LIFESTYLE:
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಆಲೂಗಡ್ಡೆ 2
ಬ್ರೆಡ್ ಪೀಸ್ಗಳು 4
ಜೀರಿಗೆ 1 ಚಮಚ
ಕೊತ್ತಂಬರಿ ಬೀಜ 1 ಚಮಚ
ಕೊತ್ತಂಬರಿ ಸೊಪ್ಪು ಅಗತ್ಯಕ್ಕೆ ತಕ್ಕಷ್ಟು
ಕಡಲೆ ಹಿಟ್ಟು 2 ಕಪ್
ಒಣ ಮಾವಿನಕಾಯಿ ಪುಡಿ 2 ಚಮಚ
ಕಾಶ್ಮೀರ ಮೆಣಸು 2 ಚಮಚ (ಪುಡಿ ಮಾಡಿದ್ದು)
ಹಸಿಮೆಣಸಿನಕಾಯಿ ಅಗತ್ಯಕ್ಕೆ ತಕ್ಕಷ್ಟು
ಶುಂಠಿ ಸ್ವಲ್ಪ
ಉಪ್ಪು ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ: ಮೊದಲಿಗೆ ಬಾಣಲಿಯಲ್ಲಿ ಜೀರಿಗೆ ಮತ್ತು ಕೊತ್ತಂಬರಿಯನ್ನು ಹುರಿದುಕೊಂಡು ಆರಿದ ನಂತರ ಒರಟಾಗಿ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಹಸಿಮೆಣಸಿನ ಕಾಯಿ, ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ ಬೀಜ, ಒಣ ಮಾವಿನ ಕಾಯಿ ಪುಡಿ, ಕಾಶ್ಮೀರಿ ಮೆಣಸುಗಳನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಕಡ್ಲೇ ಹಿಟ್ಟು, ಓಮ್ಕಾಳು, ಸ್ವಲ್ಪ ಉಪ್ಪು ಮತ್ತು ಮೆಣಸಿನ ಪುಡಿ ಹಾಗೂ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈಗ ಬ್ರೆಡ್ ಸ್ಲೈಸ್ ನಲ್ಲಿ ಆಲೂಗಡ್ಡೆಯ ಮಿಶ್ರಣವನ್ನು ಚೆನ್ನಾಗಿ ಹರಡಿ ಅದರ ಮೇಲೆ ಇನ್ನೊಂದು ಸ್ಲೈಸ್ ಮುಚ್ಚಿರಿ. ನಂತರ ಸ್ಲೈಸ್ ಅನ್ನು ಕಡ್ಲೇ ಹಿಟ್ಟಿನಲ್ಲಿ ಅದ್ದಿ ಚೆನ್ನಾಗಿ ಕಾದಿರುವ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಬ್ರೆಡ್ ಪಕೋಡ ಸವಿಯಲು ಸಿದ್ದ.