟೊ, ಸೂರ್ಯಾಸ್ತವನ್ನು ಆನಂದಿಸಿದ ಕ್ಷಣದ ಫೋಟೊ, ನಿಶ್ಚಿತಾರ್ಥದ ಫೋಟೊ, ಮುಂತಾದವುಗಳನ್ನು ಈ ಹಿಂದೆ ಆಮಿ ಜಾಕ್ಸನ್ ಪೋಸ್ಟ್ ಮಾಡಿದ್ದರು. ಅವುಗಳನ್ನು ಕೂಡ ಅವರು ಇನ್ ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದಾರೆ. ಹಾಗಾಗಿ ನಟಿ ಮತ್ತು ಅವರ ಗೆಳೆಯನ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ಅನುಮಾನ ಹಲವಲ್ಲಿ ಕಾಡುತ್ತಿದೆ.